Ticker

6/recent/ticker-posts

Ad Code

Responsive Advertisement

BELLARY: ಆನ್‌ಲೈನ್ ಟ್ಯಾಕ್ಸ್ ಕ್ಯಾಲುಕ್ಯುಲೇಟರ್ ಮುಖಾಂತರ ತೆರಿಗೆ ಪಾವತಿಸಿ: ಪ್ರೀತಿ ಗೆಹ್ಲೋಟ್

ಬಳ್ಳಾರಿ,ಮೇ29:ಬಳ್ಳಾರಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಆಸ್ತಿಯುಳ್ಳ ಮಾಲಿಕರು ಆಸ್ತಿ ತೆರಿಗೆಯನ್ನು ಆನ್‌ಲೈನ್ ಟ್ಯಾಕ್ಸ್ ಕ್ಯಾಲುಕ್ಯುಲೇಟರ್ ಮುಖಾಂತರವೇ ಪಾವತಿಸಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿಯುಳ್ಳ ಮಾಲಿಕರು ಸ್ವಯಂ ಘೋಷಿತ ತೆರಿಗೆ ಪದ್ದತಿಯನ್ನು ದಿನೇ ದಿನೇ ನವೀಕರಿಸಿ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಆಸ್ತಿ ತೆರಿಗೆ ಲೆಕ್ಕಾಚಾರ ಪದ್ದತಿಯನ್ನು ಆನ್‌ಲೈನ್ ಟ್ಯಾಕ್ಸ್ ಕ್ಯಾಲುಕ್ಯುಲೇಟರ್ ಮುಖಾಂತರ ಲೆಕ್ಕಾಚಾರ ಮಾಡುವಂತೆ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಸೂಚಿಸಿದ್ದು, ಆಸ್ತಿಯುಳ್ಳ ಮಾಲಿಕರು ಆನ್‌ಲೈನ್ ಮುಖಾಂತರವೇ ಟ್ಯಾಕ್ಸ್ ಪಾವತಿಸಿ ನಗರದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಅವರು ಕೋರಿದ್ದಾರೆ.

ಪಾಲಿಕೆಯ ವಲಯ 1ರ ವ್ಯಾಪ್ತಿಗೆ ಬರುವ 1,15,ರಿಂದ 24, 36, 37ನೇ ವಾರ್ಡ್ಗಳ ನಿವಾಸಿಗಳು ಕಂದಾಯ ಅಧಿಕಾರಿ ವೀರೇಶ್ ಕುಮಾರ್ ಅವರ ಮೊ.ಸಂ:9972207437ಗೆ,

ಎರಡನೇ ವಲಯದ ವ್ಯಾಪ್ತಿಯಲ್ಲಿ ಬರುವ 02ರಿಂದ 14ರವರೆಗಿನ ವಾರ್ಡ್ಗಳ ನಿವಾಸಿಗಳು ಕಂದಾಯ ಅಧಿಕಾರಿ ಅರಮನೆ ಸುಧಾ ಅವರ ಮೊ.ಸಂ:7795520936ಗೆ, ವಲಯ 3ರ ವ್ಯಾಪ್ತಿಗೆ ಬರುವ 25ರಿಂದ 35,38,39 ವಾರ್ಡ್ಗಳ ನಿವಾಸಿಗಳು ಕಂದಾಯ ಅಧಿಕಾರಿ ಮಲ್ಲಿಕಾರ್ಜುನ ಅವರ ಮೊ.ಸಂ:9448493344 ಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Post a Comment

0 Comments

Ad Code

Responsive Advertisement