Ticker

6/recent/ticker-posts

Ad Code

Responsive Advertisement

3 ನೇ ವಾರ್ಡ್ ಸ್ವತಂತ್ರ ಅಭ್ಯರ್ಥಿ ಪ್ರಭಂಜನ್ ಅವರಿಗೆ ಕಲೀಂ ಬೆಂಬಲ

ಬಳ್ಳಾರಿ ಏ 23.: ಇಲ್ಲಿನ ಬಳ್ಳಾರಿ ಮಹಾನಗರ ಪಾಲಿಕೆಯ 3ನೇ ವಾರ್ಡ್‍ನ ಪಕ್ಷೇತರ ಅಭ್ಯರ್ಥಿ ಎಂ.ಪ್ರಭಂಜನ್ ಕುಮಾರ್ ಅವರಿಗೆ ಅದೇ ವಾರ್ಡ್‍ನ ಮುಖಂಡ ಕಲೀಂ ಅವರು ಬೆಂಬಲ ವ್ಯಕ್ತಪಡಿಸಿ,  ಅವರ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದ್ದಾರೆ.ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಮೂರನೇ ವಾರ್ಡ್ ನಲ್ಲಿ ಪಕ್ಷೇತರ ಅಭ್ಯರ್ಥಿ ಪ್ರಭಂಜನ್ ಗುರುವಾರ ಮನೆಮನೆಗೆ ಭೇಟಿ ನೀಡಿ ಮತ ಯಾಚನೆ ಮಾಡುತ್ತಿದ್ದ ವೇಳೆ ಸ್ವಯಂ ಪ್ರೇರಣೆಯಿಂದ ಬಂದ ವಾರ್ಡ್‍ನ ಮುಖಂಡ ಕಲೀಂ ಅವರು ಚುನಾವಣೆಯಲ್ಲಿ ಪ್ರಭಂಜನ್ ಅವರ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದ್ದಾರೆ.ಈ ವೇಳೆ ಮಾತನಾಡಿದ ಅವರು, ಪ್ರಭಂಜನ್ ಅವರು ವಿದ್ಯಾವಂತರಾಗಿದ್ದಾರೆ. ಕಳೆದ ಎರಡ್ಮೂರು ವರ್ಷಗಳಿಂದ ಜನರ ನಡುವೆ ಕಾಣಿಸಿಕೊಳ್ಳುತ್ತಿದ್ದಾರೆ. ವಾರ್ಡ್ ನಲ್ಲಿ ಉಚಿತ ಆರೋಗ್ಯ ತಪಾಸಣೆ, ಉಚಿತ ನೇತ್ರ ತಪಾಸಣೆ ಶಿಬಿರಗಳನ್ನು ಆಯೋಜಿಸಿ ಬಡ ಜನರ ಬಗ್ಗೆ ಕಾಳಜಿ ವಹಿಸಿದ್ದಾರೆ. ಜತೆಗೆ ಹಲವರಿಗೆ ಉಚಿತವಾಗಿ ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನೂ ಮಾಡಿಸಿದ್ದಾರೆ. ಹೀಗಾಗಿ ಇಂತಹ ವಿದ್ಯಾವಂತರು ಪಾಲಿಕೆ ಸದಸ್ಯರಾದರೆ ಇನ್ನಷ್ಟು ಜನಪರ ಕೆಲಸಗಳನ್ನು ಮಾಡಲು ಸಾಧ್ಯವಾಗಲಿದೆ. ಹಾಗಾಗಿ ಚುನಾವಣೆಯಲ್ಲಿ ಅವರ ಗೆಲುವಿಗೆ ಶ್ರಮಿಸುವುದಾಗಿ ಭರವಸೆ ನೀಡಿದ್ದಾರೆ.ಈ ವೇಳೆ ಪಾಲಿಕೆ ಮಾಜಿ ಸದಸ್ಯೆ ಪರ್ವಿನ್ ಬಾನು, ರಾಮಾಂಜಿನಿ, ಶಂಕರ್, ಸಿದ್ದೇಶ್ವರ್, ಸೂರಿ, ಮಬ್ದುಲ್ಲಾ, ಗೈಬೂ, ಇದ್ರೀಸ್, ಸಾದೀಕ್ ಸೇರಿ ಸ್ಥಳೀಯ ಹಲವು ಮುಖಂಡರು, ಯುವಕರು ಇದ್ದರು.



ವರದಿ.ಪಂಪನಗೌಡ.ಬಿ.ಬಳ್ಳಾರಿ.9886633682.

Post a Comment

0 Comments

Ad Code

Responsive Advertisement