Ticker

6/recent/ticker-posts

Ad Code

Responsive Advertisement

ವಿಟಿಯು ಇಂಜಿನಿಯರಿಂಗ್, ಪಾಲಿಟೆಕ್ನಿಕ್ ಪರೀಕ್ಷೆ ಮುಂದೂಡಿಕೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಅಬ್ಬರ ಹೆಚ್ಚಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 14 ದಿನಗಳ ಕೊರೋನಾ ಕಫ್ರ್ಯೂ ಘೋಷಣೆ ಮಾಡಿದ್ದು, ಇದರ ಬೆನ್ನಲ್ಲೇ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪರೀಕ್ಷೆಗಲನ್ನು ಮುಂದೂಡಲಾಗಿದೆ ಎಂದು ತಿಳಿದುಬಂದಿದೆ. ವಿಟಿಯು ಇಂಜಿನಿಯರಿಂಗ್, ಪಾಲಿಟೆಕ್ನಿಕ್ ಪರೀಕ್ಷೆ ಮುಂದೂಡಿಕೆ ಮಾಡಲಾಗಿದೆ. ಕಫ್ರ್ಯೂ ಮುಗಿದ ಬಳಿಕ ಪರೀಕ್ಷಾ ದಿನಾಂಕ ಪ್ರಕಟಿಸಲು ನಿರ್ಧರಿಸಲಾಗಿದೆ. ಎಲ್ಲ ಪ್ರಾಯೋಗಿಕ ಪರೀಕ್ಷೆಗಳು ಸಹ ಮುಂದೂಡಲ್ಪಟ್ಟಿವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ ಮಾಹಿತಿ ನೀಡಿದ್ದಾರೆ. ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ಇಂಜಿನಿಯರಿಂಗ್ ಪರೀಕ್ಷೆಗಳು ಏಪ್ರಿಲ್ 19ರಿಂದ ಆರಂಭವಾಗಬೇಕಿತ್ತು. ಶನಿವಾರ, ಭಾನುವಾರ ಹೊರತುಪಡಿಸಿ ಉಳಿದ ದಿನ ಪರೀಕ್ಷೆ ನಡೆಯಲಿದೆ ಎಂದು ವಿಟಿಯು ಕುಲಪತಿ ಡಾ.ಕರಿಸಿದ್ದಪ್ಪ ಮಾಹಿತಿ ನೀಡಿದ್ದರು.


ಕೊರೊನಾ 2ನೇ ಅಲೆ ಇಡೀ ದೇಶವನ್ನೆ ಕಾಡುತ್ತಿದೆ. ಕೊರೊನಾ ಹೊಡೆತಕ್ಕೆ ಕರ್ನಾಟಕ ಅಕ್ಷರಶಃ ತತ್ತರಿಸಿದೆ. ಮಾಹಾಮಾರಿ ಸೋಂಕು ನಿಯಂತ್ರಣಕ್ಕೆ ಸರ್ಕಾರ ಕಠಿಣ ನಿಯಮಗಳನ್ನೂಜಾರಿಗೆ ತಂದಿದೆ. ಇಂದಿನಿಂದ ಮೇ 4ರವರೆಗೂ ನೈಟ್ ಕಫ್ರ್ಯೂ ಜೊತೆ ಜೊತೆಗೆ ವೀಕೆಂಡ್ ಕಫ್ರ್ಯೂವನ್ನ ಹೇರಿ ಆದೇಶ ಹೊರಡಿಸಿದೆ. 

ಹಾಗೂ ಶಾಲಾ-ಕಾಲೇಜು ಸೇರಿ ಎಲ್ಲಾ ಶಿಕ್ಷಣ ಸಂಸ್ಥೆಗಳು ಬಂದ್ ಮಾಡುವಂತೆ ಮಾರ್ಗಸೂಚಿಯಲ್ಲಿ ಸರ್ಕಾರ ಉಲ್ಲೇಖಿಸಿದೆ. ಹೀಗಾಗಿ ಬಹುತೇಕ ಕಾಲೇಜು ಪರೀಕ್ಷೆಗಳು ಮುಂದೂಡಲ್ಪಟ್ಟಿವೆ.

 ಆದರೆ, ಈ ಸಂದರ್ಭದಲ್ಲಿ ಪರೀಕ್ಷೆ ನಡೆಸೋದು ಎಷ್ಟು ಸರಿ ಎನ್ನುವ ಪ್ರಶ್ನೆ ಮೂಡಿತ್ತು. ಸರ್ಕಾರ 14 ದಿನಗಳ ಕೊರೋನಾ ಕಫ್ರ್ಯೂ ಜಾರಿ ಮಾಡಿದ ಬಳಿಕವಂತೂ ಸಾಕಷ್ಟು ಜನರು ಪರೀಕ್ಷೆ ವಿಚಾರವಾಗಿ ಸಾಕಷ್ಟು ಟೀಕೆಗಳು ಹಾಗೂ ಪ್ರಶ್ನೆಗಳನ್ನು ಎತ್ತಿದ್ದರು. ಸರ್ಕಾರ ಸಾರಿಗೆ ಸೇವೆಗಳನ್ನು ಬಂದ್ ಮಾಡಿದೆ. ನಾವು ಹೇಗೆ ಪರೀಕ್ಷೆ ಬರೆಯುವುದು ಎಂದು ಹಲವರು ಪ್ರಶ್ನೆ ಮಾಡಿದ್ದರು. ವಿವಿಯು ಕೂಡಲೇ ಪರೀಕ್ಷೆಗಳನ್ನು ಮುಂದೂಡಬೇಕೆಂದು ಹಲವರು ಆಗ್ರಹಿಸಿದ್ದರು. 

ರಾಣಿ ಚೆನ್ನಮ್ಮ ವಿವಿಯ ಎಲ್ಲಾ ಪರೀಕ್ಷೆ ಮುಂದೂಡಿಕೆ

14 ದಿನಗಳ ಕೊರೋನಾ ಕಫ್ರ್ಯೂ ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಎಲ್ಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ.  ಪದವಿ, ಸ್ನಾತಕೋತ್ತರ, ಎಂಬಿಎ ಪರೀಕ್ಷೆಗಳನ್ನು ಮುಂದೂಡಿ ರಾಣಿ ಚೆನ್ನಮ್ಮ ವಿವಿ ಕುಲಸಚಿವರು ಆದೇಶ ಹೊರಡಿಸಿದ್ದಾರೆ.


Post a Comment

0 Comments

Ad Code

Responsive Advertisement