ಬಿಬಿಎಂಪಿ ವಲಯವಾರು ಸ್ಥಾಪಿಸಿ ಕಾರ್ಯನಿರ್ವಹಿಸುತ್ತಿರುವ ಕೋವಿಡ್ ಆರೈಕೆ ಕೇಂದ್ರಗಳ ವಿವರ:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್-19ರ 2ನೇ ಅಲೆಯು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆ ವತಿಯಿಂದ ರೋಗಲಕ್ಷಣಗಳು ಇಲ್ಲದ ಕೋವಿಡ್ ಸೋಂಕಿತ ವ್ಯಕ್ತಿಗಳಿಗೆ ಮತ್ತು ಮನೆಯಲ್ಲಿ ಪ್ರತ್ಯೇಕ ವಾಸಕ್ಕೆ ಅನುಕೂಲವಿಲ್ಲದ ಸೋಂಕಿತರಿಗೆ ವಲಯವಾರು ಒಟ್ಟು 12 ಕೋವಿಡ್ ಆರೈಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಈಗಾಗಲೇ 10 ಆರೈಕೆ ಕೇಂದ್ರಗಳನ್ನು ಪ್ರಾರಂಭಿಸಿ ಸೆಂಟ್ರಲ್ ಹಾಸ್ಪಿಟಲ್ ಬೆಡ್ ಮ್ಯಾನೇಜ್ಮೆಂಟ್ ಸಿಸ್ಟಂ(CHBMS)ನಲ್ಲಿ ಹಾಸಿಗೆಗಳ ಮಾಹಿತಿ ಅಳವಡಿಸಲಾಗಿರುತ್ತದೆ.
ಸದರಿ 10 ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಒಟ್ಟು 1,601 ಹಾಸಿಗೆಗಳ ಸಾಮರ್ಥ್ಯವಿದೆ. ಈ ಪೈಕಿ ಇದುವರುವಿಗೆ 546 ಮಂದಿ ಕೋವಿಡ್ ಸೋಂಕಿತರು ಆರೈಕೆ ಪಡೆಯುತ್ತಿದ್ದು, 1,055 ಹಾಸಿಗೆಗಳು ಖಾಲಿಯಿವೆ. ಉಳಿಕೆ 2 ಕೋವಿಡ್ ಆರೈಕೆ ಕೇಂದ್ರಗಳನ್ನು ನಾಳೆಯಿಂದ ಪ್ರಾರಂಭಿಸಿ ಅದರ ಮಾಹಿತಿಯನ್ನು ಕೂಡಾ ಸೆಂಟ್ರಲ್ ಹಾಸ್ಪಿಟಲ್ ಬೆಡ್ ಮ್ಯಾನೇಜ್ಮೆಂಟ್ ಸಿಸ್ಟಂನಲ್ಲಿ ಹಾಸಿಗೆಗಳ ಮಾಹಿತಿ ಅಳವಡಿಸಲಾಗುತ್ತದೆ.

0 Comments