ಗೂಗಲ್ ಪೇ (Google Pay) ತನ್ನ ಅಪ್ಲಿಕೇಶನ್‌ನಲ್ಲಿ ಪಾವತಿ ವಿಧಾನಗಳನ್ನು ಹೆಚ್ಚಿಸುತ್ತಿದೆ. ಇದು UPI(Unified Payment Interface) ನೊಂದಿಗೆ ಆರಂಭವಾಗಿತ್ತು. ಇದರ ನಂತರ ಬಳಕೆದಾರರಿಗೆ ತಮ್ಮ ಕ್ರೆಡಿಟ್ ಕಾರ್ಡ್‌ಗಳನ್ನು ಅಪ್ಲಿಕೇಶನ್‌ಗೆ ಸೇರಿಸಲು ಅಪ್ಲಿಕೇಶನ್ ಅನುಮತಿಸಿದೆ. ಈಗ ಕಂಪನಿಯು (Google) ಶೀಘ್ರದಲ್ಲೇ ತನ್ನ ಪಾವತಿ ಅಪ್ಲಿಕೇಶನ್‌ನಲ್ಲಿ NFC ಬಳಸಿ ಪಾವತಿಯನ್ನು ಪ್ರಾರಂಭಿಸುವ ಸಾಧ್ಯತೆ ಇದೆ.
NFC ಸಂಪರ್ಕ ರಹಿತ ಪೇಮೆಂಟ್ ಮಾಡುವ ಅನುಮತಿ ನೀಡುತ್ತದೆ. ಇದರಲ್ಲಿ ಬಳಕೆದಾರರಿಗೆ ತಮ್ಮ ಕಾರ್ಡ್ ಸ್ವೈಪ್ ಮಾಡುವ ಅವಶ್ಯಕತೆ ಬೀಳುವುದಿಲ್ಲ. ಬಳಕೆದಾರರು ಕೇವಲ ತಮ್ಮ NFC ಕ್ಷಮತೆ ಹೊಂದಿರುವ ಡಿವೈಸ್ ಅನ್ನು POS ಯಂತ್ರದ ಬಳಿ ಇಟ್ಟು ವ್ಯವಹಾರವನ್ನು ಅಧಿಕೃತಗೊಳಿಸುವ ಅವಶ್ಯಕತೆ ಇದೆ.
Android Police ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಗೂಗಲ್ ಪೆ ಶೀಘ್ರದಲ್ಲಿಯೇ ಒಂದು NFC ಸೇವೆ ಆರಂಭಿಸುವ ಸಾಧ್ಯತೆ ಇದ್ದು, ಇದು ಹೇಗೆ ಕಾರ್ಯನಿರ್ವಹಿಸಲಿದೆ ಎಂಬುದನ್ನು ಸಪೋರ್ಟ್ ಪೇಜ್ ಗೆ ತಿಳಿಸಿದೆ.
ಸಪೋರ್ಟ್ ಪೇಜ್ ಪ್ರಕಾರ, ಬಳಕೆದಾರರು ಪೇಮೆಂಟ್ ಯಂತ್ರದ ಮೇಲೆ ತಮ್ಮ ಫೋನ್ ಟ್ಯಾಪ್ ಮಾಡಿದಾಗ, ಗೂಗಲ್ ಪೆ (Google Pay) ಆಪ್ ಸ್ವಯಂಚಾಲಿತವಾಗಿ ತೆರೆದುಕೊಳ್ಳಲಿದೆ ಮತ್ತು ಬಳಕೆದಾರರು ತಮ್ಮ ಹಣ ಪಾವತಿಗಾಗಿ 'Proceed' ಆಯ್ಕೆಯ ಮೇಲೆ ಕ್ಲಿಕ್ಕಿಸಬೇಕಾಗಲಿದೆ. ಪ್ರಸ್ತುತ ಕೇವಲ ಪಾಯಿನ್ ಲೈನ್ ಟರ್ಮಿನಲ್ ಗಳು ಮಾತ್ರ NFC ಆಪ್ಶನ್ ಸಪೋರ್ಟ್ ಮಾಡುತ್ತವೆ.

0 Comments