ಕೋರೋನಾ ಹಾವಳಿಯ ಅಟ್ಟಹಾಸ ಮುಂದುವರೆದ್ದು, ಎರಡನೇ ಅಲೆ ತಾಂಡವವಾಡುತ್ತಿರುವುದು ದಿಟ. ಕೋರೋನಾ 2ನೇ ಅಲೆಗೆ ಮಧ್ಯ ವಯಸ್ಕರೂ ಬಲಿಯಾಗುತ್ತಿರುವುದು ದಿಗ್ಭ್ರಮೆ ಮೂಡಿಸಿದೆ. ಅಲ್ಲದೇ ಹಿರಿಯ ನಾಗರೀಕರೂ ಪ್ರಾಣ ಕಳೆದುಕೊಳ್ಳುತ್ತಿರುವುದು ದುರ್ದೈವವೇ ಸರಿ.
ಈಗಾಗಲೇ ಸಾಕಷ್ಟು ರಾಜಕಾರಣಿಗಳು ಅವರ ಸಂಬಂಧಿಕರಿಗೂ ಕೋವಿಡ್ ಬಿಟ್ಟಿಲ್ಲ. ಹಲವು ರಾಜಕಾರಣಿಗಳು ಮಹಾಮಾರಿ ಕೋವಿಡ್‍ಗೆ ಪ್ರಾಣ ತೆತ್ತಿದ್ದಾರೆ. ಇದೀಗ ಜೆ.ಡಿ.ಎಸ್. ಮುಖಂಡ ವಿಧಾನ ಪರಿಷತ್ ಮಾಜಿ ಸದಸ್ಯ ಟಿ.ಎ. ಶರವಣ ಅವರ ತಾಯಿ ಧನಲಕ್ಷ್ಮಮ್ಮ ಅವರಿಗೆ ಕೋರೋನಾ ದೃಢಪಟ್ಟಿದ್ದು,ಚಿಕಿತ್ಸೆ ಫಲಕಾರಿಯಾಗದೆ ಇಂದು ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಶರವಣ ಅವರಿಗೆ ಧೈರ್ಯ ಸ್ಥೈರ್ಯ ಭಗವಂತನು ಕರುಣಿಸಲಿ ಎಂದು ಪತ್ರಿಕಾ ಬಳಗ ಕೋರುತ್ತದೆ.

0 Comments