ಬೆಂಗಳೂರು, ಮೇ 27, (ಕರ್ನಾಟಕ ವಾರ್ತೆ): ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಮೈಸೂರಿನ ಚನ್ನ ಬಸಪ್ಪ ಕಾಳಿಂಗ ಸರ್ಪ ರೂ. 3500, ಉಡುಪಿಯ ಮಂಜಯ್ಯ ನೆರೆಂಕಿ ಅವರು ಚಿರತೆ ಬೆಕ್ಕು ರೂ 5000, ಬೆಂಗಳೂರಿನ ಪ್ರೇವi ಫುಥಾನ್ ನಾಲ್ಕು ಕೊಂಬಿನ ಹುಲ್ಲೆ ರೂ.5000 ಹಾಗೂ ಮೈಸೂರಿನ ಸಾರಿಕ ಯಶೋಧರ ಶರ್ಮ ಅವರು ಗ್ರೇಟ್ ಇಂಡಿಯನ್ ಹಾರ್ನ್‍ಬಿಲ್ ರೂ. 5000 ಪಾವತಿಸಿ ಮೃಗಾಲಯದ ಪ್ರಾಣಿಗಳನ್ನು ದತ್ತು ಸ್ವೀಕಾರ ಮಾಡಿದ್ದಾರೆಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಪ್ರೆಸಿಡೆಂಟ್ 20-21 ರೋಟರಿ ಹೈಗ್ರೌಂಡ್ಸ್, ಬೆಂಗಳೂರು ಹಾಗೂ ಮೆ: ಸಾಯಿಕಾರ್ಪ್ ಪ್ರೈ.ಲಿ. ವತಿಯಿಂದ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ಅಭಿವೃದ್ಧಿ ಪಡಿಸಿರುವ ಕೋವಿಡ್ ಟೆಸ್ಟಿಂಗ್ ಮೊಬೈಲ್ ಕ್ಲಿನಿಕ್‍ಅನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ವೀಕ್ಷಿಸಿದರು.
ರೋಟರಿ ಸಂಸ್ಥೆಯ ಜಿಲ್ಲಾ ರಾಜ್ಯಪಾಲ ನಾಗೇಂದ್ರ ಪ್ರಸಾದ್, ನಿಕಟಪೂರ್ವ ರಾಜ್ಯಪಾಲ ಕೆ.ಪಿ ನಾಗೇಶ್, ಟಾಟಾ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಗಿರೀಶ್ ಕೃಷ್ಣಮೂರ್ತಿ ಉಪಸ್ಥಿತರಿದ್ದರು.
ಮಾಜಿ ಪ್ರಧಾನಿ ದಿ.ಪಂಡಿತ್ ಜವಾಹರಲಾಲ್ ನೆಹರು ಅವರ 57ನೇ ಪುಣ್ಯ ತಿಥಿಯ ಅಂಗವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ನೆಹರು ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪುಪ್ಪ ನಮನ ಸಲ್ಲಿಸಿದರು.


0 Comments