Ticker

6/recent/ticker-posts

Ad Code

Responsive Advertisement

ಕೋವಿಡ್ ಲಸಿಕೆಗೆ ಹೆದರಿ ಮನೆಗೆ ಬೀಗ ಹಾಕಿ ಪರಾರಿಯಾದರು!

 


ಮಡಿಕೇರಿ: ಕುಶಾಲನಗರ ಸಮೀಪದ ಬೈದಗೊಟ್ಟದಲ್ಲಿನ ದಿಡ್ಡಳ್ಳಿ ಪುನರ್ವಸತಿ ಸ್ಥಳದಲ್ಲಿ ಅನೇಕ ಬುಡಕಟ್ಟು ಜನಾಂಗದ ಮಂದಿ ತಮ್ಮ ಮನೆ ಬಾಗಿಲುಗಳಿಗೆ ಬೀಗ ಹಾಕಿಕೊಂಡು ಅಲ್ಲಿಂದ ಕಾಲು ಕಿತ್ತಿದ್ದರು. ಇದಕ್ಕೆ ಕಾರಣ ಆರೋಗ್ಯ ಇಲಾಖೆ ಗುರುವಾರ ವಿಶೇಷ ಕೋವಿಡ್ -19 ಲಸಿಕೆ ಅಭಿಯಾನಕ್ಕೆ ಚಾಲನೆ ನೀಡುವುದೇ ಆಗಿತ್ತು.  200 ಕ್ಕೂ ಹೆಚ್ಚು ನಿವಾಸಿಗಳ ಪೈಕಿ ಕೇವಲ 35  ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ. ಆದಾಗ್ಯೂ, ತಾಲೂಕು ಆರೋಗ್ಯ ಅಧಿಕಾರಿ, ಪುನರ್ವಸತಿ ಸ್ಥಳದಲ್ಲಿನ ಪ್ರತಿಯೊಬ್ಬರಿಗೆ  ಲಸಿಕೆ ಹಾಕಲು ಇಲಾಖೆ ಪ್ರಯತ್ನಿಸುತ್ತಿದೆ ಎಂದು ಭರವಸೆ ನೀಡಿದರು.

ಬೈದಗೊಟ್ಟ ವ್ಯಾಪ್ತಿಯ ಬುಡಕಟ್ಟು ಜನಾಂಗದ ಜನರು ಎರಡನೇ ಅಲೆ ನಂತರ ಸಾಕಷ್ಟು ಮೂಡನಂಬಿಕೆಗಳ ಕಾರಣ ಸುದ್ದಿಯಾಗಿದ್ದರು. ಕೋವಿಡ್ -19 ಗಾಗಿ ಪರೀಕ್ಷೆಗಳನ್ನು ಮಾಡಿಸಿಕೊಳ್ಳಲು  ಅವರು ಒಪ್ಪಲಿಲ್ಲ, ಏಕೆಂದರೆ ತಮ್ಮ ಬುಡಕಟ್ಟು ದೇವತೆ ನಮ್ಮನ್ನು ಕ್ರಾಮಿಕ ರೋಗದಿಂದ ರಕ್ಷಿಸುತ್ತಾನೆ ಎಂದು ಅವರು ಹೇಳಿದ್ದಾರೆ. ಇದನ್ನು ಅನುಸರಿಸಿ, ಆರೋಗ್ಯ ಇಲಾಖೆಯು ಹಲವಾರು ಜಾಗೃತಿ ಅಭಿಯಾನಗಳನ್ನು ನಡೆಸಿತು.



Post a Comment

0 Comments

Ad Code

Responsive Advertisement