ಹಿಂದೂ ಧರ್ಮ ಸಂರಕ್ಷಣೆಯಲ್ಲಿ ಅವಿಚ್ಛಿನ್ನ ಪರಂಪರಾ ಕೂಡ್ಲಿ ಶೃಂಗೇರಿ ಶ್ರೀಗಳ ಪಾತ್ರ ಅನನ್ಯ
ಶೃದ್ಧಾಂಜಲಿ ಸಭೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಶ್ಲಾಘನೆ.ಸನಾತನ ಹಿಂದೂ ಧರ್ಮ ರಕ್ಷಣೆ ಹಾಗೂ ಇಂದಿನ ಯುವ ಪೀಳಿಗೆಯಲ್ಲಿ ಹಿಂದೂ ಧರ್ಮದ ಜಾಗೃತಿಗಾಗಿ ಅವಿಚ್ಛಿನ್ನ ಪರಂಪರಾ ಕೂಡ್ಲಿ ಶೃಂಗೇರಿ ಮಠದ ಪೀಠಾಧಿಪತಿಗಳಾಗಿದ್ದ ಶ್ರೀ ವಿದ್ಯಾಭಿನವ ಶಂಕರ ಭಾರತಿ ಮಾಹಾಸ್ವಾಮಿಗಳ ಕಾರ್ಯ ಅನನ್ಯವಾದುದೆಂದು ಕೇಂದ್ರದ ಗಣಿ, ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಶ್ರೀ ಪ್ರಹ್ಲಾದ ಜೋಶಿ ಅವರು ಶ್ಲಾಘಿಸಿದರು.
ಇತ್ತೀಚೆಗೆ ಸಮಾಧಿಸ್ಥರಾದ ಚಾಮರಾಜ ಪೇಟೆಯ ಅವಿಚ್ಛಿನ್ನ ಪರಂಪರಾ ಕೂಡ್ಲಿ ಶೃಂಗೇರಿ ಮಠದ ಪೀಠಾಧಿಪತಿಗಳಾಗಿದ್ದ ಶ್ರೀವಿದ್ಯಾಭಿನವ ಶಂಕರ ಭಾರತಿ ಸ್ವಾಮಿಗಳ ಸಂಸ್ಮರಣೆ ಅಂಗವಾಗಿ ನಡೆದ ವರ್ಚುವಲ್ ಶೃದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು ಆದಿ ಜಗದ್ಗುರು ಶಂಕರಾಚಾರ್ಯರ ತತ್ವ ಸಿದ್ಧಾಂತಗಳನ್ನು ಜನಮಾನಸಕ್ಕೆ ತಲುಪಿಸುವಲ್ಲಿ ಶ್ರೀಗಳು ನಿರಂತರವಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ಭಾರತೀಯತೆ ಹಿಂದೂ ಧರ್ಮ ಸಂಸ್ಕಾರ, ಸಂಸ್ಕøತಿ ಹಾಗೂ ಮಾನವೀಯ ಮೌಲ್ಯಗಳನ್ನು ಉಳಿಸಲು ಶ್ರಮಿಸುತ್ತಿದ್ದ ಸ್ವಾಮೀಜಿಯವರು ಮಾತೃ ಹೃದಯಿ ಆಗಿದ್ದರು ಎಂದು ಬಣ್ಣಿಸಿದರು.
ಧಾರವಾಡದ ಜಗದ್ಗುರು ಶಂಕರಾಚಾರ್ಯ ಸಂಸ್ಕøತ ಪಾಠಶಾಲೆಯ ಮುಖ್ಯಸ್ಥರಾದ ಪಂಡಿತ ರಾಜೇಶ್ವರ ಶಾಸ್ತ್ರಿಗಳು ಮಾತನಾಡಿ, ವೈದಿಕ ಪರಂಪರೆ ಹಾಗೂ ಭಾರತೀಯ ಸಂಸ್ಕ್ರತಿಯನ್ನು ಉಳಿಸುವಲ್ಲಿ ಶ್ರೀಗಳ ಕೊಡುಗೆ ಅಪೂರ್ವವಾದುದು. ಬಾಲ್ಯದಿಂದಲೂ ಹಿಂದೂ ಧರ್ಮ ಸಂರಕ್ಷಣೆಗಾಗಿ ಹಲವು ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿದ್ದ ಶ್ರೀಗಳು ಶ್ರೀಮಠದ ಪೀಠಾಧಿಪತಿಗಳಾಗಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವದರ ಮೂಲಕ ಧಾರವಾಡದ ಕೀರ್ತಿ ಪತಾಕೆಯನ್ನು ದೇಶಾದ್ಯಂತ ಪ್ರಚುರಪಡಿಸಿದ್ದರು ಎಂದರು.
ಹಿರಿಯ ಸಂಸ್ಕøತ ವಿದ್ವಾಂಸ ಶ್ರೀ ನಾಗೇಶ ಶಾಸ್ತ್ರಿ ಜೋಶಿ ಮಾತನಾಡಿ, ಹಿಂದೂಗಳ ಆತ್ಮವಾಗಿರುವ ವೇದ, ಪುರಾಣ, ಉಪನಿಷತ್ತುಗಳನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ವಿನೂತನ ಕಾರ್ಯಕ್ರಮಗಳ ಮೂಲಕ ಶ್ರೀಗಳು ಹಿಂದೂ ಧರ್ಮದ ಪುನರುತ್ಥಾನಕ್ಕೆ ಬಹುವಾಗಿ ಶ್ರಮಿಸಿದ್ದರು ಎಂದು ತಮ್ಮ ಅನಿಸಿಕೆ ಹಂಚಿಕೊಂಡರು.
ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ವೇಣಿ ಮಾಧವ ಜೋಶಿ ಅವರು ಸನಾತನ ಧರ್ಮದ ಕುರಿತು ಅಪಾರವಾದ ಒಲವು ಹೊಂದಿದ್ದ ಶ್ರೀಗಳು ರಾಜ್ಯದ ವಿವಿಧೆಡೆ ಸಂಚರಿಸಿ ಹತ್ತು ಹಲವು ಧರ್ಮ ಜಾಗೃತಿ ಸಮಾರಂಭಗಳನ್ನು ಆಯೋಜಿಸುವುದರ ಮೂಲಕ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದರು. ಧಾರವಾಡದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಶ್ರೀಗಳು ಇಲ್ಲಿಯ ಅನೇಕ ವಿದ್ವಾಂಸರಿಗೆ ಆಶ್ರಯ ನೀಡಿದ್ದರೆಂದು ಸ್ಮರಿಸಿದರು.
ಕೂಡ್ಲಿ ಶೃಂಗೇರಿ ಮಠದಲ್ಲಿ ಹಲವು ವರ್ಷಗಳ ಕಾಲ ಸೇವೆಗೈದ ತಿಳವಳ್ಳಿಯ ದತ್ತಾತ್ರೇಯ ಶಾಸ್ತ್ರಿ ಸಿಂದಗಿ ಮಾತನಾಡಿ, ಭಕ್ತರ ಬಗೆಗೆ ಅಪಾರ ಪ್ರೀತಿ, ಆತ್ಮೀಯತೆ ಹೊಂದಿದ್ದ ಶ್ರೀಗಳು ಎಲ್ಲರಿಗೂ ಮಾತೃಸ್ವರೂಪಿಗಳಾಗಿ ಮಾರ್ಗದರ್ಶನ ಮಾಡುತ್ತಿದ್ದರು ಎಂದು ಬಣ್ಣಿಸಿದರು.
ಧಾರವಾಡದ ಜಗದ್ಗುರು ಶಂಕರಾಚಾರ್ಯ ಸಂಸ್ಕøತ ಪಾಠಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ವಿಜಯ ನಾಡಜೋಶಿ ಮಾತನಾಡಿ, ಶ್ರೀಗಳೊಂದಿಗೆ ತಮಗಿದ್ದ ಆತ್ಮೀಯತೆಯನ್ನು ಸ್ಮರಿಸಿ ವೈದಿಕ ಪರಂಪರೆ ಸಂರಕ್ಷಣೆಯಲ್ಲಿ ಶ್ರೀಗಳ ಪಾತ್ರ ಅವಿಸ್ಮರಣಿಯವಾದುದು ಎಂದರು.
ಶ್ರೀಮಠದ ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷ ರವಿ ದೇಶಪಾಂಡೆ ಮಾತನಾಡಿ ಹಿಂದೂ ಧರ್ಮದ ಸಂರಕ್ಷಣೆಗೆ ತಮ್ಮದೇ ಆದ ಕೊಡುಗೆ ನೀಡಿದ ಶ್ರೀಗಳು ಶ್ರೀಮಠದಿಂದ ನಡೆಯುತ್ತಿದ್ದ ಎಲ್ಲ ಕಾರ್ಯಚಟುವಟಿಕೆಗಳ ಕುರಿತು ವ್ಯವಸ್ಥಾಪನಾ ಮಂಡಳಿಯೊಂದಿಗೆ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು ಎಂದು ಬಣ್ಣಿಸಿದರು.
ಶ್ರೀಮಠದ ವ್ಯವಸ್ಥಾಪನಾ ಮಂಡಳಿ ಸದಸ್ಯ ಡಾ. ಮಹೇಶ ವಾಳ್ವೇಕರ ಮಾತನಾಡಿ, ದೇಶಭಕ್ತಿ, ಸ್ವದೇಶಿ, ಗೋಸಂರಕ್ಷಣೆ, ಸಾವಯವ ಕೃಷಿ, ಸ್ವಾವಲಂಬನೆ, ಹಾಗೂ ಹಿಂದೂ ಧರ್ಮ ಜಾಗೃತಿಗಾಗಿ ನಿರಂತರವಾಗಿ ಕ್ರೀಯಾಶೀಲರಾಗಿದ್ದ ಶ್ರೀಗಳು ಹಲವು ಮಹತ್ವಾಕಾಂಕ್ಷಿ ಚಟುವಟಿಕೆಗಳನ್ನು ನಡೆಸುವ ಪ್ರಬಲ ಆಕಾಂಕ್ಷೆ ಹೊಂದಿದ್ದರು, ಅವರು ಸಂಕಲ್ಪಿಸಿದ್ದ ಎಲ್ಲ ಯೋಜನೆಗಳನ್ನು ಹಂತ ಹಂತವಾಗಿ ಜಾರಿಗೊಳಿಸುವ ಮೂಲಕ ಶ್ರೀಗಳ ಇಚ್ಛೆ ಈಡೇರಿಸುವುದು ಶ್ರೀಗಳಿಗೆ ಸಲ್ಲಿಸುವ ನೈಜ ಶ್ರದ್ಧಾಂಜಲಿ ಎಂದರು.
ವ್ಯವಸ್ಥಾಪನಾ ಮಂಡಳಿಯ ಕಾರ್ಯದರ್ಶಿ ಅಶ್ವಥ ನಾರಾಯಣ ಮಾತನಾಡಿ ಶ್ರೀಗಳ ಅಪೇಕ್ಷೆಯಂತೆ ಹಿಂದೂ ಧರ್ಮ ಸಂರಕ್ಷಣೆಗೆ ರೂಪಿಸಿರುವ ಎಲ್ಲ ಯೋಜನೆಗಳನ್ನು ಸಾಕಾರಗೊಳಿಸಲು ಎಲ್ಲ ಭಕ್ತರು ಕೈಜೋಡಿಸುವಂತೆ ಮನವಿ ಮಾಡಿದರು.
ಶ್ರೀಮಠದ ಭಕ್ತರಾದ ಹನುಮಂತ ಕಿತ್ತೂರ ಮಾತನಾಡಿ ಧರ್ಮ ಶಾಸ್ತ್ರಗಳ ಬೋಧನೆ ಜೊತೆಗೆ ಇಂದಿನ ಪರಿಸ್ಥಿತಿಯಲ್ಲಿ ಜೀವನ ನಿರ್ವಹಣೆಗೆ ಅವಶ್ಯಕವಾಗಿರುವ ಸಾವಯವ ಕೃಷಿ, ಗೋಸಂಪತ್ತು ಹಾಗೂ ಆರೋಗ್ಯ ಕೇಂದ್ರಗಳನ್ನು ಆರಂಭಿಸುವುದರ ಬಗ್ಗೆ ಶ್ರೀಗಳು ಅಪಾರ ಆಸ್ಥೆ ವಹಿಸಿದ್ದರು. ಎಲ್ಲರೂ ಸ್ವಾವಲಂಬಿಗಳಾಗಿ ಧರ್ಮದ ಹಾದಿಯಲ್ಲಿ ಬದುಕುವಂತೆ ಪ್ರೇರೇಪಿಸುತ್ತಿದ್ದರು ಎಂದರು.

ಸಭೆಯಲ್ಲಿ ಭೀಮಾಶಂಕರ ಜೋಶಿ, ವಿಶ್ವನಾಥ ಶಾಸ್ತ್ರಿ, ಶ್ರೀಧರ ಶಾಸ್ತ್ರಿ ಇನಾಮದಾರ, ನಿನಾದ ಕಾಶಿಕರ, ಜನಾರ್ಧನ ಜೋಶಿ, ರತ್ನನಾಭ ಜೋಶಿ, ರಾಕೇಶ ಸಿಂದಗಿ, ಶ್ರೀಪಾದ ಜೋಶಿ, ಲಕ್ಷ್ಮಿ ನರಸಿಂಹ ಶರ್ಮಾ, ಶ್ರೀಮತಿ ಪಾಟೀಲ ಸೇರಿದಂತೆ ನೂರಾರು ಶ್ರೀಮಠದ ಭಕ್ತರು ಮಾತನಾಡಿ ಅಗಲಿದ ಶ್ರೀಗಳಿಗೆ ಭಾವಪೂರ್ಣ ಶೃದ್ಧಾಂಜಲಿ ಸಲ್ಲಿಸಿದರು...

0 Comments