Ticker

6/recent/ticker-posts

Ad Code

Responsive Advertisement

ಅತಿದೊಡ್ಡ ಕೈಗಾರಿಕಾ ಟೌನ್‍ಶಿಪ್ ಕೆಜಿಎಫ್ ನಲ್ಲಿ ನಿರ್ಮಾಣ: ಶೆಟ್ಟರ್

ಬೆಂಗಳೂರು: ಕೋಲಾರ ಜಿಲ್ಲೆಯ ಕೋಲಾರ್ ಗೋಲ್ಡ್ ಫೀಲ್ಡ್ಸ್ (ಕೆಜಿಎಫ್) ನಲ್ಲಿ ಕರ್ನಾಟಕದ ಅತಿದೊಡ್ಡ ಕೈಗಾರಿಕಾ ಟೌನ್‍ಶಿಪ್ ನಿರ್ಮಾಣವಾಗಲಿದೆ ಎಂದು ಬೃಹತ್ ಹಾಗೂ ಮಧ್ಯಮ ಪ್ರಮಾಣದ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಶುಕ್ರವಾರ ತಿಳಿಸಿದ್ದಾರೆ. ರಾಜ್ಯ ಸರ್ಕಾರವು ಭಾರತ್ ಗೋಲ್ಡ್ ಮೈನ್ಸ್  ಲಿ. (ಬಿಜಿಎಂಎಲ್),ಗೆ ಸೇರಿದ 3,212 ಎಕರೆ ಭೂಮಿಯಲ್ಲಿ ಡ್ರೋನ್ ಸಮೀಕ್ಷೆ ನಡೆಸುತ್ತಿದೆ.ಅದರಲ್ಲಿ 967 ಎಕರೆಗಳು ಬಿಇಎಂಎಲ್ ಲಿಮಿಟೆಡ್. ಗೆ ಸೇರಿದೆ.


ಬಿಇಎಂಎಲ್‍ಗೆ ಮಂಜೂರು ಮಾಡಿದ ಭೂಮಿಯನ್ನು ವಾಪಸ್ ತೆಗೆದುಕೊಳ್ಳುವ ವಿಷಯವನ್ನು ಎತ್ತಿದ ಕೆಜಿಎಫ್ ಶಾಸಕಿ ರೂಪಕಲಾ ಎಂ ಅವರಿಗೆ ಉತ್ತರಿಸಿದ ಶೆಟ್ಟರ್, ರಾಜ್ಯ ಸರ್ಕಾರ 1,870 ಎಕರೆಗಳನ್ನು ಬಿಇಎಂಎಲ್‍ಗೆ ನೀಡಿದೆ, ಅದರಲ್ಲಿ 967 ಎಕರೆ ಬಳಕೆಯಾಗದೆ ಉಳಿದಿದ್ದು ಅದನ್ನು ಸರ್ಕಾರ ವಾಪಸ್ ತೆಗೆದುಕೊಂಡಿದೆ. 

ಬಿಜಿಎಂಎಲ್ ಚಿನ್ನದ ಗಣಿಗಾರಿಕೆಗಾಗಿ 12,000 ಎಕರೆಗಳನ್ನು ಸ್ವಾಧೀನಪಡಿಸಿಕೊಂಡಿತ್ತು, ಆದರೆ 3,212 ಎಕರೆಗಳನ್ನು ಬಳಸಲಿಲ್ಲ ಎಂದು ಅವರು ಹೇಳಿದರು. 3,212 ಎಕರೆಗಳನ್ನು ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಪತ್ರ ಬರೆದಿದ್ದರು. ಅವರು ಸಭೆ ನಡೆಸಿ ಭೂ ಸಮೀಕ್ಷೆಯನ್ನು ನಿರ್ಧರಿಸಿದ್ದರು, ಇದನ್ನು ಡ್ರೋನ್‍ಗಳನ್ನು ಬಳಸಿ ಮಾಡಲಾಗುತ್ತಿದೆ. ಗುರುತಿಸಲಾದ ಭೂಮಿ ಖನಿಜ ತೆಗೆಯಲು ಗೆ ಸೂಕ್ತವಲ್ಲದಿದ್ದರೆ, ನಾವು ಅದನ್ನು ಟೌನ್‍ಶಿಪ್ ಗೆ ಬಳಸಬಹುದು, '' ಎಂದು ಶೆಟ್ಟರ್ ಹೇಳಿದರು.

ಬ್ರೀತೀಷ್ ಗಣಿಮಾಲೀಕರ ಕೆಜಿಎಫ್‍ನ ಚಾಂಪಿಯನ್ ರೀಫ್ ಮತ್ತು ಆಂಗ್ಲೋ-ಇಂಡಿಯನ್ ಘೋಸ್ಟ್ ಟೌನ್ ಅನೇಕ ಪುಸ್ತಕ ಹಾಗೂ ಸಾಕ್ಷ್ಯಚಿತ್ರಗಳಿಗೆ ವಸ್ತುವಾಗಿದೆ. ಕೈಗಾರಿಕೆಗಳು ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆಗಳ ಮೂಲಗಳು ಯಾವುದೇ ನೈಸರ್ಗಿಕ ಸಂಪನ್ಮೂಲಗಳ ಉಪಸ್ಥಿತಿಯನ್ನು ನಿರ್ಣಯಿಸುತ್ತದೆ. ಹಾಗೊಮ್ಮೆ ಅದಾವ ಖನಿಜ ಸಂಪತ್ತೂ ಹೊಂದಿಲ್ಲವಾದಲ್ಲಿ ಅಂತಹಾ ಭೂಮಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಯು ಕೈಗಾರಿಕಾ ಪಾರ್ಕ್ ಗಳನ್ನಾಗಿ ಅಭಿವೃದ್ಧಿಪಡಿಸುತ್ತದೆ ಎಂದು ಸಚಿವರು ಹೇಳಿದರು. ರಾಜ್ಯ ಸರ್ಕಾರವು 4,185 ಎಕರೆಗಳನ್ನು ಪಡೆದರೆ, ಅವುಗಳನ್ನು ಕೈಗಾರಿಕಾ ಟೌನ್‍ಶಿಪ್ ವಿನ್ಯಾಸಗಳಾಗಿ ಪರಿವರ್ತಿಸುತ್ತದೆ ಎಂದು ಅವರು ಹೇಳಿದರು.

 ಹೊಸ ಕೈಗಾರಿಕಾ ನೀತಿಯಲ್ಲಿ ಎರಡನೇ ಹಾಗೂ ಮೂರನೇ ಹಂತದನಗರಗಳಿಗೆ ಹೂಡಿಕೆದಾರರನ್ನು ಆಕರ್ಷಿಸಲು ಮತ್ತು ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಲು ಸರ್ಕಾರ ಗಮನ ಹರಿಸುತ್ತಿದೆ ಎಂದು ಸಚಿವರು ಪುನರುಚ್ಚರಿಸಿದ್ದಾರೆ.


Post a Comment

0 Comments

Ad Code

Responsive Advertisement