ಹುಳಿಯಾರು: ಲಾಕ್‍ಡೌನ್‍ನಿಂದಾಗಿ ಸಂಕಷ್ಟಕ್ಕೀಡಾಗುವ ಅರ್ಚಕರು ಮತ್ತು ಪುರೋಹಿತರಿಗೆ ಪ್ಯಾಕೇಜ್ ಘೋಷಿಸುವಂತೆ ತಾಲ್ಲೂಕು ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ ಅಧ್ಯಕ್ಷ ತೇಜುಶೆಟ್ಟಿಕೆರೆ ಒತ್ತಾಯಿಸಿದ್ದಾರೆ. ಲಾಕ್‍ಡೌನ್ ನೆಪದಲ್ಲಿ ಸರ್ಕಾರ ಹಾಗೂ ಖಾಸಗಿ ಸ್ವಾಮ್ಯಕ್ಕೆ ಒಳಪಟ್ಟ ದೇವಾಲಯಗಳಲ್ಲಿ ಭಕ್ತರ ಪ್ರವೇಶ ಮತ್ತು ಅವರು ನಡೆಸುವ ಸೇವಾ ಕೈಂಕರ್ಯಗಳನ್ನು ಕೂಡ ಸ್ಥಗಿತಗೊಳಿಸಿದೆ.
ಹಾಗಾಗಿ ಕೆಲವೊಂದು ದೇವಾಲಯ ಗಳನ್ನು ಹೊರತು ಪಡಿಸಿ ಗ್ರಾಮಾಂತರ ಪ್ರದೇಶ ಗಳಲ್ಲಿದ್ದ ದೇವಾಲಯಗಳಲ್ಲಿನ ಅರ್ಚಕರ ಬದುಕು ಬಹಳ ಶೋಚನೀಯ ವಾಗುತ್ತದೆ. ಪವಿತ್ರ ಅರ್ಚಕ ಮತ್ತು ಪುರೋಹಿತ ವೃತ್ತಿ ಮಾಡುವವರು ತಮ್ಮ ಪರಿಸ್ಥಿತಿಯನ್ನು ಹೇಳುವಂತಿಲ್ಲ, ಅನುಭವಿಸುವಂತಿಲ್ಲ ಎನ್ನುವಂತಾ ಗುತ್ತದೆ. ಸರ್ಕಾರ ಇವರ ನೆರವಿಗೆ ಬರುವ ಅಗತ್ಯತೆ ಇದೆ ಎಂದಿದ್ದಾರೆ. ಕಳೆದ ವರ್ಷ ಕೊರೊನಾದಿಂದಾಗಿ ಏಳೆಂಟು ತಿಂಗಳು ಆದಾಯವಿಲ್ಲದೆ ಅರ್ಚಕ ಮತ್ತು ಪುರೋಹಿತ ವೃತ್ತಿ ಮಾಡುವವರು ಬಹಳ ತೊಂದರೆ ಅನುಭವಿಸಿದ್ದರು. ಈಗ ಲಾಕ್‍ಡೌನ್ ಜಾರಿಯಲ್ಲಿದ್ದು ಲಾಕ್‍ಡೌನ್ ತೆರವಾದರೂ ಮಾಸ್ಕ್, ವ್ಯಕ್ತಿ ಅಂತರ, ಸೇರಿದಂತೆ ಕೋವಿಡ್ ನಿಯಮಗಳನ್ನು ಪಾಲಿಸಿ ವೃತ್ತಿ ಮುಂದುವರಿಸುವ ಅನಿವಾರ್ಯತೆ ಸೃಷ್ಠಿಯಾಗುತ್ತದೆ. ಹಾಗಾಗಿ ಈ ವರ್ಷವೂ ಸಹ ಕಳೆದ ವರ್ಷದಂತೆ ಆದಾಯ ನಷ್ಟವಾಗುತ್ತದೆ. ಅರ್ಚಕ ಮತ್ತು ಪುರೋಹಿತರ ವಲಯ ಮತ್ತಷ್ಟು ಸಂಕಷ್ಟಕ್ಕೆ ಈಡಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರ ನೆರವಿಗೆ ಬರುವಂತೆ ತೇಜು ಶೆಟ್ಟಿಕೆರೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.

0 Comments