ಜಮ್ಮು : ಪವಿತ್ರ ಅಮರನಾಥ್ ಯಾತ್ರೆ ಆರಂಭವಾಗಿದ್ದು ಆನ್‍ಲೈನ್ ಆರತಿ, ವರ್ಚುಯಲ್ ದರ್ಶನಕ್ಕೆ ಆದ್ಯತೆ ನೀಡಲಾಗಿದೆ. ಇಂದಿನಿಂದ ಆಗಸ್ಟ್ 22ರವರೆಗೂ ಅಮರನಾಥ ಯಾತ್ರೆ ಚಾಲ್ತಿಯಲ್ಲಿರಲಿದೆ.
ಭಕ್ತಾಧಿಗಳು ನೇರವಾಗಿ ಪವಿತ್ರ ಯಾತ್ರೆಗೆ ಬರುವುದನ್ನು ನಿಷೇಧಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್ ಮನೋಜ್‍ಸಿನ್ಹಾ ಇಂದು ಪೂಜೆ ಮಾಡುವ ಮೂಲಕ ಯಾತ್ರೆಗೆ ಚಾಲನೆ ನೀಡಿದರು. ಪ್ರತಿದಿನ ಬೆಳಗ್ಗೆ 6 ಗಂಟೆ ಮತ್ತು ಸಂಜೆ 5 ಗಂಟೆಗೆ ಆರತಿಯನ್ನು ಆನ್‍ಲೈನ್ ಮೂಲಕ ದರ್ಶನ ಮಾಡಲಾಗುವುದು.
ಶೈರಿನ್ ವೆಬ್‍ಸೈಟ್‍ನಲ್ಲಿ ತಲಾ ಅರ್ಧಗಂಟೆ ಆನ್‍ಲೈನ್ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಅಮರನಾಥ ಶೈರಿನ್ ಮಂಡಳಿಯ ಸಿಇಒ ನಿತೀಶ್‍ಕುಮಾರ್ ತಿಳಿಸಿದ್ದಾರೆ. ಕೋವಿಡ್ ಕಾರಣದಿಂದಾಗಿ ಕಳೆದ ವರ್ಷ ಅಮರನಾಥ ಯಾತ್ರೆಯನ್ನು ರದ್ದುಗೊಳಿಸಲಾಗಿತ್ತು,
ಈ ವರ್ಷ ಕೂಡ ನೇರವಾಗಿ ಯಾತ್ರೆಗೆ ಅವಕಾಶ ಕಲ್ಪಿಸದೆ ಆನ್‍ಲೈನ್ ಮೂಲಕವೇ ದರ್ಶನ ಮತ್ತು ಆರತಿ ಪಡೆಯಲು ಅವಕಾಶ ನೀಡಲಾಗಿದೆ.
0 Comments