Ticker

6/recent/ticker-posts

Ad Code

Responsive Advertisement

ಮೊಮ್ಮಗನಿಗೆ ಕರೋನಾ ತಗುಲದಿರಲಿ ಎಂದು ಅಜ್ಜ-ಅಜ್ಜಿ ಆತ್ಮಹತ್ಯೆ

 ಕರೋನಾ  ಮಹಾಮಾರಿಗೆ ಹೆದರಿ ವೃದ್ಧ ದಂಪತಿಗಳು ಚಲಿಸುವ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ. 

ವಾಸ್ತವವಾಗಿ ಇತ್ತೀಚೆಗಷ್ಟೇ ಕರೋನಾ ಸೋಂಕಿಗೆ ಒಳಗಾಗಿದ್ದ ಈ ವೃದ್ಧ ದಂಪತಿ ತಮ್ಮಿಂದ ತಮ್ಮ ಸೊಸೆ ಮತ್ತು ಮೊಮ್ಮಗನಿಗೆ ಕರೋನಾ ಸೋಂಕು ಹರಡಬಹುದು ಎಂಬ ಭಯದಿಂದಾಗಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

75 ವರ್ಷದ ಹಿರಾಲಾಲ್ ಬೈರ್ವಾ ಮತ್ತು ಅವರ 70 ವರ್ಷದ ಪತ್ನಿ ಶಾಂತಿಬಾಯಿ ಅವರ ಅವರ ಮಗ ಎಂಟು ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಸದ್ಯ ಅವರು ತಮ್ಮ 18 ವರ್ಷದ ಮೊಮ್ಮಗ ಮತ್ತು ಸೊಸೆ ಜೊತೆಗೆ ನಗರದ ಪುರೋಹಿತ್ ಜಿ ಅವರ ತಪ್ರಿ ಪ್ರದೇಶದಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಏಪ್ರಿಲ್ 29 ರಂದು ಈ ಹಿರಿಯ ದಂಪತಿಗಳಿಗೆ ಸೋಂಕು  ದೃಢಪಟ್ಟಿತ್ತು . ಅಂದಿನಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ ಎಂದು ರೈಲ್ವೆ ಕಾಲೋನಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರಮೇಶ್ ಚಂದ್ ಶರ್ಮಾ ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಕೆ ಮುಂದುವರೆಸಿದ್ದು ಸ್ಥಳದಲ್ಲೇ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ. ಇದರ ಹೊರತಾಗಿಯೂ ನಮ್ಮ ತನಿಖೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.


Post a Comment

0 Comments

Ad Code

Responsive Advertisement