Ticker

6/recent/ticker-posts

Ad Code

Responsive Advertisement

ಕೆಲಸಕ್ಕೆ ಹಾಜರಾಗದಿದ್ದರೆ ವೇತನ ಇಲ್ಲ: ಎಂಡಿ ಶಿಖಾ ಎಚ್ಚರಿಕೆ

ಸಾರಿಗೆ ನೌಕರರು ಕೆಲಸಕ್ಕೆ ಹಾಜರಾಗದಿದ್ದರೆ ಮಾರ್ಚ್ ತಿಂಗಳ ವೇತನ ಕಡಿತಗೊಳಿಸಲಾಗುವುದು ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಶಿಖಾ ಎಚ್ಚರಿಕೆ ಹೇಳಿಕೆ ನೀಡಿದ್ದಾರೆ. ಯಶವಂತಪುರ ಡಿಪೆÇೀ ಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ನೋ ವರ್ಕ್ ನೋ ಪೇ’ ಎಂಬುದನ್ನು ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ಮುಷ್ಕರ ನಿರತರ ಮನವೊಲಿಕೆಗೆ ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ಉಪಮುಖ್ಯಮಂತ್ರಿಗಳು ಕೂಡ ಸಭೆ ನಡೆಸಿ ಸಂಧಾನ ಯತ್ನ ನಡೆಸಿದ್ದಾರೆ ಎಂದರು.


ಸಾರಿಗೆ ನಿಗಮಗಳು ಈಗಾಗಲೇ ನಷ್ಟದಲ್ಲಿವೆ. ಆದರೂ ನೌಕರರು ಪ್ರತಿಭಟನೆ ಮುಂದುವರಿಸಿದ್ದಾರೆ. ಅವರು ಕೆಲಸಕ್ಕೆ ಹಾಜರಾಗಬೇಕು. ಕರ್ತವ್ಯಕ್ಕೆ ಹಾಜರಾಗುವುದಿಲ್ಲವೋ ಅವರಿಗೆ ನಾವು ವೇತನ ನೀಡುವುದಿಲ್ಲ ಎಂದಿದ್ದಾರೆ. ಈಗಾಗಲೇ 135 ಬಿಎಂಟಿಸಿ ಬಸ್‍ಗಳು ಮಾತ್ರ ಇಂದು ನಗರದಲ್ಲಿ ಸಂಚಾರ ಮಾಡುತ್ತಿವೆ. ಖಾಸಗಿ ಬಸ್ ಮೂಲಕವೂ ಕೂಡ ಸಂಚಾರ ನಡೆದಿದೆ.

ಜನರಿಗೆ ಮೊದಲೇ ಮಾಹಿತಿ ಇದ್ದ ಕಾರಣ ಹೆಚ್ಚು ಸಮಸ್ಯೆಯಾಗಿಲ್ಲ. ರಾಜ್ಯದಿಂದ ಇತರೆ ಜಿಲ್ಲೆಗಳಿಗೆ ಯುಗಾದಿ ವೇಳೆ ರೈಲು ಹೆಚ್ಚಳ ಮಾಡಲು ಚರ್ಚೆ ಮಾಡಲಾಗಿದೆ. ಈ ಸಂಬಂಧ ರೈಲ್ವೆ ಇಲಾಖೆಗೂ ಕೂಡ ಮನವಿ ಮಾಡಲಾಗುತ್ತದೆ ಎಂದು ಶಿಖಾ ತಿಳಿಸಿದರು.


Post a Comment

0 Comments

Ad Code

Responsive Advertisement