Ticker

6/recent/ticker-posts

Ad Code

Responsive Advertisement

ಮಸ್ಕಿ ಕ್ಷೇತ್ರದ ಅಭಿವೃದ್ಧಿಗೆ ಉಪ ಚುನಾವಣೆ ಮುಹೂರ್ತವೇ?: ಹೆಚ್.ಡಿ. ಕುಮಾರಸ್ವಾಮಿ

ಬೆಂಗಳೂರು: ಕ್ಷೇತ್ರಗಳ ಪ್ರಗತಿಗೆ ಚುನಾವಣೆ, ಉಪ ಚುನಾವಣೆ ಮುಹೂರ್ತವೇ ಎಂದು ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯವರನ್ನು ಪ್ರಶ್ನಿಸಿದ್ದಾರೆ.
ಮಸ್ಕಿ ಕ್ಷೇತ್ರದ ಅಭಿವೃದ್ದಿ ಬಗ್ಗೆ ಸಿಎಂ ಬಿ ಎಸ್ ಯಡಿಯೂರಪ್ಪ ನೀಡಿರುವ ಹೇಳಿಕೆಗೆ ಟ್ವೀಟ್ ಮೂಲಕ ತಿರುಗೇಟು ನೀಡಿರುವ ಹೆಚ್ ಡಿ ಕುಮಾರಸ್ವಾಮಿ, ಮಸ್ಕಿಯಲ್ಲಿ ಶಾಸಕರಾಗಿದ್ದವರ ಮಹಾತ್ಯಾಗದಿಂದ ಬಿಎಸ್‍ವೈ ಅವರಿಗೆ ಅಧಿಕಾರ ಸಿಕ್ಕು 2 ವರ್ಷಗಳಾಗುತ್ತಾ ಬಂದಿವೆ. ಈವರೆಗೆ ಮಸ್ಕಿಯಲ್ಲಿ ಆಗದಿರುವ ಅಭಿವೃದ್ಧಿ ಈಗ ಉಪ ಚುನಾವಣೆ ಸಮಯದಲ್ಲಿ ಆಗುತ್ತದೆಯೇ ಎಂದು ಕೇಳಿದರು. ಚುನಾವಣೆ ನಿಗದಿಯಾಗಿದ್ದರಿಂದ ಮಸ್ಕಿ ಅಭಿವೃದ್ಧಿಗೆ ಈಗ ಮುಹೂರ್ತ ಬಂದಿದೆ, ವರ್ಷದ ಹಿಂದೆಯೇ ಚುನಾವಣೆಗಳಾದ 'ಬಾಂಬೆ ತಂಡ'ದ ಸದಸ್ಯರ ಕ್ಷೇತ್ರಗಳ ಅಭಿವೃದ್ಧಿ ಎಷ್ಟಾಗಿದೆ? ಅವೆಲ್ಲವೂ ಭೂಲೋಕದ ಸ್ವರ್ಗಗಳಾಗಿವೆಯೇ ಸಿಎಂ ಯಡಿಯೂರಪ್ಪನವರೇ? ಚುನಾವಣಾ ಕಾಲದ ನಿಮ್ಮ ಅಭಿ ವೃದ್ಧಿಯ ಜಪ ಕೇವಲ ಬೂಟಾ ಟಿಕೆಯದ್ದು ಎಂದು ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಚುನಾವಣಾ ಕಾಲದಲ್ಲಿ ಮುಖ್ಯಮಂತ್ರಿ ಮತ್ತು ಅವರ ಸರ್ಕಾರದ 'ಏಕಗವಾಕ್ಷಿ' ಆಡುವ ಮಾತುಗಳಿಗೆ ಜನ ಮನ್ನಣೆ ನೀಡಬಾರದು ಎಂದು ಕೇಳಿಕೊಂಡಿದ್ದಾರೆ.

Post a Comment

0 Comments

Ad Code

Responsive Advertisement