ನವ ದೆಹಲಿ (ಜೂನ್ 16); ಕೊರೋನಾ ಎರಡನೇ ಅಲೆಗೆ ಇಡೀ ದೇಶ ತತ್ತರಿಸಿದೆ. ಅದರಲ್ಲೂ ರಾಷ್ಟ್ರ ರಾಜಧಾನಿ ದೆಹಲಿ ಸಾಕಷ್ಟು ಅನಾಹುತಗಳಿಗೆ ಸಾಕ್ಷಿಯಾಗಿತ್ತು. ಸಾವಿರಾರು ಜನ ಮಾರಕ ವೈರಸ್ಗೆ ಸಾವಿಗೀಡಾದ ಪರಿಣಾಮ ಲಾಕ್ಡೌನ್ ಸಹ ಘೋಷಿಸಲಾಗಿತ್ತು. ಇದೀಗ ದೆಹಲಿಯಲ್ಲಿ ಪ್ರಕರಣಗಳ ಸಂಖ್ಯೆ ಇಳಿಮುಖವಾಗು ತ್ತಿದ್ದು, ದೆಹಲಿ ಸಹಜ ಸ್ಥಿತಿಗೆ ಮರಳುತ್ತಿದೆ. ಆದರೆ, ತಜ್ಞರು ಜುಲೈ ಅಂತ್ಯಕ್ಕೆ ಕೊರೋನಾ ಮೂರನೇ ಅಲೆ ಅಬ್ಬರಿಸುವ ಮುನ್ಸೂಚನೆ ನೀಡಿದ್ದಾರೆ. ಹೀಗಾಗಿ ಮೂರನೇ ಕೊರೋನಾ ಅಲೆಯನ್ನು ಎದುರಿಸಲು ಸಿಎಂ ಅರವಿಂದ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಈಗಿನಿಂದಲೇ ಸಜ್ಜಾಗುತ್ತಿದೆ. ಇದರ ಭಾಗವಾಗಿ ವೈದ್ಯರು ಮತ್ತು ದಾದಿಯರಿಗೆ ಸಹಾಯ ಮಾಡಲು 5,000 ಯುವಜನರಿಗೆ ವೈದ್ಯಕೀಯ ತರಬೇತಿ ನೀಡಿ ಅಣಿಗೊಳಿಸಲು ಮುಂದಾಗಿದೆ.
"ಯುವ ಜನರನ್ನು 500 ಅಭ್ಯರ್ಥಿಗಳ ಬ್ಯಾಚ್‌ಗಳಾಗಿ ವಿಂಗಡಿಸಿ ಜೂನ್ 28ರಿಂದ ತರಬೇತಿಯನ್ನು ಪ್ರಾರಂಭಿಸ ಲಾಗುವುದು. ಆರೋಗ್ಯ ಸಹಾಯಕರು ಅಥವಾ ಸಮುದಾಯ ಶುಶ್ರೂಷಾ ಸಹಾಯಕರನ್ನಾಗಿ ಕೆಲಸ ಮಾಡಲು ಯುವಜನರಿಗೆ ಎರಡು ವಾರಗಳ ಕಾಲ ನರ್ಸಿಂಗ್ ಮತ್ತು ಜೀವ ರಕ್ಷಣೆಯ ಮೂಲ ತರಬೇತಿ ನೀಡಲಾಗುವುದು. ಮುಂದಿನ ಕೊರೋನಾ ಅಲೆ ದಾಳಿ ಮಾಡುವುದ ರೊಳಗಾಗಿ ಯುವ ಜನರನ್ನು ವೈದ್ಯಕೀಯ ಸೇವೆಗೆ ಅಣಿಗೊಳಿ ಸಲಾಗುವುದು" ಎಂದು ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.
"ಈ ಕ್ರಮವು ಕೋವಿಡ್‌ನ ಮೂರನೇ ಅಲೆಯನ್ನು ಎದುರಿಸುವುದಕ್ಕಾಗಿ ನಮ್ಮ ಸಿದ್ಧತೆಯನ್ನು ಬಲಪಡಿಸುತ್ತದೆ ಎಂದು ನಾನು ನಂಬುತ್ತೇನೆ. ಈಗಾಗಲೇ ಮೂರನೇ ಅಲೆ ಆರಂಭವಾಗಿರುವ ಇಂಗ್ಲೆಂಡ್ ನಂತಹ ದೇಶಗಳ ಅನುಭವಗಳಿಂದ ಕಲಿಯುವುದು ಮತ್ತು ಸಂಪೂರ್ಣವಾಗಿ ಸಿದ್ಧವಾಗುವುದು ನಮ್ಮ ಉದ್ದೇಶ" ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
"3ನೇ ಅಲೆಯಲ್ಲಿ ಕೆಲಸ ಮಾಡುವ ಯುವಜನರಿಗೆ ಮೂಲಭೂತ ಶುಶ್ರೂಷೆ, ಅರೆವೈದ್ಯಕೀಯ, ಜೀವ ಉಳಿಸುವಿಕೆ ಪ್ರಥಮ ಚಿಕಿತ್ಸಾ, ಮನೆ ಆರೈಕೆ, ಮಾದರಿ ಸಂಗ್ರಹ, ಆಮ್ಲಜನಕ ಮತ್ತು ಸಿಲಿಂಡರ್‌ಗಳ ಕಾರ್ಯಾಚರಣೆ ಮತ್ತು ಇತರ ವೈದ್ಯಕೀಯ ಕಾರ್ಯಗಳ ಬಗ್ಗೆ ತರಬೇತಿ ನೀಡಲಾಗುವುದು.
ಕೊರೋನಾ 3ನೇ ಅಲೆಯನ್ನು ಎದುರಿಸಲು ಆಮ್ಲಜನಕ ಸ್ಥಾವರಗಳು, ಆಮ್ಲಜನಕ ಸಾಂದ್ರಕಗಳು, ಆಮ್ಲಜನಕ ಸಿಲಿಂಡರ್‌ಗಳು ಮತ್ತು ಆಮ್ಲಜನಕ ಸಂಗ್ರಹ ಟ್ಯಾಂಕ್‌ಗಳನ್ನು ಹೊಂದಿಸಿಕೊಳ್ಳಲು ದೆಹಲಿ ಸರ್ಕಾರ ಈಗಾಗಲೇ ಸಿದ್ಧತೆಗಳನ್ನು ಕೈಗೊಂಡಿದೆ" ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

0 Comments