Ticker

6/recent/ticker-posts

Ad Code

Responsive Advertisement

“ದಕ್ಷಿಣ ಕೇಸರಿ” ಹೆಸರಿನ ಸಿಂಹದ ಪುತ್ಥಳಿಗಳ ಲೋಕಾರ್ಪಣೆ

 ದಕ್ಷಿಣ ಭಾರತದ ಮಾದರಿ ವಾರ್ಡ್ ಎಂಬ ಖ್ಯಾತಿಯ ಯಡಿಯೂರು ವಾರ್ಡ್ ನ 02 ಸ್ಥಳಗಳಲ್ಲಿ ಅಂದರೆ, 1) ಸೌತೆಂಡ್ ವೃತ್ತದ ಬಳಿ ಮತ್ತು 2) ಆರ್ಮುಗಂ ಮುದಲಿಯಾರ್ ವೃತ್ತದ ಬಳಿ ಪೀಠವೂ ಸೇರಿದಂತೆ 12 ಅಡಿ ಎತ್ತರದ 02 “ದಕ್ಷಿಣ ಕೇಸರಿ” ಹೆಸರಿನ ಸಿಂಹದ ಪುತ್ಥಳಿಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ತಲಾ ಎರಡು ಲಕ್ಷದ ಐವತ್ತು ಸಾವಿರ ರೂಪಾಯಿಗಳ ವೆಚ್ಛದಲ್ಲಿ ನಿರ್ಮಿಸಲಾಗಿದ್ದು, ರಾಜ್ಯದ ಕಂದಾಯ ಸಚಿವರಾದ ಶ್ರೀ. ಆರ್. ಅಶೋಕ್ ರವರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ. ಲೆಹರ್ ಸಿಂಗ್ ರವರು ಉದ್ಘಾಟಿಸಿದರು.




ಹಾಗೆಯೇ ಐತಿಹಾಸಿಕ ಯಡಿಯೂರು ಕೆರೆಯ ಕೋಡಿ ಹರಿಯುವ ಭಾಗದಲ್ಲಿ ಹಳ್ಳಿಗಾಡಿನ ರೈತ ದಂಪತಿಗಳು ಮತ್ತು ಮಕ್ಕಳ ಪುತ್ಥಳಿಗಳನ್ನು ಸಹ ಪಾಲಿಕೆ ವತಿಯಿಂದ ನಿರ್ಮಿಸಲಾಗಿದ್ದು, ಅವುಗಳನ್ನೂ ಸಹ ಇಂದು ಲೋಕಾರ್ಪಣೆ ಮಾಡಲಾಯಿತು.

ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕರಾದ ಎನ್.ಆರ್.ರಮೇಶ್ ಮತ್ತು ಬಿಬಿಎಂಪಿ ಮಾಜಿ ಸದಸ್ಯರಾದ ಸಂಗಾತಿ ವೆಂಕಟೇಶ್ ಸೇರಿದಂತೆ  ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.




Post a Comment

0 Comments

Ad Code

Responsive Advertisement