Ticker

6/recent/ticker-posts

Ad Code

Responsive Advertisement

ಬ್ರಿಗೇಡ್‍ ಕೇಂದ್ರ ಸಮಿತಿ ವತಿಯಿಂದ ವರಲಕ್ಷ್ಮಿ ಅವರಿಗೆ `ಸಾವಿತ್ರಿ ಬಾಯಿ ಪುಲೆ' ಪ್ರಶಸ್ತಿ

SAVITHRIBAI PHULE AWARD

ಭೀಮ ಪುತ್ರಿ ಬ್ರಿಗೇಡ್‍ ಕೇಂದ್ರ ಸಮಿತಿ ವತಿಯಿಂದ ‘ಅಂತರರಾಷ್ಟ್ರೀಯ ಮಹಿಳಾ ದಿನ’ದ ಅಂಗವಾಗಿ ರಾಜ್ಯದ ವಿವಿಧ ಇಲಾಖೆಗಳ ಹಾಗೂ ಸಂಘ ಸಂಸ್ಥೆಗಳ 30 ಜನ ಸಾಧಕಿಯರಿಗೆಅಕ್ಷರದಪ್ಪ ‘ಸಾವಿತ್ರಿ ಬಾಯಿ ಪುಲೆ ಅವರ ಹೆಸರಿನಲ್ಲಿ ಪ್ರತಿಷ್ಠಿತ‘ಸಾವಿತ್ರಿ ಬಾಯಿ ಪುಲೆ ಪ್ರಶಸ್ತಿ- 2021’ಅನ್ನು ಪ್ರದಾನ ಮಾಡಲಾಯಿತು.


ಸಮಾರಂಭವನ್ನು ವಿರೋಧ ವಷದ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯ ಅವರು ಸಾವಿತ್ರಿ ಬಾಯಿ ಪುಲೆ ಅವರ ಬೆಳ್ಳಿ ರಥದ ಮೇರವಣಿಗೆಗೆಧ್ವಜಬೀಸುವ ಮೂಲಕ ಚಾಲನೆ ನೀಡಿದರು.

ಅಲ್ಲದೆಮಾತನಾಡಿಭೀಮಪುತ್ರಿ ಬ್ರಿಗೇಡ್‍ಬಡವರಿಗೆ, ದಮನಿತರಿಗೆ, ದಲಿತ, ಅಲೆಮಾರಿ-ಬುಡಕಟ್ಟು ಹಾಗೂ ಆದಿವಾಸಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಅತ್ಯಂತ ಶ್ಲಾಘನೀಯ ಕೆಲಸಗಳನ್ನು ಮಾಡುತ್ತಾ ಬಂದಿದೆ.ಇದನ್ನು ಹಿಗೆಯೇ ಮುಂದುವರೆಸಿ ಎಂದರುಮತ್ತುಇವರನ್ನು ಬೆಂಬಲಿಸುತ್ತಿರುವ180ಕ್ಕೂ  ಹೆಚ್ಚಿನ ಮೂಲ ನಿವಾಸಿ ಸಂಘಟನೆಗಳಒಕ್ಕೂಟ ಹಾಗೂ ನಿಮ್ಮಜೋತೆಗೆ  ಸದಾನಾನಿರುತ್ತೇನೆಎಂದರು.

ಇದೇ ಸಂಘಟನೆಯುಸಾವಿತ್ರಿ ಬಾಯಿ ಪುಲೆ ರಥದೊಂದಿಗೆ ತೆರಳಿಚೌಡಯ್ಯ ಮೊಮೋರಿಯಲ್ ಹಾಲ್‍ನಲ್ಲಿ ಆಯೋಜಿಸಿದ ಸಮಾರಂಭದಲ್ಲಿವಿವಿಧ ಇಲಾಖೆಗಳಲ್ಲಿ ಬಡವರಿಗೆ,ದಮನಿತರಿಗೆ, ದಲಿತ,ಅಲೆಮಾರಿ-ಬುಡಕಟ್ಟು ಹಾಗೂ ಆದಿವಾಸಿ ಸೇವೆ, ಹಾಗೂ ಕಲೆ, ಸಾಹಿತ್ಯ, ಸಂಸ್ಕøತಿ, ನಾಟಕ,ದಮನಿತ, ಆದಿವಾಸಿ, ಬುಡಕಟ್ಟು ಹಾಗೂ ದಲಿತ, ಸಂಸ್ಕøತಿ, ಸಾಹಿತ್ಯ , ಪ್ರದರ್ಶನ ಹಾಗೂ ಸಮಾಜ ಸೇವೆ ಯನ್ನು ಪರಿಗಣಿಸಿ 2021 ರ ಸಾಲಿನ ಪ್ರಥಮ ವರ್ಷದ ಸಾವಿತ್ರಿಬಾಯಿ ಪೂಲೆ ಪ್ರಶಸ್ತಿಯನ್ನು ಪ್ರದಾನಮಾಡಲಾಯಿತು.


ಆಡಳಿತ, ಪತ್ರಿಕೋಧ್ಯಮ, ರಾಜಕೀಯ ಹೀಗೆ ವಿವಿಧ ಇಲಾಖೆಗಳಲ್ಲಿ ಹಾಗೂವಿವಿಧಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಮಹಿಳೆಯರನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆಮಾಡಿಗೌರವಿಸಲಾಯಿತು. ಶ್ರೀಮತಿ ಸೌಮ್ಯರೆಡ್ಡಿ (ರಾಜಕೀಯ), ಡಾ.ಬಿ.ಎಲ್.ಸುಜಾತರಾಥೋಡ್ ಹಾಗೂಡಾ.ಗೀತಾಶಿವಮೂರ್ತಿ(ವೈದ್ಯಕೀಯ) , ವಿದ್ಯುತ್‍ಇಲಾಖೆಯಲ್ಲಿ ಕಂಬ ಹತ್ತುವ ಲೈನ್‍ವುವiನ್ (ಟಿ.ಕಾವ್ಯ  ), ಬಿ.ಎಂ.ಟಿ.ಸಿಯಲ್ಲಿ ಬಸ್ ಚಾಲಕಿ (ಪ್ರೇಮಾರಾಮಪ್ಪನಡಬಟ್ಟಿ),ಅನಾಥ ಹೆಣ ಸಾಗಿಸುವ (ಆಶಾ), ಲಿಂಗತ್ವಅಲ್ಪ ಸಂಖಾತ ಹೋರಾಟಗಾರರಾದ( ಚಾಂದನಿ  ), ಶಿಕ್ಷಣಕ್ಷೇತ್ರದಿಂದ (ಹರ್ಷಿಯಾ ಬಾನು) ವಡ್ಡಗೆರೆಕದಿರಮ್ಮ (ಜಾನಪದ), ಶ್ರೀಮತಿ ವರಲಕ್ಷ್ಮಿ.ಎನ್ (ಬಂಜಾರ ಸಾಮಾಜಿಕ ಮತ್ತು ಸಾಂಸ್ಕøತಿಕಅಕಾಡೆಮಿ’ಯಮೂಲಕ ಮಾಡಿತ್ತಿರುವದಮನಿತ, ಅಲೆಮಾರಿ, ಬುಡಕಟ್ಟು ಕಲೆ, ಸಾಹಿತ್ಯ, ಸಂಸ್ಕøತಿ ಹಾಗೂ ಸಮಾಜ ಸೇವೆ), ಪತ್ರಿಕೋದ್ಯಮ (ಶಶಿಕಲಾ), ನಿರೂಪಣೆ (ರೇಣುಕಾ), ಸಾಹಿತ್ಯ(ಟಿ.ಕೆ.ಷರೀಪಾ), ಉಪನ್ಯಾಸ (ಪೇಮ ಪಲ್ಲವಿ) ಓಳಗೊಂಡಂತೆ 30 ಸಾಧಕಿಯರನ್ನುಗೌರವಿಸಲಾಯಿತು. 


ಭೀಮ ಪುತ್ರಿ ಬ್ರಿಗೇಡ್‍ಕೇಂದ್ರಕಚೇರಿಯನ್ನು ಶೇಷಾದ್ರಿಪುರದಲ್ಲಿ ಸ್ಥಳೀಯ ಶಾಸಕರು ಹಾಗೂ ಕಾಂಗ್ರೆಸ್‍ಅಧ್ಯಕ್ಷರಾದ ದಿನೇಶ್‍ಗುಂಡುರಾವ್ ಉದ್ಘಾಟಿಸಿದರು.  ಪ್ರಧಾನ ವೇದಿಕೆಯಲ್ಲಿ ಬಿ ಗೋಪಾಲ ಪ್ರಜಾಪರಿಷತ್  ಮುಖಂಡರು,ಡಾ. ಶಾಲಿನಿ ರಜನೀಶ್ ಭಾ.ಆ.ಸೆ. ಶ್ರೀಮತಿ ರೂಪ ಮುದ್ಗಲ್ ಐಜಿಪಿ,ರಂಗತಜ್ಞ ಹಾಗೂ ಸಂಚಾಲಕರಾದಡಾ.ಎ.ಆರ್.ಗೋವಿಂದಸ್ವಾಮಿ ,ಚಿಂತಕರಾದಯೋಗೇಶ್ ಮಾಸ್ಟರ್, ವಡ್ಡಾಗೆರೆ ನಾಗರಾಜಯ್ಯ ಮೂಲನಿವಾಸಿ ಸುಘಟನೆ ಮುಖಂಡರಾದ ಗೊಲ್ಲಹಳ್ಳಿಶಿವಪ್ರಸಾದ್, ಕೇಶವ ಮೂರ್ತಿ, ಲೋಕೇಶ್‍ಚಂದ,್ರಸೌಮ್ಯರೆಡ್ಡಿ, ಮುಖ್ಯಮಂತ್ರಿಚಂದ್ರು, ಶ್ರೀ ಎಸ್.ಆರ್.ರಾಜಾನಾಯಕ್, ಕೆಪಿಟಿಸಿಎಲ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ, ಶ್ರೀದಾಸ್ ಪ್ರಕಾಶ್, ಅಧ್ಯಕ್ಷರು ಎನ್‍ಸಿ/ಎಸ್.ಟಿ.ಕಲ್ಯಾಣ ಸಂಸ್ಥೆ, ಕೆಪಿಟಿಸಿಎಲ್, ಹೆಬ್ಬಾಳ ವೆಂಕಟೇಶ್, ಎ.ಜಿಖಾನ್, ಚಳವಳಿ ರಾಜಣ್ಣಡಾ.ಭಾನುಪ್ರಕಾಶ್, ಶ್ರೀಮತಿ ಪಂಕಜ. ಡಾ.ಶಂಕರ್ ನಾಯಕ್ ಪ್ರತಿಷ್ಠಾನ, ಮಲ್ಲಿಗೆಆನಂದ್, ಮುಂತಾದವರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿರಾಷ್ಟ್ರೀಯ ಮಹಿಳಾ ನೀತಿ ಹಾಗೂ ಯೋಜನೆಗಳ ಕುರಿತ ವಿಚಾರಗೋಷ್ಠಿ ನಡೆಯಿತು.ಮತ್ತು “ಜನ್ನಾಗಿ” ಸುದ್ದಿವಾಹಿನಿಯಲೋಗೋ ಬಿಡುಗಡೆಗೊಳಿಸಲಾಯಿತು.





Post a Comment

0 Comments

Ad Code

Responsive Advertisement