ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳನ್ನು ಬಂದ್ ಮಾಡಿ ಕೊಡಗು ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಫೆಬ್ರವರಿ 3ರ ಸಂಜೆಯಿಂದಲೂ ಜಿಲ್ಲೆಯ ಎಲ್ಲ ಪ್ರವಾಸಿ ತಾಣಗಳನ್ನು ಬಂದ್ ಮಾಡುವಂತೆ ಆದೇಶಿಸಿದೆ.
ಏಪ್ರಿಲ್ 20ರವರೆಗೆ ಪ್ರವಾಸಿ ತಾಣಗಳು ಮುಚ್ಚಲಿವೆ. ಕೊಡಗಿನ ಪ್ರಸಿದ್ದ ಪ್ರವಾಸಿ ತಾಣ, ಮಂಜಿನ ನಗರಿಯಲ್ಲಿ ಇರುವ ಪ್ರವಾಸಿಗರ ಹಾಟ್ ಸ್ಪಾಟ್ ಕೂಡ ಆಗಿರುವ ರಾಜಾಸೀಟ್ ಬಂದ್ ಆಗಿದೆ.
ಅಷ್ಟೇ ಅಲ್ಲ, ಮಡಿಕೇರಿಯ ಹೊರವಲಯದಲ್ಲಿ ಇರುವ ಅಬ್ಬಿ ಫಾಲ್ಸ್, ದುಬಾರೆ ಸಾಕಾನೆ ಶಿಬಿರ, ರ್ಯಾಫ್ಟಿಂಗ್ ಬಂದ್ ಮಾಡಲಾಗಿದೆ. ಜೊತೆಗೆ ತೀರ್ಥ ಕ್ಷೇತ್ರ ಕಾವೇರಿಯ ಉಗಮಸ್ಥಾನ ತಲಕಾವೇರಿ, ಭಾಗಮಂಡಲ ಸೇರಿದಂತೆ ಎಲ್ಲ ಪ್ರವಾಸಿ ತಾಣಗಳನ್ನು ಬಂದ್ ಮಾಡಲಾಗಿದೆ. ಪ್ರವಾಸಿ ತಾಣಗಳನ್ನು ಶನಿವಾರ ಸಂಜೆಯಿಂದಲೂ ಇದ್ದಕ್ಕಿದ್ದಂತೆ ಬಂದ್ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಮಾಹಿತಿ ಇಲ್ಲದಿದ್ದರಿಂದ ಸಾಕಷ್ಟು ಪ್ರವಾಸಿಗರು ಸಮಸ್ಯೆಗೆ ಸಿಲುಕುವಂತಾಯಿತು. ಅದರಲ್ಲೂ ರಜಾ ದಿನವಾದ ಭಾನುವಾರವೂ ಮಾಹಿತಿ ಇಲ್ಲದೆ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಬಂದಿದ್ದ ನೂರಾರು ಪ್ರವಾಸಿಗರು ನಿರಾಶರಾಗಿ ಹಿಂದಿರುಗಬೇಕಾಯಿತು.ಉಡುಪಿ ಮಂಗಳೂರು ಎಲ್ಲಾ ಪ್ರವಾಸಿ ತಾಣಗಳು ಓಪನ್ ಇವೆ. ಆದರೆ, ಕೊಡಗಿನ ಪ್ರವಾಸಿ ತಾಣಗಳನ್ನು ಇದ್ದಕ್ಕಿದ್ದಂತೆ ಬಂದ್ ಮಾಡಿರುವುದರಿಂದ ದೂರದ ರಾಯಚೂರು, ಬೆಳಗಾವಿ ಜಿಲ್ಲೆಗಳಿಂದ ಬಂದವರಿಗೆ ತೊಂದರೆಯಾಗಿದೆ
0 Comments