Ticker

6/recent/ticker-posts

Ad Code

Responsive Advertisement

ಲಕ್ಕಿ ಡ್ರಾ ಆಮಿಷ: ಹಣ ವಸೂಲಿ ಮಾಡುತ್ತಿದ್ದ ಆರೋಪಿಗಳ ಬಂಧನ

ಅಪರಿಚಿತರು ಪರಿಚಯವಾಗಿ ತಮಗೆ ರೂ. 35,00,000/- ಹಣ  ಲಕ್ಕಿ ಡ್ರಾದಲ್ಲಿ ಗೆದ್ದಿರುವುದಾಗಿ ನಂಬಿಸಿ ಪ್ರೋಸೆಸಿಂಗ್ ಚಾರ್ಜ್ ಎಂದು ಒಟ್ಟು ರೂ. 75,000/- ಹಣವನ್ನು ಆನ್‍ಲೈನ್ ಮೂಲಕ ವಿವಿಧ ಬ್ಯಾಂಕ್ ಖಾತೆಗಳಿಗೆ ಹಾಕಿ ವಂಚನೆಗೆ ಒಳಗಾಗಿರುವ ¨ಗ್ಗೆ ಆಗ್ನೇಯ ವಿಭಾಗದ ಸಿ.ಇ.ಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ  ಕೈಗೊಂಡ ಸಿ.ಇ.ಎನ್ ಠಾಣೆ ಪೊಲೀಸರು ಹಣ ವರ್ಗಾವಣೆಗೊಂಡಿರುವ ಬ್ಯಾಂಕ್ ಖಾತೆದಾರರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.


ಆರೋಪಿಗಳಾದ ಅಪ್ಪಾಜಿ ಗಂಗಾರಾಂ ಹಲ್ಕೇಕರ್, ಮಹಾಂತೇಶ್, ಸುರೇಶ್ ಮಲ್ಲಪ್ಪ ಅಗಸರ ರವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಪ್ರಮುಖ ಆರೋಪಿ  ಅಪ್ಪಾಜಿಯು 2006  ರಲ್ಲಿ ಬೆಂಗಳೂರಿಗೆ ಆಗಮಿಸಿ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ. ಈ ಸಂದರ್ಭದಲ್ಲಿ ಮಹಾಂತೇಶ್ ಹಾಗೂ ಸುರೇಶ್ ಎಂಬುವರು ಪರಿಚಯವಾಗಿರುತ್ತಾರೆ. 

ಅಪ್ಪಾಜಿಗೆ ಪೋನ್ ಮುಖಾಂತರ ಪರಿಚಯವಾದ ಮುಂಬೈ ಮೂಲದ ಹರ್ಷಿದ್ ಎಂಬುವÀನೊಂದಿಗೆ ವಾಟ್ಸ್‍ಅಪ್‍ನಲ್ಲಿ ಸಂಪರ್ಕದಲ್ಲಿದ್ದ. ಸಾರ್ವಜನಿಕರ ಹಣವನ್ನು ಆನ್‍ಲೈನ್ ಮೂಲಕ ವಂಚಿಸುವ ಉದ್ದೇಶದಿಂದ ಮುಂಬೈ ಮೂಲದ ಹರ್ಷಿದ್ ಸಾರ್ವಜನಿಕರಿಗೆ ವಂಚಿಸಿದ ಹಣವನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಿಕೊಳ್ಳುವ ಸಲುವಾಗಿ ಅಪ್ಪಾಜಿ ಮುಖಾಂತರ ಮಹಾಂತೇಶ್ ಮತ್ತು ಸುರೇಶ್ ಆರೋಪಿತರನ್ನು ಹಣ ಆಮಿಷವೊಡ್ಡುವ ಮೂಲಕ ಕೃತ್ಯಕ್ಕೆ ಬಳಸಿಕೊಂಡಿದ್ದ. 

ಮೂವರ ಬ್ಯಾಂಕ್ ಖಾತೆಗಳಿಗೆ ವಂಚನೆಯ ಹಣ ಜಮೆ ಆಗುತ್ತಿತ್ತು, ಒಟ್ಟಾರೆ 15 ಬ್ಯಾಂಕ್ ಖಾತೆಗಳಿಗೆ ವಂಚನೆಯ ಹಣ ಜಮೆ ಆಗಿದೆ. ಪ್ರಮುಖ ಆರೋಪಿಯಿಂದ ಈ ಮೇಲ್ಕಂಡ ಆರೋಪಿಗಳಿಗೆ ಒಂದು ಲಕ್ಷಕ್ಕೆ ರೂ. 3,000ರಂತೆ ಮೂರು ಜನರು ಸುಮಾರು 3 ಲಕ್ಷ ಹಣ ಕಮಿಷನ್ ರೂಪದಲ್ಲಿ ಪಡೆದಿರುತ್ತಾರೆ. ಸದರಿ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ಮುಂದುವರೆದಿದೆ. 

ಪ್ರಕರಣದಲ್ಲಿ ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತ ಶ್ರೀನಾಥ್ ಮಹದೇವ ಜೋಷಿ ಐಪಿಎಸ್ ರವರ ಮಾರ್ಗದರ್ಶನದಲ್ಲಿ  ಆಗ್ನೇಯ ವಿಭಾಗದ ಸಿ.ಇ.ಎನ್ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಎಲ್.ವೈ. ರಾಜೇಶ್, ಮಹಿಳಾ ಪಿ.ಎಸ್.ಐ ಕು|| ¯ಕ್ಷ್ಮೀ ಮೆಂಡಿಗೇರಿ, ಶ್ರೀನಿವಾಸ್ ಬಾಬು ಎ.ಎಸ್.ಐ ಮತ್ತು ಸಿಬ್ಬಂದಿಗಳಾದ ಬಸಪ್ಪ, ಅಸ್ಪಕ್ ಸಾಬ್ ರವರು ಆರೋಪಿಗಳನ್ನು ಬಂಧಿಸಿ ಆರೋಪಿತರ ವಶದಲ್ಲಿದ್ದ 02 ಮೊಬೈಲ್, 01 ಪ್ಯಾನ್ ಕಾರ್ಡ್, 01 ಆಧಾರ್ ಕಾರ್ಡ್, 10 ಪಾಸ್‍ಬುಕ್ ಮತ್ತು 15 ಎಟಿಎಂ ಕಾರ್ಡ್‍ಗಳನ್ನು ಅಮಾನತ್ತು ಪಡಿಸಿ  ಪಿರ್ಯಾದುದಾರರು ಕಳೆದುಕೊಂಡಿದ್ದ ಹಣವನ್ನು ಸಹ ಆರೋಪಿಯ ಬ್ಯಾಂಕ್ ಖಾತೆಯಲ್ಲಿ ಫ್ರೀಜ್ ಮಾಡಿ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ. 


Post a Comment

0 Comments

Ad Code

Responsive Advertisement