Ticker

6/recent/ticker-posts

Ad Code

Responsive Advertisement

ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆ ಬಂಧನ

ಸಿಸಿಬಿ, ಮಾದಕದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಡ್ರಗ್ ಪೆಡ್ಲರ್‍ಗಳ ವಿರುದ್ದ ಸಮರ ಮುಂದುವರೆಸಿದ್ದು, ಹೆಣ್ಣೂರು ಪೊಲೀಸ್ ಠಾಣಾ ಸರಹದ್ದಿನ ಕಾವೇರಿನಗರ ಇಲ್ಲಿ ವಾಸವಾಗಿದ್ದ ಕುಖ್ಯಾತ ಡ್ರಗ್ಸ್ ಪೆಡ್ಲರ್‍ನ ಮಾಹಿತಿ ಸಂಗ್ರಹಿಸಿ ನೈಜೀರಿಯಾದ ಉಗೋಚುಕ್ವು ವಿಕ್ಟರ್ ಎಂಬಾತನನ್ನು ವಶಕ್ಕೆ ಪಡೆದು, ಆತನ ವಶದಲ್ಲಿದ್ದ 40 ಲಕ್ಷ ಬೆಲೆಯಎಂ.ಡಿ.ಎಂ.ಎ, 2 ಮೊಬೈಲ್ ಒಂದು ತೂಕದ ಯಂತ ಅಮಾನತ್ತುಪಡಿಸಿರುತ್ತಾರೆ.


ಸ್ಟೂಡೆಂಟ್ ವೀಸಾ ಅಡಿ ಭಾರತಕ್ಕೆ ಬಂದಿರುವ ಆರೋಪಿಗಳು, ಭಾರತದ ಕಾನೂನಿಗೆ ಗೌರವ ಕೊಡದೆ, ಪಾಸ್‍ಪೋರ್ಟ್ ಮತ್ತು ವೀಸಾ ನಿಯಮ ಉಲ್ಲಂಘಿಸಿ ಕಾನೂನು ಬಾಹಿರ ಕೃತ್ಯಗಳಲ್ಲಿ ಬಾಗಿಯಾಗಿದ್ದರು. ಅಲ್ಲದೇ ಮಾದಕ ವಸ್ತುಗಳ ಮಾರಾಟ ಜಾಲದಲ್ಲಿ ಸಕ್ರಿಯವಾಗಿ ತೊಡಗಿರುತ್ತಾನೆ. 

2018 ರಿಂದಲೇ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವುದು ತಿಳಿದುಬಂದಿರುತ್ತೆ. ಈತನ ವಿರುದ್ದ ಈಗಾಗಲೇ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ. 

ಕಾರ್ಯಾಚರಣೆಯಲ್ಲಿ ಜಂಟಿ ಪೊಲೀಸ್ ಆಯುಕ್ತರು ಮತ್ತು ಉಪ ಪೊಲೀಸ್ ಆಯುಕ್ತರು, ಅಪರಾಧ-2, ಬೆಂಗಳೂರು ರವರ ಮಾರ್ಗದರ್ಶನದಲ್ಲಿ, ಸಿಸಿಬಿ ಸಹಾಯಕ ಪೊಲೀಸ್ ಆಯುಕ್ತ ಕೆ.ಸಿ.ಗೌತಮ್ ಮುಂದಾಳತ್ವದಲ್ಲಿ ಪೊಲೀಸ್ ಇನ್ಸ್‍ಪೆಕ್ಟರ್ ಜಿ.ಲಕ್ಷ್ಮಿಕಾಂತಯ್ಯ ಮತ್ತು ಸಿಬ್ಬಂದಿ ಪಾಲ್ಗೊಂಡಿರುತ್ತದೆ.


Post a Comment

0 Comments

Ad Code

Responsive Advertisement