ಶ್ರೀಮತಿ ಭಾರತಿ 23-05-2021 ರಂದು ಬೆಳಿಗ್ಗೆ ಕುಟುಂಬ ಸಮೇತ ಕನಕಪುರದ ಕೆರೆ ಮೇಗಲದೊಡ್ಡಿಗೆ ಹೋಗಿದ್ದು, ದಿನಾಂಕ 24ರಂದು ನೆರೆ ಮನೆಯವರು ಪಿರ್ಯಾದಿಗೆ ಕರೆ ಮಾಡಿ ಯಾರೋ ನಿಮ್ಮ ಮನೆಯ ಡೋರ್ ಲಾಕ್ ಮೀಟಿರುತ್ತಾರೆಂದು ತಿಳಿಸಿ, ಪಿರ್ಯಾದಿ ಬಂದು ಪರಿಶೀಲಿಸಲಾಗಿ, ಮನೆಯಲ್ಲಿದ್ದ ಸುಮಾರು 194 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ನಂದಿನಿ-ಲೇ-ಔಟ್ ಪೊಲೀಸ್ ಠಾಣೆಯಲ್ಲಿ ಹಗಲು ಮತ್ತು ರಾತ್ರಿ ಕನ್ನಾ ಕಳವು ಪ್ರಕರಣ ದಾಖಲಾಗಿರುತ್ತದೆ.
ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಯ ಚಹರೆಯು ಕೃತ್ಯ ನಡೆದ ಸ್ಥಳದ ಪಕ್ಕದ ರಸ್ತೆಯಲ್ಲಿದ್ದ ಸಿಸಿಟಿವಿಯಲ್ಲಿ ದೊರೆತಿದ್ದು, ಇದರ ಆಧಾರ ಮೇರೆಗೆ ಆರೋಪಿ ಪತ್ತೆಯಲ್ಲಿದ್ದಾಗ ನಂದಿನಿಲೇಔಟ್ ಪೊಲೀಸ್ ಠಾಣೆಯ ನವೀದ್, ಪಿಎಸ್‍ಐ ಮತ್ತು ಅಪರಾಧ ವಿಭಾಗದ ಸಿಬ್ಬಂದಿ 28-05-2021 ರ ಸಂಜೆ ಠಾಣಾ ಸರಹದ್ದಿನ ಲಕ್ಷ್ಮೀದೇವಿನಗರದಲ್ಲಿ ಗಸ್ತಿನಲ್ಲಿದ್ದಾಗ ಸಿಸಿಟಿವಿಯಲ್ಲಿ ದೊರೆತ ಚಹರೆಯುಳ್ಳ ಆಸಾಮಿಯು ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಗ ಸದರಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಲಾಗಿ, ಆಸಾಮಿ ಕಳ್ಳತನ ಮಾಡಿರುವುದಾಗಿ ತಿಳಿಸಿರುತ್ತಾನೆ.
ಪ್ರಕರಣದ ಆರೋಪಿ ದಿಲೀಪ್ ಎಂಬುವನÀನ್ನು ದಸ್ತಗಿರಿ ಮಾಡಿ ಆತ ನೀಡಿದ ಮಾಹಿತಿ ಮೇರೆಗೆ ಸುಮಾರು 8.5 ಲಕ್ಷ ರೂ. ಬೆಲೆಯ 194 ಗ್ರಾಂ ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸಿದ ಪಿಕಾಶಿಯನ್ನು ವಶಪಡಿಸಿಕೊಳ್ಳುವಲ್ಲಿ ನಂದಿನಿಲೇಔಟ್ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಆರೋಪಿ ಹೆಚ್ಚು ಸಿಗರೇಟ್ ಸೇದುವ ವ್ಯಸನಿಯಾಗಿದ್ದು, ಪಿರ್ಯಾದಿಯ ಬಸವೇಶ್ವರ ಪ್ರಾವಿಜನ್ ಸ್ಟೋರ್‍ನಲ್ಲಿ ಸಿಗರೇಟ್ ಖರೀದಿಸಲು ಹೋದಾಗ ಪಿರ್ಯಾದಿಯು ಆರೋಪಿಗೆ ತಾವು ಎರಡು ದಿನ ಊರಿನಲ್ಲಿರುವುದಿಲ್ಲ. ಈಗಲೇ ಹೆಚ್ಚಿನ ಸಿಗರೇಟ್ ಖರೀದಿಸುವಂತೆ ತಿಳಿಸಿದಾಗ ಆರೋಪಿಯು ವಿಚಾರ ತಿಳಿದುಕೊಂಡು ರಾತ್ರಿ ವೇಳೆಯಲ್ಲಿ ಪಿಕಾಶಿಯಿಂದ ಡೋರ್ ಲಾಕ್ ಮುರಿದು ಮನೆಯೊಳಗೆ ಹೋಗಿ, ಬೀರುವಿನಲ್ಲಿದ್ದ ಚಿನ್ನಾಭರಣವನ್ನು ಕಳವು ಮಾಡಿರುವುದಾಗಿ ತನಿಖೆಯಿಂದ ತಿಳಿದು ಬಂದಿರುತ್ತದೆ.
ಪ್ರಕರಣದಲ್ಲಿ ಕೆ.ಎಸ್. ವೆಂಕಟೇಶ್ ನಾಯ್ಡು ಎಸಿಪಿ, ಮಲ್ಲೇಶ್ವರಂ ಉಪ ವಿಭಾಗದ ರವರ ಮಾರ್ಗದರ್ಶನದಲ್ಲಿ ವೆಂಕಟೇಗೌಡ, ಪೊಲೀಸ್ ಇನ್ಸ್‍ಪೆಕ್ಟರ್, ನಂದಿನಿಲೇಔಟ್ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ನವೀದ್, ಪಿಎಸ್‍ಐ ಮತ್ತು ಸಿಬ್ಬಂದಿ ಉಮೇಶ್, ಮಂಜುನಾಥ್, ಲೋಕೇಶ್, ಉಮೇಶ್, ಅಭಿಷೇಕ್, ಬಸವಣ್ಣರವರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

0 Comments