Ticker

6/recent/ticker-posts

Ad Code

Responsive Advertisement

ಕಾರುಗಳ ಆಕರ್ಷಕ ನೋಂದಣಿ ಸಂಖ್ಯೆಗಳ ಬಹಿರಂಗ ಹರಾಜು

ಸಾರಿಗೆ ಇಲಾಖೆ ವತಿಯಿಂದ ಅಥಣಿಯ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ವಾಹನಗಳ ಆಕರ್ಷಕ ಮುಂಗಡ ಶ್ರೇಣಿಯ ನೋಂದಣಿ ಸಂಖ್ಯೆಗಳ ಸಾರ್ವಜನಿಕ ಹರಾಜು ಪ್ರಕ್ರಿಯೆಯನ್ನು ಇದೇ ಮಾರ್ಚ್ 15 ರಂದು ಹಮ್ಮಿಕೊಂಡಿದ್ದು, ಆಸಕ್ತರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ. 


 ಇದೇ ಮಾರ್ಚ್ 8 ರಂದು ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಪ್ರಾದೇಶಿಕ ಸಾರಿಗೆ ಕಛೇರಿಯಲ್ಲಿ ಆಕರ್ಷಕ ಮುಂಗಡ ಶ್ರೇಣಿಯ ನೋಂದಣಿ ಸಂಖ್ಯೆ ಏಂ-51/ಒಖ ಸರಣಿಯ ಸಾರ್ವಜನಿಕ ಬಹಿರಂಗ ಹರಾಜು ಪ್ರಕ್ರಿಯೆಯನ್ನು ಕೈಗೊಳ್ಳಲಾಗಿತ್ತು. ಈ ಹರಾಜಿನಲ್ಲಿ 21 ನೋಂದಣಿ ಸಂಖ್ಯೆಗಳು ಮಾರಾಟವಾಗಿದ್ದು,

 26,68,000 ರೂ.ಗಳು ಸಂಗ್ರಹವಾಗಿದೆ ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ಪ್ರದೇಶಿಕ ಸಾರಿಗೆ ಕಚೇರಿ, ಅಥಣಿ ಅಥವಾ ಸಾರಿಗೆ ಆಯುಕ್ತರ ಕಚೇರಿ, 1ನೇ ಮಹಡಿ, ಟಿಟಿಎಂಸಿ ಕಟ್ಟಡ, ಕೆ.ಹೆಚ್.ರಸ್ತೆ, ಶಾಂತಿನಗರ, ಬೆಂಗಳೂರು ಇಲ್ಲಿಗೆ ಸಂಪರ್ಕಿಸಬಹುದಾಗಿದೆ.

Post a Comment

0 Comments

Ad Code

Responsive Advertisement