ಬೆಂಗಳೂರು : ರಾಜ್ಯದಲ್ಲಿ ಶನಿವಾರ 29,438 ಪ್ರಕರಣಗಳು ದಾಖಲಾಗಿದ್ದು, ಒಂದೇ ದಿನ 208 ಮಂದಿ ಮೃತಪಟ್ಟಿದ್ದಾರೆ. ಬೆಂಗಳೂರು ಒಂದರಲ್ಲೇ 17,342 ಮಂದಿಗೆ ಸೋಂಕು ತಗುಲಿದ್ದು, 149 ಸಾವು ಸಂಭವಿಸಿದೆ. ಬೆಂಗಳೂರಿನಂತೆಯೇ ರಾಜ್ಯದ ಇತರ ಭಾಗಗಳಲ್ಲೂ ಸೋಂಕಿನ ತೀವ್ರತೆ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಒಟ್ಟು ಪ್ರಕರಣಗಳ ಪೈಕಿ ಶೇ. 40 ಪ್ರಕರಣಗಳು ಬೆಂಗಳೂರಿನ ಹೊರಗಿವೆ.
ಬೆಂಗಳೂರು ನಂ.1 ಸಕ್ರಿಯ
ಬೆಂಗಳೂರು ನಗರದಲ್ಲಿಸಕ್ರಿಯ ಪ್ರಕರಣಗಳ ಸಂಖ್ಯೆ 1,62,171 ಇದೆ. ಇದು ದೇಶದಲ್ಲೇ ಗರಿಷ್ಠ 2ನೇ ಸ್ಥಾನದಲ್ಲಿರುವ ಪುಣೆಯಲ್ಲಿರುವುದು 1.16 ಲಕ್ಷ ಪ್ರಕರಣ ಮಾತ್ರ. ಕೆಲವು ದಿನಗಳ ಹಿಂದೆ ಗಂಭೀರವಾಗಿದ್ದ ಮುಂಬಯಿ ಸ್ಥಿತಿ ಸುಧಾರಿಸುತ್ತಿದೆ (5888 ಪ್ರಕರಣ).

0 Comments