Ticker

6/recent/ticker-posts

Ad Code

Responsive Advertisement

ರಾಜ್ಯದ ಜಿಎಸ್ ಟಿ ಆದಾಯ ಮಾರ್ಚ್ ತಿಂಗಳಲ್ಲಿ ಶೇ.11 ರಷ್ಟು ಹೆಚ್ಚಳ


ಕೋವಿಡ್ 19 ಸಾಂಕ್ರಾಮಿಕದ ಎರಡನೇ ಅಲೆಯ ಬೀತಿಯಿದ್ದರೂ, 2020ನೇ ವರ್ಷಕ್ಕೆ ಹೋಲಿಸಿದರೆ ಮಾರ್ಚ್ ತಿಂಗಳಲ್ಲಿ ರಾಜ್ಯದ ಸರಕು ಮತ್ತು ಸೇವಾ ತೆರಿಗೆಯಲ್ಲಿ (ಜಿಎಸ್ ಟಿ)  ಶೇ.11 ರಷ್ಟು ಹೆಚ್ಚಳವಾಗಿದೆ. 2020 ಮಾರ್ಚ್ ತಿಂಗಳಲ್ಲಿ 7,144,30 ಕೋಟಿ ಜಿಎಸ್ ಟಿ ಆದಾಯ ಸಂಗ್ರಹವಾಗಿತ್ತು. 2021 ಮಾರ್ಚ್ ತಿಂಗಳಲ್ಲಿ 7,914.98 ಕೋಟಿಗೆ ಏರಿಕೆಯಾಗಿದ್ದು, ತೆರಿಗೆ ಸಂಗ್ರಹ ಹಾಗೂ ಆರ್ಥಿಕತೆಗೆ ಚೇತರಿಕೆಯನ್ನು ನೀಡಿದೆ.;'


ಕೃಷಿ, ಉದ್ಯಮ, ಸೇವಾ ವಲಯ ಮತ್ತು ಉದ್ಯಮ ಶೀಲತಾ ಕೌಶಲ್ಯದಲ್ಲಿನ ಮಹತ್ವದ ಬೆಳವಣಿಗೆಯಿಂದ ರಾಜ್ಯದಲ್ಲಿ ತೆರಿಗೆ ಸಂಗ್ರಹದಲ್ಲಿ ಏರಿಕೆಯಾಗಿದೆ ಎಂದು ಜಿಎಸ್ ಟಿ ಕೌನ್ಸಿಲ್ ಪ್ರತಿನಿಧಿಯೂ ಆಗಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ       ಗುರುವಾರ ತಿಳಿಸಿದರು.

ತೆರಿಗೆ ಸಂಗ್ರಹದಲ್ಲಿ ಹೆಚ್ಚಳ ಬಿಎಸ್ ಯಡಿಯೂರಪ್ಪ ನಾಯಕತ್ವದ ಸರ್ಕಾರದ ಹಣಕಾಸು ನಿರ್ವಹಣೆಯ ದಕ್ಷತೆ ಹಾಗೂ ರಾಜ್ಯದ ಉದ್ಯಮ ಶೀಲತಾ ಪರಾಕ್ರಮವನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.

ಜಿಎಸ್ಟಿ ಆದಾಯ ಸಂಗ್ರಹಣೆಯಲ್ಲಿನ ಹೆಚ್ಚಳವು ಪರಿಣಾಮಕಾರಿ ತೆರಿಗೆ ಆಡಳಿತ, ಉತ್ತಮ ಅನುಸರಣೆ, ಜಾರಿ, ಇ-ಇನ್‍ವಾಯ್ಸ್ ಅನುಷ್ಠಾನ ಮತ್ತು ಇ-ವೇ ಮಸೂದೆಗಳ ಮೇಲ್ವಿಚಾರಣೆಯನ್ನು ಸೂಚಿಸುತ್ತದೆ ಎಂದು ರಾಜ್ಯ ಸರ್ಕಾರದ ಜಿಎಸ್‍ಟಿ ಸಲಹಾ ಸಮಿತಿಯ ಸದಸ್ಯ ಬಿ ಟಿ ಮನೋಹರ್ ಹೇಳಿದ್ದಾರೆ.

ಕಳೆದ ವರ್ಷ ಅಕ್ಟೋಬರ್‍ನಿಂದ, ತೆರಿಗೆ ಸಂಗ್ರಹದಲ್ಲಿ ಮೇಲ್ಮುಖವಾದ ಪ್ರವೃತ್ತಿ ಕಂಡುಬಂದಿದೆ ಏಕೆಂದರೆ ಮುಖ್ಯವಾಗಿ ಲಾಕ್‍ಡೌನ್ ಮಾನದಂಡ ಸಡಿಲ, ಅಂತರ್ ರಾಜ್ಯಗಳ ನಡುವೆ ಜನ ಹಾಗೂ ವಾಹನಗಳ ಸಂಚಾರಕ್ಕೆ ಅನುಮತಿ ಮೂಲಕ ಆಮದನ್ನು ಸುಲಭಗೊಳಿಸಲಾಗಿದ್ದು, ಸ್ಥಳೀಯ ಬಳಕೆ ಕೂಡಾ ಹೆಚ್ಚಾಗಿದೆ ಎಂದು ಎಫ್ ಕೆಸಿಸಿಐ ಜಿಎಸ್ ಟಿ ಸಮಿತಿ ಅಧ್ಯಕ್ಷರು ಆಗಿರುವ ಮನೋಹರ್ ತಿಳಿಸಿದ್ದಾರೆ.

ಕೊರೋನಾ ಸಾಂಕ್ರಾಮಿಕದ ನಡುವೆಯೂ ಶೇ.11 ರಷ್ಟು ಏರಿಕೆ ಉತ್ತಮ ಸೂಚನೆಯಾಗಿದೆ. ಮುಂಬರುವ ತಿಂಗಳಲ್ಲಿ ಉತ್ತಮ ಆರ್ಥಿಕತೆ ಬಗ್ಗೆ ನಂಬಿಕೆ ಇಡಬಹುದಾಗಿದೆ ಎಂದು ಅವರು ಹೇಳಿದ್ದಾರೆ.


Post a Comment

0 Comments

Ad Code

Responsive Advertisement