ಬಳ್ಳಾರಿ ಮೇ 29. ಬಳ್ಳಾರಿ ನಗರದಲ್ಲಿ ನಿರಂತರ ಕೋವಿಡ್ ಸೇವೆಗಳೊಂದಿಗೆ ಅಭಯ ಫೌಂಡೇಶನ್ ವತಿಯಿಂದ 2ನೇ ದಿನ ಬಳ್ಳಾರಿಯ ಪ್ರಮುಖ ಜಂಕ್ಷನ್‌ಗಳ ಸುತ್ತಲೂ ಗೋಡೆ ವರ್ಣಚಿತ್ರವನ್ನು ರಚಿಸಲು ಕಲಾವಿದರೊಂದಿಗೆ ತೊಡಗಿಸಿಕೊಳ್ಳುವ ಮೂಲಕ ಹೊಸ ಕೋವಿಡ್ ಜಾಗೃತಿ ಕಾರ್ಯಕ್ರಮವನ್ನು ಕೈಗೊಳ್ಳುತ್ತಿದೆ. ಈ ದಿನ ಎರಡನೇ ದಿವಸ ಪ್ರಯುಕ್ತ ರಾಯಲ್ ಸರ್ಕಲ್ ನಲ್ಲಿ ಸುತ್ತಲು ಗೋಡೆಯಮೇಲೆ ಹೊಸ ಕೋವಿಡ್ ಜಾಗೃತಿ ಮೂಡಿಸುವ ಚಿತ್ರಪಟವನ್ನು ಹಾಕಲಾಯಿತು. ಈಸಂಧರ್ಬದಲ್ಲಿ ಅಭಯ ಫೌಂಡೇಶನ್ ತಂಡದ ಅಧ್ಯಕ್ಷರು ರಾಮಕೃಷ್ಣ ರೆನಿಗುಂಟ್ಲಾ, ನಾಮ ಕಾರ್ತೀಕ್, ಎಚ್.ಆರ್.ಬಾಲನಾಗರಾಜ್, ಜೆ.ಎಸ್.ಅಜಯ್, ಪಿ.ವೇಣುಗೋಪಾಲ್ ಗುಪ್ತಾ, ಎಸ್ ಜಿತೇಂದ್ರ ಪ್ರಸಾದ್. ಜೇಪೀ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

0 Comments