ರಮೇಶ್ ಜಾರಕಿಹೊಳಿ ವಿರುದ್ಧದ ಸಿಡಿ ಪ್ರಕರಣ ಸಂಬಂಧ ಮಾಜಿ ಸಚಿವ ಡಿ ಸುಧಾಕರ್ ಅವರಿಗೆ ನೋಟೀಸ್ ನೀಡಿದೆ. ಈ ಪ್ರಕರಣದ ಸಂತ್ರಸ್ತ ಯುವತಿಗೆ ಡಿ ಸುಧಾಕರ್ ಅವರು ಹಣ ಟ್ರಾನ್ಸ್ಫರ್ ಮಾಡಿರುವ ಮಾಹಿತಿ ತನಿಖಾಧಿಕಾರಿಗಳಿಗೆ ಸಿಕ್ಕಿದೆ. ಅದಕ್ಕಾಗಿ ಬ್ಯಾಂಕ್ ಅಕೌಂಟ್ ವಿವರಗಳೊಂದಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ಅಧಿಕಾರಿಗಳು ಡಿ ಸುಧಾಕರ್ ಅವರಿಗೆ ನೀಡಿರುವ ನೋಟೀಸ್ನಲ್ಲಿ ಸೂಚಿಸಿದ್ದಾರೆನ್ನಲಾಗಿದೆ.
6 ತಿಂಗಳಿಂದ ಮಾಜಿ ಶಾಸಕರೂ ಆದ ಸುಧಾಕರ್ ಅವರು ಸಂತ್ರಸ್ತ ಯುವತಿ ಜೊತೆ ಸಂಪರ್ಕದಲ್ಲಿದ್ದರೆನ್ನಲಾಗುತ್ತಿದೆ. ಯುವತಿಗೆ ಇವರಿಂದ ಅತಿ ಹೆಚ್ಚು ಮೊಬೈಲ್ ಕರೆಗಳು ಹೋಗಿವೆ. ಯುವತಿಯಿಂದ ಸುಧಾಕರ್ಗೆ 30ಕ್ಕೂ ಹೆಚ್ಚು ಬಾರಿ ಕರೆಗಳು ಹೋಗಿವೆ. ಆರ್ಟಿ ನಗರದಲ್ಲಿರುವ ಯುವತಿಯ ಬ್ಯಾಂಕ್ ಖಾತೆಗೆ ಡಿ ಸುಧಾಕರ್ ಅವರ ಅಕೌಂಟ್ನಿಂದ ಹಣ ವರ್ಗಾವಣೆ ಆಗಿರುವ ಮಾಹಿತಿ ತನಿಖಾಧಿಕಾರಿಗಳಿಗೆ ಲಭಿಸಿರುವ ಹಿನ್ನೆಲೆಯಲ್ಲಿ ನೋಟೀಸ್ ಕೊಟ್ಟಿದ್ದಾರೆ. ಬುಧವಾರದ ಒಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಸಂತ್ರಸ್ತ ಯುವತಿಗೆ ಡಿ ಸುಧಾಕರ್ ಕಡೆಯಿಂದ ಹಣ ವರ್ಗಾವಣೆ ಆಗಿರುವ ಬಗ್ಗೆ ನಿನ್ನೆ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿತ್ತು. ಈ ವೇಳೆ, ಮಾಜಿ ಸಚಿವರು ಈ ಸುದ್ದಿಯನ್ನ ಸ್ಪಷ್ಟವಾಗಿ ಅಲ್ಲಗಳೆದಿದ್ದಾರೆ. ತನಗೂ ಸಂತ್ರಸ್ತೆಗೂ ಯಾವುದೇ ಸಂಬಂಧ ಇಲ್ಲ. ತಾನು ಯುವತಿಯ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿರುವುದೆಲ್ಲಾ ಸುಳ್ಳು ಎಂದು ಹೇಳಿದ್ಧಾರೆ. ಯುವತಿ ಜೊತೆ ಫೋನ್ನಲ್ಲಿ ಮಾತನಾಡುತ್ತಿದ್ದ ವಿಚಾರವನ್ನ ತಳ್ಳಿಹಾಕದ ಸುಧಾಕರ್, ಯುವತಿಯ ಕಾಲ್ ಲಿಸ್ಟ್ನಲ್ಲಿ ನನ್ನ ಹೆಸರು ಇರಬಹುದು.

0 Comments