ಕೋವಿಡ್ ನಿಯಂತ್ರಣ ನಿಟ್ಟಿನಲ್ಲಿ ಕಂದಾಯ ಇಲಾಖೆಯು ರಾಜ್ಯ ವಿಪತ್ತು ಪರಿಹಾರ ನಿಧಿ(ಎಸ್ ಡಿ ಆರ್ ಎಫ್)ಯಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ರೂ.300 ಕೋಟಿ ಬಿಡುಗಡೆ ಮಾಡಿದೆ. ಕಂದಾಯ ಇಲಾಖೆಯ ನಿರ್ದೇಶನದಂತೆ (ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ) ಬಿಬಿಎಂಪಿಯು ಈ ನಿಧಿಯನ್ನು ಕೋವಿಡ್‍ಗೆ ಸಂಬಂಧಿಸಿದ ಹೊರಗುತ್ತಿಗೆ/ಬಾಡಿಗೆ ನೇಮಿಸಿಕೊಂಡ ನೌಕರರ ಸಂಬಳಕ್ಕೆ ಬಳಸಿಕೊಳ್ಳಲು ನಿರ್ದೇಶಿಸಲಾಗಿದೆ.
ಕೋವಿಡ್ 19ಗೆ ಸಂಭಂಧಿಸಿದ ಉಪಕರಣಗಳ ಖರೀದಿ ಮೊತ್ತವು ಕರ್ನಾಟಕ ರಾಜ್ಯ ಡ್ರಗ್ಸ್, ಲಾಜಿಸ್ಟಿಕ್ಸ್ ಮತ್ತು ವೇರ್ ಹೌಸಿಂಗ್ ಸೊಸೈಟಿ ಸೂಚಿಸಿದ ದರಕ್ಕಿಂತ ಅಧಿಕವಿರದಂತೆ ಬಿಬಿಎಂಪಿಯು ಖಾತರಿಪಡಿಸಿಕೊಳ್ಳಬೇಕೆಂದು ಸೂಚಿಸಲಾಗಿದೆ. ಖರೀದಿಯ ಪ್ರಕ್ರಿಯೆಗಳು ಸಾರ್ವಜನಿಕ ಸಂಗ್ರಹಣೆ ಕಾಯ್ದೆ 1999ರ ಅನುಸಾರವಿರುವುದು ಕಡ್ಡಾಯ. ಉಪಕರಣಗಳ ಖರೀದಿ ಆಂಬ್ಯೂಲೆನ್ಸ್ ಸೇವೆಗಳಿಗೆ ಪಾವತಿ ಮಾಡುವುದು ಸೇರಿದಂತೆ ಎಲ್ಲಾ ದಾಖಲೆಗಳನ್ನು ಕಟ್ಟುನಿಟ್ಟಾಗಿ ನಿರ್ವಹಿಸಬೇಕು. ರಾಪಿಡ್ ಆಂಟಿಜೆನ್ ಮತ್ತು ಆರ್‍ಪಿಸಿಆರ್ ಸೇರಿದಂತೆ ಪರೀಕ್ಷಾ ಕಿಟ್‍ಗಳು ಸೇರಿದಂತೆ ಎಲ್ಲಾ ವೈದ್ಯಕೀಯ ಉಪಕರಣಗಳನ್ನು ಕೆಡಿಎಲ್‍ಡಬ್ಲ್ಯೂಎಸ್ ಮೂಲಕ ಮಾತ್ರ ಖರೀದಿಸಬೇಕು. ಈ ಮೊತ್ತವನ್ನು ನಿಗದಿತ ಉದ್ದೇಶಕ್ಕಾಗಿ ಮಾತ್ರ ಬಳಸಬೇಕು ಮತ್ತು ಈ ಎಲ್ಲಾ ವಸ್ತುಗಳಿಗೆ ರಶೀದಿಗಳನ್ನು ಹಾಜರುಪಡಿಸಬೇಕು. ಈ ನಿಧಿಯನ್ನುü ದುರುಪಯೋಗದ ಸಂದರ್ಭದಲ್ಲಿ, ಬಿಬಿಎಂಪಿಯ ಮುಖ್ಯ ಆಯುಕ್ತರನ್ನೇ ಜವಾಬ್ದಾರರನ್ನಾಗಿಸಲಾಗುವುದು.
ಎಲ್ಲಾ 30 ಜಿಲ್ಲೆಗಳಿಗೆ ರೂ.266.33 ಕೋಟಿ ನಿಧಿ ಬಿಡುಗಡೆ
ಈ ನಡುವೆ, ಕೋವಿಡ್ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಕಂದಾಯ ಇಲಾಖೆ ವಿವಿಧ ಜಿಲ್ಲೆಗಳಿಗೆ 266.33 ಕೋಟಿ ಲಕ್ಷಗಳನ್ನು ಬಿಡುಗಡೆ ಮಾಡಿದೆ. ಬಿಡುಗಡೆ ಮಾಡಿದ ನಿಧಿಯ ವಿವರಗಳು ಈ ರೀತಿಯಾಗಿದೆ: ಬಾಗಲಕೋಟೆ -2 ಕೋಟಿ, ಬಳ್ಳಾರಿ -5 ಕೋಟಿ, ಬೆಳಗಾವಿ -10 ಕೋಟಿ, ಬೆಂಗಳೂರು ಗ್ರಾಮೀಣ -14 ಕೋಟಿ, ಬೆಂಗಳೂರು ನಗರ -15 ಕೋಟಿ, ಬೀದರ್ -1 ಕೋಟಿ, ಚಾಮರಾಜನಗರ -10 ಕೋಟಿ, ಚಿಕ್ಕಬಳ್ಳಾಪುರ -7.95 ಕೋಟಿ, ಚಿಕ್ಕಮಗಳೂರು -2 ಕೋಟಿ, ಚಿತ್ರದುರ್ಗ -1 ಕೋಟಿ, ದಕ್ಷಿಣ ಕನ್ನಡ -5 ಕೋಟಿ, ದಾವಣಗೆರೆ -10 ಕೋಟಿ, ಧಾರವಾಡ -10.38 ಕೋಟಿ, ಗದಗ -10 ಕೋಟಿ, ಹಾಸನ -3 ಕೋಟಿ, ಹಾವೇರಿ -5 ಕೋಟಿ, ಕಲಬುರ್ಗಿ - 50 ಕೋಟಿ, ಕೊಡಗು -7 ಕೋಟಿ, ಕೋಲಾರ -5 ಕೋಟಿ, ಕೊಪ್ಪಳ -5 ಕೋಟಿ, ಮಂಡ್ಯ -10 ಕೋಟಿ, ಮೈಸೂರು -25 ಕೋಟಿ, ರಾಯಚೂರು -10 ಕೋಟಿ, ರಾಮನಗರ -5 ಕೋಟಿ, ಶಿವಮೊಗ್ಗ-ರೂ 10 ಕೋಟಿ, ತುಮಕೂರು -10 ಕೋಟಿ, ಉಡುಪಿ -2 ಕೋಟಿ, ಉತ್ತರ ಕನ್ನಡ -5 ಕೋಟಿ, ವಿಜಯಪುರ -4 ಕೋಟಿ ಮತ್ತು ಯಾದಗಿರಿ -7 ಕೋಟಿ.
ಹಣವನ್ನು ನಿಗದಿತ ಉದ್ದೇಶಕ್ಕಾಗಿ ಮಾತ್ರ ಬಳಸಬೇಕು ಮತ್ತು ಎಲ್ಲಾ ವಸ್ತುಗಳಿಗೆ ರಶೀದಿಗಳನ್ನು ದಾಖಲುಪಡಿಸಬೇಕು. ಯಾವುದೇ ನಿಧಿ ದುರುಪಯೋಗದ ಸಂದರ್ಭದಲ್ಲಿ, ಆಯಾ ಜಿಲ್ಲಾಧಿಕಾರಿಗಳು ಜವಾಬ್ದಾರರಾಗಿರುತ್ತಾರೆ.

0 Comments