Ticker

6/recent/ticker-posts

Ad Code

Responsive Advertisement

ದಕ್ಷಿಣ ಭಾರತದಲ್ಲಿ ವಿಸ್ತರಿಸಿದ ಓಮ್ರಾನ್ ಹೆಲ್ತ್ ಕೇರ್: ಬೆಂಗಳೂರಿನಲ್ಲಿ ಸೇವಾ ಕೇಂದ್ರ ಉದ್ಘಾಟನೆ

ರಕ್ತದಒತ್ತಡದ ಮೇಲೆ ನಿಗಾ ಇರಿಸುವಡಿಜಿಟಲ್ ಸಾಧನದತಯಾರಿಕೆಯಲ್ಲಿಜಾಗತಿಕವಾಗಿ ಮುಂಚೂಣಿಯಲ್ಲಿಇರುವಓಮ್ರಾನ್ ಹೆಲ್ತ್‍ಕೇರ್‍ಇಂಡಿಯಾ,  ಬೆಂಗಳೂರಿನಲ್ಲಿತನ್ನ ಅನುಭವ ಮತ್ತು ಸೇವಾ ಕೇಂದ್ರವನ್ನು ÀÄß (experience cum service centre) ಆರಂಭಿಸಿರುವುದಾಗಿ ಪ್ರಕಟಿಸಿತು. 

ಈ ಕೇಂದ್ರವೂ ಒಳಗೊಂಡಂತೆ ಓಮ್ರಾನ್ ಈಗ ದೇಶದಾದ್ಯಂತಅನುಭವ, ಸೇವಾ ಮತ್ತು ಪಿಕ್-ಅಪ್ ಸೆಂಟರ್ ಸೇರಿದಂತೆ 65 ಕಡೆಗಳಲ್ಲಿ ವಹಿವಾಟು, ಮಾಹಿತಿ ಮತ್ತು ಸೇವಾ ಕೇಂದ್ರಗಳನ್ನು ಹೊಂದಿದಂತಾಗಿದೆ.ಓಮ್ರಾನ್ ಬ್ರ್ಯಾಂಡ್‍ನ ಉತ್ಪನ್ನಗಳಿಗೆ ಮೀಸಲಾಗಿರುವ ಈ ಕೇಂದ್ರವು, ಮನೆಯಲ್ಲಿ ಆರೋಗ್ಯಕಾಳಜಿ ಮೇಲೆ ನಿಗಾ ಇರಿಸುವ ಉತ್ಪನ್ನಗಳ ಇತರ ಬ್ರ್ಯಾಂಡ್‍ಗಳಿಗೆ ಹೋಲಿಸಿದರೆ ಇದುಓಮ್ರಾನ್‍ನ ವಿಶಿಷ್ಟ ಬಗೆಯ ವಹಿವಾಟು ಕಾರ್ಯತಂತ್ರದ ಮಹತ್ವದ ಭಾಗವಾಗಿರುವುದನ್ನು ಸೂಚಿಸುತ್ತದೆ.ಈ ಕೇಂದ್ರವುಓಮ್ರಾನ್ ಬ್ರ್ಯಾಂಡ್‍ನ ಉತ್ಪನ್ನಗಳಿಗೆ ಪ್ರತ್ಯೇಕವಾಗಿ ಮೀಸಲಾಗಿದೆ. ಗ್ರಾಹಕರ ನೆರೆಹೊರೆಯಲ್ಲಿನಚಿಕ್ಕಪುಟ್ಟಕಿರಾಣಿ ಅಂಗಡಿಗಳ ಮೂಲಕ ಗ್ರಾಹಕರು ಸುಲಭವಾಗಿತನ್ನ ಉತ್ಪನ್ನಗಳನ್ನು ಪಡೆಯಲು ನೆರವಾಗುವಓಮ್ರಾನ್ ಬದ್ಧತೆಗೂಇದು ಸಾಕ್ಷಿಯಾಗಿದೆ.ಜತೆಗೆಇ-ಕಾಮರ್ಸ್ ಚಾನೆಲ್‍ಗಳಲ್ಲಿ ತನ್ನ ಉತ್ಪನ್ನಗಳ ಲಭ್ಯತೆಯನ್ನೂ ಬಲಪಡಿಸಿದೆ. ಗ್ರಾಹಕರು ಓಮ್ರಾನ್ ಉತ್ಪನ್ನಗಳ ಉಪಯುಕ್ತತೆಯಅನುಭವ ಪಡೆಯಲು ಮತ್ತು  ಉತ್ಪನ್ನಗಳ ಗುಣಮಟ್ಟದ ದುರಸ್ತಿ ಮತ್ತು ಸೇವೆಗಳನ್ನು ತ್ವರಿತವಾಗಿ ಪಡೆಯಲು ಈ ಎಕ್ಸಪೀರಿಯನ್ಸ್ ಸೆಂಟರ್ ನೆರವಾಗಲಿದೆ.

ಬೆಂಗಳೂರಿನಲ್ಲಿ ಅನುಭವಕೇಂದ್ರದಉದ್ಘಾಟನೆಯ ಸಂದರ್ಭದಲ್ಲಿ ಮಾತನಾಡಿರುವ  ಓಮ್ರಾನ್ ಹೆಲ್ತ್‍ಕೇರ್‍ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ  ಮಸನೋರಿ ಮತ್ಸುಬರಾ ಅವರು, ‘ಕೋವಿಡ್ ಪಿಡುಗಿನ ನಂತರದ ದಿನಗಳಲ್ಲ್ಲಿ ಕಾಯಿಲೆಗಳು ಬರದಂತೆತಡೆಗಟ್ಟುವ ಮುಂಜಾಗ್ರತೆ ವಹಿಸುವುದಕ್ಕೆಜನರಜೀವನಶೈಲಿಯಲ್ಲಿ ಹೆಚ್ಚಿನ ಮಹತ್ವ ಪ್ರಾಪ್ತವಾಗಿದೆ.  ಈ ಕಾರಣಕ್ಕೆ ಸುಧಾರಿತತಂತ್ರಜ್ಞಾನದಡಿಜಿಟಲ್‍ಆರೋಗ್ಯ ಸಾಧನಗಳ ಸುಲಭ ಲಭ್ಯತೆ ಮತ್ತು ಅವುಗಳ ಕುರಿತು ಪ್ರತ್ಯಕ್ಷವಾಗಿಅನುಭವ ಪಡೆಯಲುಗ್ರಾಹಕರು ಈಗ ಹೆಚ್ಚಿನಆದ್ಯತೆ ನೀಡುತ್ತಿದ್ದಾರೆ.ಈ ಕಾರಣಕ್ಕೆತನ್ನ ಉತ್ಪನ್ನಗಳ ನೈಜ ಪ್ರದರ್ಶನ ಮತ್ತು ದುರಸ್ತಿಯ ಸಂಪೂರ್ಣ ಮಾಹಿತಿಜತೆಗೆ ಸುಧಾರಿತತಂತ್ರಜ್ಞಾನದ ಬಳಕೆ ಬಗ್ಗೆಯೂಓಮ್ರಾನ್‍ಅನುಭವಕೇಂದ್ರವುಗ್ರಾಹಕರಿಗೆಅಗತ್ಯವಾದ ವ್ಯಾಪಕ ಮಾಹಿತಿಒದಗಿಸಲಿದೆ’ ಎಂದು ಹೇಳಿದ್ದಾರೆ.

ಕೋವಿಡ್ ನಂತರದ ದಿನಗಳಲ್ಲಿ ಭಾರತದಲ್ಲಿಅಸಂಖ್ಯಜನರು, ತಮ್ಮದೇಹಾರೋಗ್ಯದ ಮಹತ್ವದ ಮಾನದಂಡಗಳ ಬಗ್ಗೆ  ಪರಿಣಾಮಕಾರಿಯಾಗಿ  ಗಮನ ನೀಡಲುರಕ್ತದಒತ್ತಡ ಮೇಲೆ ನಿಗಾ ಇರಿಸುವಡಿಜಿಟಲ್ ಸಾಧನಗಳ (ಬಿಪಿಎಂ) ಖರೀದಿಗೆ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ.  ಕೋವಿಡ್ ನಂತರದ ತಿಂಗಳುಗಳಲ್ಲಿ ‘ಬಿಪಿಎಂ’ಗಳ ಮಾರಾಟದಲ್ಲಿ ಶೇ 30ರಷ್ಟು ಏರಿಕೆದಾಖಲಾಗಿರುವುದನ್ನುಓಮ್ರಾನ್ ಬ್ರ್ಯಾಂಡ್ ಗಮನಿಸಿದೆ.

ವ್ಯಾಪಕ ಶ್ರೇಣಿಯಓಮ್ರಾನ್  ಉತ್ಪನ್ನಗಳನ್ನು ಗ್ರಾಹಕರಿಗೆ ನೇರವಾಗಿ ಪರಿಚಯಿಸಲು ಈ ಅನುಭವಕೇಂದ್ರವು  ಪ್ರತ್ಯೇಕ ‘ಅನುಭವ ವಲಯ’ ಹೊಂದಿದೆ.  ಆರಂಭದಲ್ಲಿ ಪ್ರತಿ ದಿನ 100ಕ್ಕೂ ಹೆಚ್ಚು ಗ್ರಾಹಕರಿಗೆ ಮಾಹಿತಿ ನೀಡಲಾಗುವುದನ್ನುಓಮ್ರಾನ್ ನಿರೀಕ್ಷಿಸಿದೆ.ಇಲ್ಲಿಗ್ರಾಹಕರ ಅನೇಕ ಪ್ರಶ್ನೆ ಮತ್ತು ಅನುಮಾನಗಳಿಗೆ ತ್ವರಿತವಾಗಿ ಪರಿಹಾರಒದಗಿಸಲಾಗುವುದು.ವೈವಿಧ್ಯಮಯ ಉತ್ಪನ್ನಗಳ ಸಂಪೂರ್ಣ ಮಾಹಿತಿಯನ್ನೂ ನೀಡಲಾಗುವುದು.

ಈ ಅನುಭವಕೇಂದ್ರಆರಂಭಿಸುವುದರಉದ್ದೇಶದ ಬಗ್ಗೆ ಮಾತನಾಡಿರುವ ಓಮ್ರಾನ್ ಹೆಲ್ತ್‍ಕೇರ್‍ಇಂಡಿಯಾದ ಮಾರಾಟ ಮತ್ತು ಮಾರುಕಟ್ಟೆ ವಿಭಾಗದಜನರಲ್ ಮ್ಯಾನೇಜರ್‍ರೋಹಿತ್ ಸೈನಿ ಅವರು, ‘ವಿವಿಧ ರಾಜ್ಯಗಳಲ್ಲಿ ನಾವು ಬಲವಾದÀರಿಟೇಲ್ ವಹಿವಾಟು ಹೊಂದಿದ್ದು, ಇಂತಹ ಪ್ರತ್ಯೇಕ ಮತ್ತು ವಿಶೇಷ ಅನುಭವ ಮತ್ತು ಸೇವಾ ಕೇಂದ್ರವು  ಕರ್ನಾಟಕದಾದ್ಯಂತ   ನಮ್ಮಗ್ರಾಹಕರಜತೆ ವ್ಯಾಪಕ ಬಗೆಯ ಸಂಪರ್ಕ ಹೊಂದಲು ನೆರವಾಗಲಿದೆ. ಹೊಸ ಸಹಜ ಬದುಕಿನಲ್ಲಿ ನಮ್ಮಗ್ರಾಹಕರುಆರೋಗ್ಯಕರಜೀವನಶೈಲಿ ಮುನ್ನಡೆಸಲು  ನೆರವಾಗುವ ನಮ್ಮಉದ್ದೇಶಕ್ಕೆಇದು ಪೂರಕವಾಗಿದೆ’ ಎಂದು ಹೇಳಿದ್ದಾರೆ.

‘ಮನೆಯಲ್ಲಿಆರೋಗ್ಯಆರೈಕೆಯ ಮೇಲೆ ನಿಗಾ ಇರಿಸುವಡಿಜಿಟಲ್ ಸಾಧನಗಳ ಲಭ್ಯತೆ ಮತ್ತು ಬಳಕೆಯನ್ನು ಬಲಪಡಿಸುವ ಮೂಲಕ, ದೀರ್ಘಾವಧಿಯಲ್ಲಿ ಶೂನ್ಯ ಪ್ರಮಾಣದ ಹೃದಯಾಘಾತ ಮತ್ತು ಮಿದುಳಿನ ಪಾಶ್ರ್ವವಾಯು ಪ್ರಕರಣಗಳು  (Zero Eventsವರದಿಯಾಗುವುದನ್ನು ಸಾಕಾರಗೊಳಿಸಲು ಓಮ್ರಾನ್ ಹೊಂದಿರುವದೂರದೃಷ್ಟಿಯ ಬಗ್ಗೆ ಈ ಅನುಭವಕೇಂದ್ರದಕಾರ್ಯಾರಂಭವುಇನ್ನೊಂದುದೃಢ ಹೆಜ್ಜೆಯಾಗಿದೆ’ ಎಂದು ಮತ್ಸುಬರಾ ಅವರು ಹೆಚ್ಚಿನ ಮಹತ್ವ ನೀಡಿ ವಿವರಿಸಿದ್ದಾರೆ. ಭಾರತದ ಸಮುದಾಯಕ್ಕೆ        ಡಿಜಿಟಲ್‍ರಕ್ತದಒತ್ತಡ ನಿಗಾವಹಿಸುವ, ಶ್ವಾಸಕೋಶಗಳಿಗಾಗಿ ಔಷಧಿ ಉಸಿರೆಳೆಯುವುದಕ್ಕೆ ನೆರವಾಗುವ ವೈದ್ಯಕೀಯ ಸಾಧನ (ನೆಬುಲೈಸರ್ಸ್), ದೇಹದಉಷ್ಣತೆಮಾಪಕ (ಥರ್ಮೊಮೀಟರ್), ನರಗಳ ಉತ್ತೇಜಕ (ನರ್ವ ಸ್ಟಿಮುಲೇಟರ್ಸ್), ದೇಹದಕೊಬ್ಬಿನ ಮೇಲೆ ನಿಗಾ ಇರಿಸುವ, ತೂಕ ಅಳೆಯುವ ಸಾಧನಗಳೂ ಸೇರಿದಂತೆಗುಣಮಟ್ಟದ ವೈದ್ಯಕೀಯ ಸಾಧನಗಳನ್ನು ಓಮ್ರಾನ್‍ಒದಗಿಸುತ್ತಿದೆ.

ಓಮ್ರಾನ್ ಹೆಲ್ತ್‍ಕೇರ್‍ಇಂಡಿಯಾ ಬಗ್ಗೆ

2010ರಲ್ಲಿ ಸ್ಥಾಪನೆಗೊಂಡಿರುವಓಮ್ರಾನ್ ಹೆಲ್ತ್‍ಕೇರ್‍ಇಂಡಿಯಾ(OMRON Healthcare India),  ದೇಹ ಪ್ರಕೃತಿ ಮೇಲೆ  ನಿಗಾವಹಿಸುವ ಮತ್ತುಚಿಕಿತ್ಸೆಗೆ ನೆರವಾಗುವ ವೈದ್ಯಕೀಯತಂತ್ರಜ್ಞಾನದಅನನ್ಯ ಸಾಧನಗಳನ್ನು ಒದಗಿಸುವ ಪ್ರಮುಖಕಂಪನಿಯಾಗಿದೆ. ಓಮ್ರಾನ್‍ನ ಸಮರ್ಥ ‘ಜೈವಿಕ ಮಾಹಿತಿ ಸಂವೇದನೆ’ಯೊಂದಿಗೆಕಂಪನಿಯುರಕ್ತದಒತ್ತಡ ನಿಗಾವಹಿಸುವ, ಉಸಿರಾಟದ ಚಿಕಿತ್ಸಾ ಸಾಧನಗಳು, ದೇಹದಕೊಬ್ಬಿನ ಮೇಲೆ  ನಿಗಾವಹಿಸುವ, ಡಿಜಿಟಲ್‍ಥರ್ಮೊಮೀಟರ್, ನೋವು ನಿರ್ವಹಿಸುವ ಸಾಧನ ಮುಂತಾದ ಗೃಹಬಳಕೆಯ ಆರೋಗ್ಯಆರೈಕೆ ಉತ್ಪನ್ನಗಳನ್ನು ತಯಾರಿಸುತ್ತಿದೆ. ಗೃಹ ಆರೋಗ್ಯಆರೈಕೆ ಉತ್ಪನ್ನಗಳ ಜಾಗತಿಕ ಮಾರುಕಟ್ಟೆಗೆ ಮ್ಯಾನುಅಲ್ ಮತ್ತುಡಿಜಿಟಲ್‍ರಕ್ತದಒತ್ತಡ ಸಾಧನಗಳನ್ನು ಪರಿಚಯಿಸಿದ ಮೊದಲ ಕಂಪನಿ ಇದಾಗಿದೆ.ಮನೆಗಳಲ್ಲಿ ಬಳಸುವ ಬಿಪಿ ಮಾನಿಟರ್‍ಗಳ ಭಾರತ ಮತ್ತುಜಾಗತಿಕ ಮಾರುಕಟ್ಟೆಗಳಲ್ಲಿ ಓಮ್ರಾನ್‍ಗರಿಷ್ಠ ಪ್ರಮಾಣದಲ್ಲಿ ಮಾರುಕಟ್ಟೆ ಪಾಲು ಹೊಂದಿದೆ.

ಹೆಚ್ಚಿನ ಮಾಹಿತಿಗೆದಯವಿಟ್ಟು ಈ ಅಂತರ್ಜಾಲ ತಾಣಗಳಿಗೆ ಭೇಟಿ ನೀಡಿ:

  https://www.omronbrandshop.com/




Post a Comment

0 Comments

Ad Code

Responsive Advertisement