ನವ ದೆಹಲಿ (ಮೇ 24); ಕೊರೋನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಈ ಸೋಂಕನ್ನು ತಡೆಯುವ ಸಲುವಾಗಿ ಈಗಾಗಲೇ ಭಾರತದಲ್ಲಿ ಲಸಿಕೆ ನೀಡುವ ಕೆಲಸ ಆರಂಭವಾಗಿದೆ ಆದರೂ,
ಸ್ಪುಟ್ನಿಕ್-ವಿ ಲಸಿಕೆ ಕೊರೋನಾ ವೈರಸ್ ವಿರುದ್ಧ ವಿಶ್ವದ ಮೊಟ್ಟಮೊದಲ ನೋಂದಾಯಿತ ಲಸಿಕೆ.
ಭಾರತದಲ್ಲಿ ಎಲ್ಲರಿಗೂ ನೀಡುವಷ್ಟು ಲಸಿಕೆ ಪ್ರಸ್ತುತ ಲಭ್ಯವಿಲ್ಲ. ರಷ್ಯಾದಿಂದಲೂ ಸ್ಪುಟ್ನಿಕ್-ವಿ ಲಸಿಕೆಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಅಂತೆಯೇ, ಲಸಿಕೆ ಕಾರ್ಯಕ್ರಮಕ್ಕೆ ವೇಗ ನೀಡುವ ಸಲುವಾಗಿ ರಷ್ಯಾ ಭಾರತದಲ್ಲಿ ನೇರ ಹೂಡಿಕೆ ಮಾಡಿದ್ದು, ದೆಹಲಿಯ ಪ್ಯಾನೇಸಿಯಾ ಬಯೋಟೆಕ್ ಸಹಯೋಗದೊಂದಿಗೆ ಪ್ರತಿ ವರ್ಷ 100 ಮಿಲಿಯನ್ ಡೋಸ್ ಸ್ಪುಟ್ನಿಕ್-ವಿ ಲಸಿಕೆಯನ್ನು ಉತ್ಪಾದಿಸಲಿದೆ ಎಂದು ತಿಳಿದುಬಂದಿದೆ.
ದೆಹಲಿಯ ಪ್ಯಾನೇಸಿಯಾ ಬಯೋಟೆಕ್ ಸೌಲಭ್ಯಗಳಿಂದ ತಯಾರಿಸಿದ ಮೊದಲ ಬ್ಯಾಚ್‍ನ ಲಸಿಕೆಯನ್ನು ಗುಣಮಟ್ಟದ ಪರಿಶೀಲನೆಗಾಗಿ ಮಾಸ್ಕೋ ಸಂಸ್ಥೆಯ ಗಮಲೇಯಾ ರವಾನಿಸಲಾಗುತ್ತದೆ. ಅಲ್ಲಿ ಪರೀಕ್ಷೆ ನಡೆಸಿದ ಬಳಿಕ ಭಾರತದಲ್ಲಿ ಈ ಲಸಿಕೆಯನ್ನು ನೀಡುವ ಕೆಲಸ ಆರಂಭವಾಗುತ್ತದೆ. ಭಾರತೀಯ ಉತ್ಪಾದಕರ ಸೌಲಭ್ಯಗಳು ಜಿಎಂಪಿ ಮಾನದಂಡಗಳಿಗೆ ಅನುಗುಣವಾಗಿರುತ್ತವೆ ಮತ್ತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ಯಿಂದ ಪೂರ್ವಭಾವಿಯಾಗಿರುತ್ತದೆ ಎಂದು ಆರ್‍ಡಿಐಎಫ್ ತಿಳಿಸಿದೆ.

ಸ್ಪುಟ್ನಿಕ್-ವಿ ಲಸಿಕೆ ಏಪ್ರಿಲ್ 12 ರಂದು ಭಾರತದಲ್ಲಿ ತುರ್ತು ಬಳಕೆಗೆ ಅನುಮೋದನೆ ನೀಡಲಾಯಿತು. ಮೇ 14ರಿಂದ ರಷ್ಯಾದ ಸ್ಪುಟ್ನಿಕ್ ಲಸಿಕೆಯನ್ನು ಜನರಿಗೆ ನೀಡಲಾಗುತ್ತಿದೆ. ಪ್ಯಾನೇಸಿಯಾ ಬಯೋಟೆಕ್ ಸಹಭಾಗಿತ್ವದಲ್ಲಿ ಭಾರತದಲ್ಲಿ ಉತ್ಪಾದನೆಯನ್ನು ಪ್ರಾರಂಭಿಸುವುದು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ದೇಶಕ್ಕೆ ಸಹಾಯ ಮಾಡುವ ಪ್ರಮುಖ ಹೆಜ್ಜೆಯಾಗಿದೆ. ಸ್ಪುಟ್ನಿಕ್-ವಿ ಉತ್ಪಾದನೆಯು ಕೊರೋನಾ ವೈರಸ್ ಅನ್ನು ನಿರ್ಮೂಲನೆ ಮಾಡಲಿದೆ. ಅಲ್ಲದೆ, ಈ ಲಸಿಕೆಯನ್ನು ಹೆಚ್ಚು ಉತ್ಪಾದಿಸಿ ಭವಿಷ್ಯದಲ್ಲಿ ವಿದೇಶಗಳಿಗೆ ರಫ್ತು ಮಾಡಲಾಗುವುದು ಮತ್ತು ವಿಶ್ವದ ಇತರ ದೇಶಗಳಲ್ಲಿ ವೈರಸ್ ಹರಡುವುದನ್ನು ತಡೆಯಲು ಸಹಾಯ ಮಅಡಲಾಗುತ್ತದೆ "ಎಂದು ಆರ್‍ಡಿಐಎಫ್ ಸಿಇಒ ಕಿರಿಲ್ ಡಿಮಿಟ್ರಿವ್ ಹೇಳಿದ್ದಾರೆ.
ಕೇವಲ 12 ದಿನದಲ್ಲಿ ಕೊರೋನಾಗೆ 50 ಸಾವಿರ ಜನ ಬಲಿಯಾಗಿದ್ದು ದಾಖಲೆಯನ್ನು ಸೃಷ್ಟಿಸಿದೆ.
ಕೊರೋನಾ ರೋಗದಿಂದ ಸಾಯುವವರ ಸಂಖ್ಯೆಯಲ್ಲಿ ಭಾರತವು ಕಳೆದ ವಾರವೇ ಸಾವಿನಲ್ಲಿ ಅಮೆರಿಕಾವನ್ನು ಹಿಂದೆ ತಳ್ಳಿತ್ತು. ಅಮೇರಿಕಾದಲ್ಲಿ 31 ದಿನಗಳಲ್ಲಿ 1 ಲಕ್ಷ ಜನ ಸತ್ತಿದ್ದರೆ ಭಾರತದಲ್ಲಿ ಕೇವಲ 26 ದಿನದಲ್ಲಿ 1 ಲಕ್ಷ ಜನ ಕೊರೋನಾಗೆ ಬಲಿ ಆಗಿದ್ದರು. ಭಾರತದಲ್ಲಿ 12 ದಿನದಲ್ಲಿ ಕೊರೋನಾಗೆ 50 ಸಾವಿರ ಜನ ಬಲಿಯಾಗಿದ್ದಾರೆ.
ಬ್ರೆಜಿಲ್ ನಲ್ಲಿ ಮಾರಕ ರೋಗ ಕೊರೋನಾ 4.5 ಲಕ್ಷ ಜನರನ್ನು ಬಲಿ ಪಡೆದುಕೊಂಡಿದೆ. ಭಾರತದ ಕೊರೋನಾ ರೋಗಿಗಳ ಸಾವಿನ ಸಂಖ್ಯೆ 3 ಲಕ್ಷ ದಾಟಿದ್ದು 3ನೇ ಸ್ಥಾನದಲ್ಲಿದೆ.

0 Comments