Ticker

6/recent/ticker-posts

Ad Code

Responsive Advertisement

ಪಾಸಿಟಿವಿಟಿ ರೇಟ್ ಆಧಾರದ ಮೇಲೆ ಲಾಕ್ ಡೌನ್ : ಸಚಿವ ಅಶೋಕ್

 ಬೆಂಗಳೂರು, ಮೇ 31- ತಜ್ಞರ ವರದಿ ಆಧರಿಸಿ ಲಾಕ್ ಡೌನ್ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಸಿಟಿವಿಟಿ ರೇಟ್ ಆಧಾರದ ಮೇಲೆ ತೀರ್ಮಾನ ಮಾಡಿದ್ದೇವೆ. ಬೆಂಗಳೂರು ನಿತ್ಯ 500 ಕ್ಕಿಂತ ಕಡಿಮೆ ಕೋವಿಡ್ ಪ್ರಕರಣಗಳು ಬರಬೇಕು. ರಾಜ್ಯದಲ್ಲಿ ಎತಡು ಸಾವಿರ ಮೂರು ಸಾವಿರಕ್ಕೂ ಕಡಿಮೆ ಕೋವಿಡ್ ಪ್ರಕರಣ ವರದಿ ಬಂದ ಮೇಲೆ ಮಾತ್ರ ಲಾಕ್ ಡೌನ್ ಕೈ ಬಿಡುವ ಬಗ್ಗೆ ತೀರ್ಮಾನ ಮಾಡಬಹುದು ಎಂದರು.

ನಾಳೆ ಕೋವಿಡ್ ಸಂಬಂಧ ಸಚಿವರ ಸಭೆ ಇದೆ. ಎರಡು ದಿನಕ್ಕೊಮ್ಮೆ ಚರ್ಚೆ ಮಾಡುತ್ತೇವೆ. ಜೂನ್ 5 ಅಥವಾ 6ರೊಳಗೆ ಲಾಕ್ ಡೌನ್ ಕುರಿತು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು. ಕರ್ನಾಟಕದಲ್ಲಿ ಮೊದಲ ಬಾರಿಗೆ ದೊಡ್ಡಬಳ್ಳಾಪುರದಲ್ಲಿ ಮೇಕ್ ಶಿಪ್ಟ್ ಆಸ್ಪತ್ರೆಗೆ ತಯಾರಿ ಮಾಡಲಾಗಿದೆ. ಪೂರ್ಣ ವೈದ್ಯಕೀಯ ಸಲಕರಣೆಗಳೊಂದಿಗೆ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು. ಆಸ್ಪತ್ರೆ ರೆಡಿಮೆಡ್ ಆಗಿ ಬರುತ್ತದೆ.

ವಾಟರ್ ಮತ್ತು ಸಾನಿಟೈಸರ್ ಕನೆಕ್ಷನ್ ಅಷ್ಟೇ ಮಾಡುತ್ತೇವೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ಇಂತಹ ಆಸ್ಪತ್ರೆ ಆಗುತ್ತಿದೆ ಎಂದು ಅವರು ತಿಳಿಸಿದರು 100 ಹಾಸಿಗೆ ಆಸ್ಪತ್ರೆ ಇದಾಗಿದ್ದು, 70 ಹಾಸಿಗೆ ಐಸಿಯು 10 ಹಾಸಿಗೆ ವೆಂಟಿಲೇಟರ್ ಒಳಗೊಂಡಿದ್ದು, ಹದಿನೈದು ದಿನಗಳಲ್ಲಿ ಮೇಕ್ ಶಿಪ್ಟ್ ಆಸ್ಪತ್ರೆ ಸಿದ್ಧ ಮಾಡುತ್ತೇವೆ. ದೊಡ್ಡಬಳ್ಳಾಪುರ ಭಾಗದ ಜನರಿಗೆ ಈ ಆಸ್ಪತ್ರೆ ಉಪಯೋಗವಾಗುತ್ತದೆ ಎಂದರು.


Post a Comment

0 Comments

Ad Code

Responsive Advertisement