Ticker

6/recent/ticker-posts

Ad Code

Responsive Advertisement

ವೈದ್ಯಕೀಯ ಆಮ್ಲಜನಕ ಪೂರೈಕೆಗೆ ಜೆಎಸ್ಡಬ್ಲ್ಯೂ ಸ್ಟೀಲ್ ಬದ್ದ


ಬಳ್ಳಾರಿ ಏ 28: ಕೋವಿಡ್-19 ರೋಗವು ದೇಶದಲ್ಲಿ ತುರ್ತು ಪರಿಸ್ಥಿತಿಯ ನಿರ್ಮಾಣ ಮಾಡಿರುವ ಈ ಸಂದರ್ಭದಲ್ಲಿ ವೈದ್ಯಕೀಯ ಆಮ್ಲಜನಕ್ಕಾಗಿ ದೇಶದಾದ್ಯಂತ ಬೇಡಿಕೆ ಉಲ್ಬಣವಾಗಿದೆ. ಈ ಪರಿಸ್ಥಿತಿಯಲ್ಲಿ ಕೊರೊನಾ ರೋಗಿಗಳ ಸಹಾಯಕ್ಕೆ ಜೆಎಸ್ಡಬ್ಲ್ಯೂ ಸ್ಟೀಲ್ ಮುಂದಾಗಿದ್ದು ತೋರಣಗಲ್ಲಿನಲ್ಲಿರುವ ತನ್ನ  ಪ್ಲಾಂಟ್ನಲ್ಲಿ ವೈದ್ಯಕೀಯ ಆಮ್ಲಜನಕದ ಉತ್ಪಾದನೆಯನ್ನು ಮೂರು ಪಟ್ಟು ಹೆಚ್ಚಿಸಿದೆ. ಏಪ್ರಿಲ್ ತಿಂಗಳ ಆರಂಭದಲ್ಲಿ ಸರಾಸರಿ 200 ಟನ್ನಷ್ಟು ಉತ್ಪಾದಿಸಲಾಗುತ್ತಿದ್ದ ವೈದ್ಯಕೀಯ ಆಮ್ಲಜನಕದ ಉತ್ಪಾದನೆ ಈಗಾ ಸರಾಸರಿ 680 ಟನ್ಗೆ ಏರಿಸಿದೆ.ಈ ಮೊದಲು ಉತ್ಪಾದಿಸುತ್ತಿದ್ದ ವೈದ್ಯಕೀಯ ಆಮ್ಲಜನಕಕ್ಕೆ ಹೋಲಿಸಿದರೆ ಜೆಎಸ್ಡಬ್ಲ್ಯೂ ಸ್ಟೀಲ್ ಈಗ ಉತ್ಪಾದನೆಯನ್ನು ಹತ್ತಾರು ಪಟ್ಟು ಹೆಚ್ಚಿಸಿದೆ. ಏಪ್ರಿಲ್ ತಿಂಗಳಲ್ಲಿ ಜೆಎಸ್ಡಬ್ಲ್ಯೂ ಸ್ಟೀಲ್ ವಿಜಯನಗರ ವಕ್ರ್ಸ್ 11,500 ಟನ್ಗಿಂತಲೂ ಹೆಚ್ಚಿನ ವೈದ್ಯಕೀಯ ಆಮ್ಲಜನಕವನ್ನು ಪೂರೈಸಿದೆ. ಇದರ ಬಹುಪಾಲು ಭಾಗ ಕರ್ನಾಟಕ ರಾಜ್ಯಕ್ಕೆ ಪೂರೈಕೆಯಾಗುತ್ತಿದೆ. “ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಮ್ಲಜನಕದ ಲಭ್ಯತೆಯನ್ನು ಹೆಚ್ಚಿಸಲು ನಾವು ಹಲವಾರು ಕ್ರಮಗಳನ್ನು ಕೈಗೊಂಡಿದ್ದೇವೆ. ಉಕ್ಕಿನ ಉತ್ಪಾದನೆಯ ಆಪ್ಟಿಮೈಸೇಶನ್ ಮತ್ತು ವೈದ್ಯಕೀಯ ಆಮ್ಲಜನಕದ ಲಭ್ಯತೆಯನ್ನು ಹೆಚ್ಚಿಸುತ್ತದೆ. ಸಾಂಕ್ರಾಮಿಕ ಪರಿಣಾಮವನ್ನು ಕಡಿಮೆ ಮಾಡಲು ಸರ್ಕಾರ ಮತ್ತು ಆರೋಗ್ಯ ಕ್ಷೇತ್ರಕ್ಕೆ ಎಲ್ಲ ಬೆಂಬಲವನ್ನು ನೀಡಲು ನಾವು ಯಾವಾಗಲೂ ಬದ್ಧರಾಗಿರುತ್ತೇವೆ. ಸಮಾಜಕ್ಕೆ ಆಗಿರುವ ಕಷ್ಟಗಳನ್ನು ಕಡಿಮೆ ಮಾಡುವಲ್ಲಿ ನಮ್ಮ ಪ್ರಾಮಾಣಿಕ ಪ್ರಯತ್ನಗಳು ಮುಂದುವರಿಯುತ್ತವೆ” ಎಂದು ಜೆಎಸ್ಡಬ್ಲ್ಯೂಸ್ಟೀಲ್ ವಿಜಯನಗರ ವಕ್ಸ್ರ್ನ ಅಧ್ಯಕ್ಷ ರಾಜಶೇಖರ್ ಪಟ್ಟಣಶೆಟ್ಟಿ ಹೇಳಿದರು. 

ಜೀವಗಳನ್ನು ಉಳಿಸಲು ಈ ನಿರ್ಣಾಯಕ ಕಾಲದಲ್ಲಿ ವೈದ್ಯಕೀಯ ಆಮ್ಲಜನಕದ ಪೂರೈಕೆಯನ್ನು ಮತ್ತಷ್ಟು ಹೆಚ್ಚಿಸಲು ಜೆಎಸ್ಡಬ್ಲ್ಯೂ ಸ್ಟೀಲ್ ಬದ್ಧವಾಗಿದೆ. ನಮ್ಮ ರಾಷ್ಟ್ರದ ಹಿತದೃಷ್ಟಿಯಿಂದ ಆಮ್ಲಜನಕದ ಪೂರೈಕೆ ಮಾಡಲು ಸಂಸ್ಥೆಯು ಎಲ್ಲಾ ರೀತಿಯ ಪ್ರಯತ್ನವನ್ನು ಮಾಡುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Post a Comment

0 Comments

Ad Code

Responsive Advertisement