Ticker

6/recent/ticker-posts

Ad Code

Responsive Advertisement

ಕೋವಿಡ್ ಆಸ್ಪತ್ರೆಗಳಿಗೆ ಭೇಟಿ ನೀಡಿದ ಕಂದಾಯ ಸಚಿವ ಆರ್ ಅಶೋಕ್

ಕಂದಾಯ ಸಚಿವ ಆರ್ ಅಶೋಕ್ ಅವರು ಕೊವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವ ಹಲವಾರು ಆಸ್ಪತ್ರೆಗಳಿಗೆ ಭಾನುವಾರ ಭೇಟಿ ನೀಡಿದರು. ಮೊದಲು ದೇವನಹಳ್ಳಿ ಬಳಿಯ ಆಕಾಶ್ ಆಸ್ಪತ್ರೆಗೆ ಭೇಟಿ ನೀಡಿದರು. ಭೇಟಿಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು , ಮೂರ್ ನಾಲ್ಕು ದಿನಗಳಿಂದ ಕೋವಿಡ್ ಸೋಂಕಿತರ ಸಾವುಗಳು ಜಾಸ್ತಿಯಾಗಿವೆ ಎಂದು ನನಗೆ ದೂರುಗಳು ಬಂದಿವೆ   


ಆದ್ದರಿಂದ  ನಾನೇ ಬಂದು ಸ್ವತಃ ಪರಿಶೀಲನೆ ನಡೆಸಿದೆ. "ಇನ್ನೂ ಕೆಲವರು ಸರಿಯಾದ ಆಹಾರ ಕೊಡುತ್ತಿಲ್ಲ ಎಂದು  ದೂರು ನೀಡಿದ್ದಾರೆ. ರೋಗಿಗಳನ್ನು ಸರಿಯಾಗಿ ನೋಡಿಕೊಳ್ಳಲು ಒಳ್ಳೆಯ ಆಹಾರ ಕೊಡಬೇಕೆಂದು  ಹೇಳಿದ್ದೇನೆ ಎಂದರು . ಆಕ್ಸಿಜನ್  ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇಲ್ಲ . ಆದಾಗ್ಯೂ, ರೆಮ್‌ಡೆಸಿವಿರ್‌ನಲ್ಲಿ ಸಮಸ್ಯೆ ಇದೆ.


 ಆದ್ದರಿಂದ, ಸರಿಯಾಗಿ  ಬಳಸಲು ನಾನು ಆಸ್ಪತ್ರೆಯ ವೈದ್ಯರಿಗೆ ಹೇಳಿದ್ದೇನೆ. ಕೆಲವು ರೋಗಿಗಳು ರೆಮ್ಡೆಸಿವಿರ್ ಅನ್ನು ನನಗೂ ಕೊಡಿ ಎಂದು  ಒತ್ತಾಯಿಸುತ್ತಿದ್ದಾರೆ. ರೋಗಿಗೆ ಏನು ಬೇಕು ಎಂದು ನಿರ್ಧರಿಸುವುದು ವೈದ್ಯರೇ. ದೈಹಿಕವಾಗಿ ಅಂಗವಿಕಲ ರೋಗಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು "ಎಂದು ಸಚಿವರು ಹೇಳಿದರು. 


ನಂತರ, ಅವರು ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದರು.

Post a Comment

0 Comments

Ad Code

Responsive Advertisement