ಬೆಂಗಳೂರು(ಜೂ.1): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜನರು ಎಷ್ಟು ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ ಎಂಬುದಕ್ಕೆ ಈಗ ಸಂಗ್ರಹವಾಗಿರುವ ದಂಡವೇ ಸಾಕ್ಷಿಯಾಗಿದೆ. ಕೊರೋನಾಗೆ ಡೋಂಟ್ ಕೇರ್ ಎಂದು, ಮಾಸ್ಕ್ ಹಾಕದೇ ಬೀದಿಗಿಳಿದವರಿಗೆ ಪೊಲೀಸರು ದಂಡದ ಬಿಸಿ ಮುಟ್ಟಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡದೆ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗುತ್ತಿದೆ.
ಮಾಸ್ಕ್ ಹಾಕದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕೋಟಿ ಕೋಟಿ ದಂಡ ಪಾವತಿಸಿದ್ದಾರೆ ಬೆಂಗಳೂರಿನ ಜನರು. ಮಾಸ್ಕ್ ಮತ್ತು ಸಾಮಾಜಿಕ ಅಂತರ ಉಲ್ಲಂಘನೆಗೆ ದಂಡ ವಿಧಿಸಲು ಆರಂಭಿಸಿದ ದಿನದಿಂದ ಮಾರ್ಷಲ್ಗಳು ವಿಧಿಸಿದ ದಂಡದ ಮೊತ್ತ ಬರೋಬ್ಬರಿ 11,43,44650 ರೂ.ಗಳಾಗಿವೆ. ಮೇ 2020 ರಿಂದ ಮೇ 2021ರವರೆಗಿನ ದಂಡದ ಮೊತ್ತ ಇದಾಗಿದೆ. ಆರಂಭದಿಂದ ದಂಡದ ರೂಪದಲ್ಲಿ ಬೆಂಗಳೂರಿಗರು ಪಾವತಿಸಿದ್ದು 11 ಕೋಟಿ ರೂಪಾಯಿ.
ಮೇ-2020 ರಿಂದ ಮೇ 2021ರವರೆಗೆ ಮಾಸ್ಕ್ ಉಲ್ಲಂಘನೆ ಮಾಡಿ ದಂಡ ಪಾವತಿಸಿದವರ ಸಂಖ್ಯೆ 453561 ಮಂದಿ. 453561 ಮಂದಿಯಿಂದ ವಸೂಲಾದ ದಂಡ 108159247 ರೂಪಾಯಿ. ಮೇ 2020ರಿಂದ ಮೇ 2021ರವರೆಗೆ ಸಾಮಾಜಿಕ ಅಂತರ ಉಲ್ಲಂಘನೆ ಮಾಡಿದವರು 27421 ಮಂದಿ. 27421 ಮಂದಿಯಿಂದ ವಸೂಲಾದ ದಂಡದ ಮೊತ್ತ 6185402 ರೂಪಾಯಿ. ಮಾಸ್ಕ್ ಮತ್ತು ಸಾಮಾಜಿಕ ಅಂತರ ಉಲ್ಲಂಘನೆ ಮಾಡಿ ದಂಡ ಪಾವತಿಸಿದವರ ಒಟ್ಟು ಸಂಖ್ಯೆ 480982. 480982 ಮಂದಿಯಿಂದ ವಸೂಲಾದ ಒಟ್ಟ ದಂಡದ ಮೊತ್ತ 11,43,44650 ರೂ.
ಮೇ-20 - 428 - 209287
ಜೂನ್-20 - 35711 - 7396834
ಜುಲೈ-20 - 47459 - 9779171
ಆಗಸ್ಟ್-20 - 24864 - 5297594
ಸೆಪ್ಟೆಂಬರ್-20 - 37297 - 8053708
ಅಕ್ಟೋಬರ್-20 - 56318 - 14901425
ನವೆಂಬರ್-20 - 51633 - 12872923
ಡಿಸೆಂಬರ್-20 - 76178 - 18966053
ಜನವರಿ-21 - 38979 - 9614067
ಫೆಬ್ರವರಿ-21 - 25269 - 6281952
ಮಾರ್ಚ್-21 - 25268 - 6281738
ಏಪ್ರಿಲ್-21 - 24989 - 6211996
ಮೇ-21 - 9170 - 2292500
ಒಟ್ಟು - 453561 - 108159247
ಮೇ 2020 ರಿಂದ ಮೇ 2021ರವರೆಗೆ ಸಾಮಾಜಿಕ ಅಂತರ ಉಲ್ಲಂಘನೆ ಮಾಡಿ ದಂಡ ಪಾವತಿಸಿದವರ ಡಿಟೇಲ್ಸ್
ತಿಂಗಳು - ಪ್ರಕರಣಗಳ ಸಂಖ್ಯೆ - ದಂಡ ರೂ.ಗಳಲ್ಲಿ
ಮೇ-20 - 0 - 0
ಜೂನ್-20 - 1385 - 277817
ಜುಲೈ -20 - 7620 - 1726461
ಆಗಸ್ಟ್-20 - 3454 - 682749
ಸೆಪ್ಟೆಂಬರ್-20 - 2128 - 427823
ಅಕ್ಟೋಬರ್-20 - 4956 - 1363492
ನವೆಂಬರ್-20 - 2363 - 590838
ಡಿಸೆಂಬರ್-20 - 1588 - 395892
ಜನವರಿ-21 - 1435 - 97775
ಫೆಬ್ರವರಿ-21 - 105 - 26263
ಮಾರ್ಚ್-21 - 224 - 56017
ಏಪ್ರಿಲ್-21 - 1367 - 341775
ಮೇ-21 - 794 - 198500
ಒಟ್ಟು - 27421 - 6185402
0 Comments