ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಬನ್ನೇರಘಟ್ಟ ರಸ್ತೆಯ ರೈನ್ ಬೋ ಮಕ್ಕಳ ಆಸ್ಪತ್ರೆಯು ಮಹಿಳಾ ಸುರಕ್ಷತೆಯ ಕುರಿತಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಿಡ್ ನೈಟ್ ವಾಕ್ ಥಾನ್ ಆಯೋಜಿಸಿತ್ತು. ಬನ್ನೇರಘಟ್ಟ ರಸ್ತೆಯ ರಾಯಲ್ ಮೀನಾಕ್ಷಿ ಮಾಲ್ ನಿಂದ ರೈನ್ ಬೋ ಮಕ್ಕಳ ಆಸ್ಪತ್ರೆಯ ಸರ್ಕಾರಿ ಅಧಿಕಾರಿಗಳು, ಸೆಲೆಬ್ರಿಟಿಗಳು, ಉದ್ಯಮಿಗಳು ಹಾಗೂ ಸಾರ್ವಜನಿಕರು ಸೇರಿದಂತೆ ನೂರಾರು ಮಹಿಳೆಯರು ಈ ವಾಕ್ ಥಾನ್ ನಲ್ಲಿ ಪಾಲೊಳ್ಳುವ ಮೂಲಕ ಮಹಿಳೆಯರ ಸುರಕ್ಷತೆಯ ಅತ್ಯಗತ್ಯತೆಯನ್ನ ಸಾರಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕಿ ಸೌಮ್ಯ ರೆಡ್ಡಿ ಮಾತನಾಡಿ,"ಮಹಿಳೆ ನಿರಾತಂಕವಾಗಿ ಮಧ್ಯರಾತ್ರಿ ಓಡಾಡುವ ವಾತಾವರಣ ಸೃಷ್ಟಿಯಾದಾಗ ಮಾತ್ರ ಸುರಕ್ಷತೆ ಎಂಬುದಕ್ಕೆ ನಿಜವಾದ ಅರ್ಥ ಬರುತ್ತದೆ. ಈ ನಿಟ್ಟಿನಲ್ಲಿ ರೈನ್ ಬೋ ಆಸ್ಪತ್ರೆ ಆಯೋಜಿಸಿರುವ ಈ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ. ಮಹಿಳೆಯರಲ್ಲಿ ಮತ್ತಷ್ಟು ಆತ್ಮಬಲ ತುಂಬುವ ನಿಟ್ಟಿನಲ್ಲಿ ಈ ರೀತಿಯ ಇನ್ನಷ್ಟು ಕಾರ್ಯಕ್ರಮಗಳನ್ನ ಆಯೋಜಿಸುವ ಅಗತ್ಯತೆ ಇದೆ. ಹಾಗಾದಾಗ ಮಾತ್ರ ಮಹಿಳೆಯರಿಗೆ ಎಲ್ಲ ಸ್ವಾತಂತ್ರ್ಯ , ಗೌರವ ಸಿಗುವುದಕ್ಕೆ ಸಾಧ್ಯ," ಎಂದು ತಿಳಿಸಿದರು.
ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ಎಂಡಿ, ಐಜಿಪಿ ರೂಪಾ ಮೌದ್ಗಿಲ್,"ಮಹಿಳೆಯರ ಸುರಕ್ಷತೆಗಾಗಿ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಇಷ್ಟೊಂದು ಮಹಿಳೆಯರು ಭಾಗವಹಿಸಿದ್ದು ನಿಜಕ್ಕೂ ಸಂತಸ ತಂದಿದೆ. ಇದೊಂದು ಪ್ರಶಂಸನಾರ್ಹ ನಡೆ. ಮಹಿಳೆಯ ಸುರಕ್ಷತೆಯ ವಿಷಯ ಬಂದಾಗ ಯಾವುದಕ್ಕೂ ರಾಜಿ ಮಾಡಿಕೊಳ್ಳುವ ಪ್ರಸಂಗ ಬರಬಾರದು",ಎಂದರು.
ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಮಾತನಾಡಿ,"ಹೆಣ್ಣು ಎಂದರೆ ಮಮತಾಮಯಿ. ಪ್ರತಿ ಮಹಿಳೆಯಲ್ಲೂ ಒಬ್ಬ ತಾಯಿ ಇದ್ದೇ ಇರುತ್ತಾಳೆ. ಹೀಗಾಗಿ ಸ್ತ್ರೀ ಯರನ್ನ ಗೌರವಿಸಬೇಕು, ಸಮಾನವಾಗಿ ಕಾಣಬೇಕು ಎಂಬುದು ನನ್ನ ಅಭಿಪ್ರಾಯ", ಎಂದರು







0 Comments