ಬಳ್ಳಾರಿ ಏ 23. ಇದೆ 27 ರಂದು ನಡೆಯಲಿರುವ ಪಾಲಿಕೆ ಚುನಾವಣೆ ರಾಜ್ಯ, ದೇಶದ ಮಟ್ಟದ ಗಮನ ಸೆಳೆದಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಆರ್ಥಿಕ ವಾಗಿ ಪ್ರಭಲವಾಗಿರುವÀ ಅಭ್ಯರ್ಥಿಗಳನ್ನು ಕಣದಲ್ಲಿ ಇಳಿಸಿವೆ. 30ನೇ ವಾರ್ಡ್‍ನಿಂದ ಗ್ರಾಮೀಣ ಶಾಸಕರ ನಾಗೇಂದ್ರ ನವರÀ ಕಟ್ಟಾ ಬೆಂಬಲಿಗ ಕೌಲ್ ಬಜಾರ್‍ನ ಎನ್.ಎಂ.ಡಿ. ಭಾಷಾನವರ ಪುತ್ರ ಆಸೀಫ್ (ಕಾಂಗ್ರೆಸ್) ಗೆ ಸ್ಪರ್ದಿಸಿದ್ದಾರೆ. ಬಿಜೆಪಿಯಿಂದ ನಾಗರಾಜ್ ರೆಡ್ಡಿ ಸ್ಪರ್ಧೆಯಲ್ಲಿ ಇದ್ದಾರೆ. ಅತಿಹೆಚ್ಚಿನ ಮುಸ್ಲಿಮ್ ಮತದಾರರು ಇರುವ ವಾರ್ಡ್‍ನಲ್ಲಿ ಆಸೀಫ್ ಗೆಲುವು ಖಚಿತ ವಾಗಿದೆಂದು ಅಲ್ಲಿನ ಮತದಾರರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಯುವನಾಯಕ ಜನರ ಕಷ್ಟಗಳಲ್ಲಿ ಭಾಗಿಯಾಗುವ, ಜನರಿಗೆ ಆರ್ಥಿಕ ವಾಗಿ,ಅಭಿವೃದ್ಧಿ ವಿಚಾರದಲ್ಲಿ ಈವರೆಗೆ ಯಾವುದೇ ರಾಜಕೀಯ ಹುದ್ದೆ ಇಲ್ಲದಿದ್ದರೂ, ಜನರ ಪರವಾಗಿ ನಿಂತು ಸಮಾಜ ಸೇವೆ ಮಾಡಿ ಜನರಿಂದ ಮೆಚ್ಚುಗೆ ಪಡೆಸಿದ್ದಾರೆ ಎಂದು ಅಲ್ಲಿನ ಜನರ ತಿಳಿಸಿದ್ದಾರೆ.ಬಿಜೆಪಿ ಸರ್ಕಾರದ ವತಿಯಿಂದ ಜನರ ಬದುಕು ಬೀದಿಗೆ ಬಂದಿದೆ, ಎಲ್ಲ ದರಗಳನ್ನು ಜಾಸ್ತಿ ಮಾಡಿದ್ದಾರೆ, ಪಾಲಿಕೆ ಟ್ಯಾಕ್ಸ್‍ಗಳು, ನೀರಿನ ಬಿಲ್‍ಗಳು,ದಿನ ನಿತ್ಯ ಬಳೆಸುವ ದಿನಸಿ,ಎಣ್ಣೆ ರೇಟುಗಳನ್ನು ಕೇಳಿದರೇ ಸಾಮಾನ್ಯ, ಕಡುಬಡ ಜನರು ಜೀವನ ಮಾಡಲು ಸಾಧ್ಯವಿಲ್ಲ ಎಂದು ಜನರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಈತರ ಎಲ್ಲಾ ಬೆಲೆಗಳು ಜಾಸ್ಥಿಮಾಡಿದ್ದಾರೆ. ಪಕ್ಷದ ಪರವಾಗಿ ಅಂದ್ರೆ ಬಿಜೆಪಿ “ಮತ” ಕಡಿಮೆಯಾಗುತ್ತದೆ ಎಂದರು.ಇತ್ತೀಚೆಗೆ ಜಾತಿ ಜಾತಿಲೆಕ್ಕಾಚಾರದಲ್ಲಿ ಮುಸ್ಲಿಮ್‍ಗಳ ವಿಚಾರದಲ್ಲಿ ಸೋಮಶೇಖರ್ ರೆಡ್ಡಿಯವರು ಕಠಿಣವಾದ ಶಬ್ದವು ಬಳಿಕೆ ಮಾಡಿದ್ದರು, ಇವುಗಳು ಬಿಜೆಪಿಗೆ ಹಿನ್ನಡೆಯನ್ನು ಮಾಡುವ ಸಾದ್ಯತೆ ಇದೇ ಅಂತಾರೆ ಜನರು. ಬಳ್ಳಾರಿ ಪಾಲಿಕೆ ನಲ್ಲಿ ಮಹತ್ತರ ಪಾತ್ರ ಅಂದರೆ ಅದು ಕೌಲ್ ಬಜಾರ್,ಅತಿ ಹೆಚ್ಚಿನ ಮುಸ್ಲಿಮ್ ಸಮುದಾಯದ ಜನರು ಇರುವ ಪ್ರದೇಶ, ಕಾಂಗ್ರೆಸ್‍ಗೆ ಬಿಟ್ಟರೆ ಇತರರಿಗೆ ಮತ ಹಾಕುವ ಅಭ್ಯಾಸ ಇಲ್ಲವೇ ಇಲ್ಲ ಎಂದು ಕೆಲವರು ತಿಳಿಸಿದ್ದಾರೆ.
ಆಸೀಫ್: ಈವಾರ್ಡಿನಲ್ಲಿ ಅಭಿವೃದ್ದಿ ಕೆಲಸಗಳು ಆಗಬೇಕಿದೆ. ಒಳಚರಂಡಿ, ಕುಡಿಯುವ ಶುಧ್ದ ನೀರು,ವಿದ್ಯುತ್,ರಸ್ತೆಗಳು ಇನ್ನಿತರ ಮೂಲಭೂತ ಸೌಕರ್ಯಗಳು ಮಾಡಬೇಕಿದೆ ಎಂದು ಮತದಾರರು ನನ್ನಲ್ಲಿ ಕೇಳಿಕೊಂಡಿದ್ದಾರೆ ಎಂದರು. ಈವಾರ್ಡಿನ ಜನರು ನನ್ನನ್ನು ಅತಿ ಹೆಚ್ಚಿನ ಮತಗಳಿಂದ ಆರಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು. ನಿಮ್ಮ ಅಮೂಲ್ಯವಾದ ಮತವನ್ನು ಕೈ ಗುರ್ತಿಗೆ ನೀಡಬೇಕೆಂದು, ನಿಮ್ಮ ಸಮಸ್ಯೆಗಳೇನೇ ಇದ್ದರೂ ಪರಿಷ್ಕರಿಸುತ್ತೇನೆ, ನಾನು 24*7 ಬಳ್ಳಾರಿಯಲ್ಲೇ ಇದ್ದು ನಿಮ್ಮ ಸೇವೆ ಮಾಡುತ್ತೇನೆ ಎಂದರು.
ವರದಿ.ಪಂಪನಗೌಡ.ಬಿ.ಬಳ್ಳಾರಿ.9886633682.

0 Comments