Ticker

6/recent/ticker-posts

Ad Code

Responsive Advertisement

ಧಾರ್ಮಿಕ ಮತ್ತು ಸಾಮಾಜಿಕ ಸೇವಾ ನಿರತ ಶ್ರೀ.ಕೆ ಬಿ ಶಂಕ್ರೇಗೌಡರು

ಕುಣಿಗಲ್ ಸಮೀಪದ ಕುಪ್ಪೆ ಎಂಬ ಊರಿನ ಮೂಲದವರಾದ ಶ್ರೀ.ಕೆ ಬಿ ಶಂಕ್ರೇಗೌಡರು ವಿಜಯಾ ಬ್ಯಾಂಕಿನ ಸೇವೆಯಲ್ಲಿದ್ದಾರೆ.ಈಗ ಆ ಬ್ಯಾಂಕು ವಿಲೀನವಾಗಿದ್ದರೂ ಇವರು ವಿಜಯಾ ಬ್ಯಾಂಕಿನ   ಹಲವಾರು ಶಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಇವರಿಗೆ ಧಾರ್ಮಿಕ ಮತ್ತು ಸಾಮಾಜಿಕ ಸೇವೆಗಳಲ್ಲಿ ಸ್ವಯಂ ಸೇವಕರಾಗಿ ತೊಡಗಿಸಿಕೊಳ್ಳುವುದರಲ್ಲಿ ಮಹದಾನಂದ.ನನಗೆ ಇವರು ಪರಿಚಯವಾದ ದಿನಗಳಲ್ಲಿ ಇವರು ಯಶವಂತಪುರದ ಗಾಯತ್ರಿ ದೇವಸ್ಥಾನದ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದನ್ನು ನೋಡಿದ್ದೆ.ಬ್ಯಾಂಕಿನ ಕೆಲಸ ಮುಗಿದ ಮೇಲೆ ಸಂಜೆ ದೇವಸ್ಥಾನಕ್ಕೆ ಬಂದು ಸಂಕಷ್ಟಿ,ರಜಾ ದಿನಗಳಲ್ಲಿ ಸತ್ಯನಾರಾಯಣ ಪೂಜೆ,ಕೋಟಿ  ಗಾಯತ್ರಿ ಜಪ,ಸಾಮೂಹಿಕ ವಿವಾಹ ಮೊದಲಾದ ಕಾರ್ಯಕ್ರಮಗಳಲ್ಲಿ ಸ್ವಯಂ ಇಚ್ಛೆಯಿಂದ ಸ್ವಯಂ ಸೇವಕರಾಗಿ ತೊಡಗಿಸಿಕೊಂಡಿದ್ದರು.ನಾನು ಗಮನಿಸಿದಂತೆ ಎಲೆ ಮರೆಯ ಕಾಯಿಯಂತೆ ಇವರು ಎಲ್ಲೇ ಇದ್ದರೂ ಸದಾ ಸೇವೆ ಸಲ್ಲಿಸುವ ಮನೋಭಾವದವರು. 

ದೈವಭಕ್ತಿ ಇದ್ದವರಲ್ಲಿ ಸಮಾಜಕ್ಕೆ ಏನಾದರು ಸೇವೆ ಮಾಡಬೇಕು ಎಂಬ ಸಂಕಲ್ಪವಿರುತ್ತದೆ.ಅದೇ ಶ್ರೀಯುತ.ಕೆ ಬಿ ಶಂಕ್ರೇಗೌಡರ ಮೂಲ ಪ್ರೇರಣೆ.ಕೊರಟಗೆರೆ ಸಮೀಪ ಸಿದ್ಧರಬೆಟ್ಟದ ತಪ್ಪಲಿನ ಭಾಗದಲ್ಲಿ ಬರುವ ಜುಂಜುರಾಮನ ಹಳ್ಳಿಯಲ್ಲಿರುವ ಶನೈಶ್ಚರ ಸ್ವಾಮಿ ದೇವಸ್ಥಾನದಲ್ಲಿ ಇವರಿಗೆ ಅಪಾರ ನಂಬಿಕೆ.ಆಗಾಗ ಹೋಗಿ ಬಂದು ಬದುಕಿನಲ್ಲಿ ಸಾಕಷ್ಟು ಸಹಾಯವಾಯಿತು.ಒಳ್ಳೆಯ ಕೆಲಸಗಳನ್ನು ಮಾಡಬೇಕು ಎಂದು ಸದಾ ಎನಿಸುತ್ತಿರುತ್ತದೆ ಎಂದು ಅಭಿಪ್ರಾಯಪಡುವ ಶ್ರೀ.ಶಂಕ್ರೇಗೌಡರು ಯಶವಂತಪುರದ ಗಾಯತ್ರಿ ದೇವಸ್ಥಾನ ಮತ್ತು ಜುಂಜುರಾಮನಹಳ್ಳಿ ಶನೈಶ್ಚರ ದೇವಸ್ಥಾನ ಈ ಎರಡೂ ಕಡೆ ಸುಮಾರು ಎರಡು ದಶಕಗಳಿಂದ ನಾನಾ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. 


ಇತ್ತೀಚೆಗೆ ಶುರುವಾದ ಲಾಕ್ಢೌನ್ ದಿನಗಳಲ್ಲಿ ಮಲ್ಲೇಶ್ವರ ಮತ್ತು ಸುಬ್ರಹ್ಮಣ್ಯನಗರ ಪೋಲಿಸ್ ಠಾಣಾ ವ್ಯಾಪ್ತಿಯ ಸಿಬ್ಬಂದಿಗೆ ಮತ್ತು ಬಡಾವಣೆಯ ನಿರ್ಗತಿಕರು ಕೆಲಸವಿಲ್ಲದ ಕೂಲಿಯವರು ಆಶಕ್ತರು ಮೊದಲಾದವರಿಗೆ ತಾವು ಉಪಾಧ್ಯಾಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಪ್ರಗತಿ ಸಿಂಡಿಕೇಟ್ ಸಂಸ್ಥೆಯ ಮೂಲಕ  ಕೆಲವು ಪದಾಧಿಕಾರಿಗಳ ಜೊತೆ ಸೇರಿ ಉಚಿತ ಆಹಾರದ ಪೊಟ್ಟಣ,ಕುಡಿಯುವ ನೀರು,ಮಾಸ್ಕ್ ವಿತರಿಸಿದ್ದು.ಬ್ಯಾಂಕಿಗೆ ರಜೆ ಇದ್ದ ದಿನಗಳಲ್ಲಿ ತಮ್ಮ ಕಾರನ್ನು ಈ ಪುಣ್ಯ ಕೆಲಸಕ್ಕೆ ಉಪಯೋಗಿಸಿದ್ದು ನಿಜಕ್ಕೂ ಆದರ್ಶನೀಯವಾಗಿದೆ. 


ಈ ಸಂಕಷ್ಟ ದಿನಗಳಲ್ಲಿ‌ ಜನ ಕಂಗಾಲಾಗಿ ಹೋಗಿದ್ದಾರೆ.ಅನೇಕ ಸಾವು ನೋವುಗಳು ಲೆಕ್ಕವಿಲ್ಲದಷ್ಟು ಸಂಭವಿಸುತ್ತಿದೆ.ಅನೇಕ ಪೋಲಿಸರು ಮತ್ತು ಆಸ್ಪತ್ರೆ ಸಿಬ್ಬಂದಿಯವರಿಗೂ ಕೊರೋನಾ ಕಾಡಿದೆ.ರಸ್ತೆಯಲ್ಲಿರುವ ಮಂದಿಯಲ್ಲಿ ಯಾರಿಗೆ ಕೊರೋನಾ ಇದೆಯೋ ಎಂಬುದೂ ತಿಳಿಯದ ಸನ್ನಿವೇಶ ಇದಾಗಿದೆ.ಸಾಕಷ್ಟು ಸೇವಾ ಮನೋಭಾವದ ಜನರು ಕೂಡಾ ಇಂತಹ ವಿಷಮ ಪರಿಸ್ಥಿತಿಯಲ್ಲಿ ಸೇವೆ ಮಾಡಲು ಹೆದರುತ್ತಿದ್ದಾರೆ.ಇದು ವಾಸ್ತವ.ಜಗತ್ತು ವಿನಾಶದಂಚಿಗೆ ಸಾಗುತ್ತಿದೆಯಾ ಎಂದು ಜನರು ಭಯಪಡುವಂತಾಗಿದೆ. ದೇವರು ಎಲ್ಲರನ್ನೂ ಕಾಪಾಡಲಿ ಶ್ರೀ.ಕೆ ಬಿ ಶಂಕ್ರೇಗೌಡರಂತಹ ಒಳ್ಳೆಯವರ ಸಂತತಿ ಸಾವಿರವಾಗಲಿ ಈ ಸೇವಾ ಮನೋಭಾವದ ಮಂದಿ‌ ಈ ಘಳಿಗೆಯಲ್ಲಿ ತಮ್ಮ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ನೀಡಬೇಕಿರುವುದು ಬಹಳ ಅನಿವಾರ್ಯವಾಗಿದೆ.ಸಕಲ ಶುಭ ಕೆಲಸಗಳಿಗೂ ದೇವರ ಪ್ರೇರಣೆ ಇದ್ದು ದೇವರೇ ಎಲ್ಲರನ್ನು ಸಲಹಲಿ ಎಂದು ಆಶಿಸೋಣ.

Click here for : MALLESWARAM SUTTHA MUTTHA Daily Edition

https://www.varthajala.live/2021/05/25th-may-2021-varthajala.html




Post a Comment

0 Comments

Ad Code

Responsive Advertisement