Ticker

6/recent/ticker-posts

Ad Code

Responsive Advertisement

ಮಾನವೀಯತೆಗೆ ಮತ್ತೊಂದು ಹೆಸರು ಪೊಲೀಸ್ ಅಧಿಕಾರಿ ಹೆಚ್.ನಾಗಭೂಷಣ

ಬಳ್ಳಾರಿ,ಏ.28-ಕಳೆದ ಹಲವು ವರ್ಷಗಳಿಂದ ಪೆÇಲೀಸ್ ಇಲಾಖೆಯ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿ ದಕ್ಷತೆಗೆ ಪಾತ್ರರಾಗಿರುವ ಹೆಚ್.ನಾಗಭೂಷಣ್ ಇದೀಗ ಸಂಚಾರಿ ಪೆÇಲೀಸ್ ಠಾಣೆಯ ಪೊಲೀಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಕೋವಿಡ್-19 ಹಿನ್ನೆಲೆಯಲ್ಲಿ ಬಾಣಂತಿಯೊಬ್ಬರಿಗೆ ಮಾನವೀಯತೆ ತೋರುವ ಮೂಲಕ ನಾಗರಿಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. 

ಬಾಗೇಪಲ್ಲಿಯಿಂದ ಬಸ್ ಮೂಲಕ ಕವಿತಾ ಎನ್ನುವ ಬಾಣಂತಿ ತನ್ನ ಮೂರು ತಿಂಗಳ ಹಸುಗೂಸಿನೊಂದಿಗೆ ಬಳ್ಳಾರಿಗೆ ಆಗಮಿಸಿದ್ದರು. ತನ್ನ ಕುಟುಂಬದೊಂದಿಗೆ ಬಂದ ಬಾಣಂತಿ ಕವಿತಾ ಬಳ್ಳಾರಿ ತಾಲೂಕಿನ ಗೋಟೂರು ಗ್ರಾಮಕ್ಕೆ ತೆರಳಬೇಕಿತ್ತು. ವೀಕೆಂಡ್ ಕಫ್ರ್ಯೂನಿಂದ ವಾಹನಗಳು ಲಭಿಸದೇ ಹಸುಗೂಸನ್ನು ಕಂಕಳಲ್ಲಿ ಎತ್ತಿಕೊಂಡು ಬಿಸಿಲಲ್ಲಿ ಏದುಸಿರು ಬಿಡುತ್ತಾ ನಡೆದುಕೊಂಡು ಹೋಗುತ್ತಿದ್ದರು. ಈವೇಳೆ ನಗರದ ಹೃದಯಭಾಗವಾದ ರಾಯಲ್ ವೃತ್ತದಲ್ಲಿ ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸ್ ಅಧಿಕಾರಿ ಹೆಚ್.ನಾಗಭೂಷಣ್ ಖುದ್ದಾಗಿ ಆ ಬಾಣಂತಿಯನ್ನು ವಿಚಾರಿಸಿದರು. ಬಾಣಂತಿ ಕವಿತಾ ತನ್ನ ಶಿಶುವಿನೊಂದಿಗೆ ಕುಟುಂಬ ಸದಸ್ಯರನ್ನು ಆಟೋದಲ್ಲಿ ಗೋಟೂರು ಗ್ರಾಮಕ್ಕೆ ತೆರಳಲು ಅವಕಾಶ ಕಲ್ಪಿಸಿಕೊಟ್ಟರು. ಆಟೋ ಬಾಡಿಗೆಯನ್ನೂ ತಾವೇ ನೀಡಿ ಪೊಲೀಸರಲ್ಲೂ ಅಂತಃಕರಣ ಇದೆ ಎನ್ನುವುದನ್ನು ನಿರೂಪಿಸಿದರು.


Post a Comment

0 Comments

Ad Code

Responsive Advertisement