ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಸಿಡಿ ಸಂತ್ರಸ್ತ ಯುವತಿ ವಕೀಲರ ಮೂಲಕ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಯುವತಿ ದೂರು ಸಲ್ಲಿಸಿದ ಬಳಿಕ ಮಾತನಾಡಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಕೊನೆಯ ಅಸ್ತ್ರ ಪ್ರಯೋಗ ಮಾಡಿದ್ದಾರೆ. ಇದರಿಂದ ನಮ್ಮ ಆಟ ಶುರುವಾಗಲಿದೆ ಎಂದಿದ್ದರು. ಇದಾದ ಕೆಲವೇ ಗಂಟೆಯಲ್ಲಿ ಸಿಡಿಯಲ್ಲಿದ್ದ ಯುವತಿ ತಮ್ಮ ಕುಟುಂಬಸ್ಥರೊಂದಿಗೆ ಮಾತನಾಡಿರುವ ಆಡಿಯೋ ವೊಂದು ವೈರಲ್ ಆಗಿದೆ. ಬಳಿಕ ಮಾತನಾಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇದಕ್ಕಿಂತ ದೊಡ್ಡ ಬಾಂಬ್ ಸ್ಫೋಟವಾಗಲಿದೆ. ನಾಳೆಯವರೆಗೆ ಕಾಯಿರಿ, ಇದು ಬರೀ ಟ್ರಯಲ್. ಶನಿವಾರ 4-6 ಗಂಟೆಯೊಳಗೆ ಬಾಂಬ್ ಸ್ಫೋಟವಾಗುತ್ತದೆಎಂದಿದ್ದಾರೆ.
ಇನ್ನು ಯುವತಿ ಆಡಿಯೋ ಕುರಿತು ಪ್ರತಿಕ್ರಿಯಿಸಿರುವ ಅವರು, ಬಗ್ಗೆ ನನಗೆ ಗೊತ್ತಿಲ್ಲ. ಆಡಿಯೋವನ್ನು ನಾನು ಕೇಳಿಸಿಕೊಂಡಿಲ್ಲ ಎಂದಿದ್ದಾರೆ.
ಆಡಿಯೋದಲ್ಲಿ ಡಿಕೆಶಿ ಹೆಸರು ಉಲ್ಲೇಖ ಹಿನ್ನೆಲೆ ಕುರಿತು ಮಾತನಾಡಿದ ಅವರು, ಡಿಕೆಶಿ ಹೆಸರು ಪ್ರಸ್ತಾಪ ಆಗಿರೋದು ತಿಳಿದಿದೆ. ತನಿಖೆ ಆಗಲಿ ಮುಂದೆ ಏನೆಂದು ನೋಡೋಣ. ಆಡಿಯೋದಲ್ಲಿ ಹೆಸರಿದೆ ಅಂತ ಡಿಕೆ ಆರೋಪಿಯಲ್ಲ . ಅವರು ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರೆಯಲಿ. ನನಗಾದ ಅನ್ಯಾಯ ಡಿಕೆಶಿಗೆ ಆಗಬಾರದು. ನನ್ನಂತೆ ರಾಜೀನಾಮೆ ಕೊಡೋದು ಬೇಡ ಎಂದರು.
ನಾನು ಡಿಕೆಶಿ ಬಗ್ಗೆ ಆರೋಪ ಮಾಡು ವುದಿಲ್ಲ. ಯಾವುದೇ ಸಾಕ್ಷಿ ಆಧಾರ ಗಳಿಲ್ಲದೇ ಎನೂ ಹೇಳಲ್ಲ. ಡಿ.ಕೆ. ಶಿವಕುಮಾರ್‍ಗೆ ಒಳ್ಳೆಯ ದಾಗಲಿ . ನಾನು ಯಾರಿಗೂ ಕೆಟ್ಟದ್ದನ್ನು ಬಯಸಿಲ್ಲ. ನಾನು ನಿರಪರಾಧಿಯಾಗಿ ಹೊರಗೆ ಬರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯುವತಿಯ ದೂರು ಎಫ್ ಐ ಆರ್ ಆಗುತ್ತಿದ್ದಂತೆ ಆಕೆ ಕುಟುಂಬಸ್ಥರೊಂದಿಗೆ ಮಾತನಾಡಿರುವ ಆಡಿಯೋ ಬಿಡುಗಡೆಯಾಗಿದ್ದು, ಸಂಚಲನ ಮೂಡಿಸಿದೆ. ಅಲ್ಲದೇ ಈ ಮೊದಲೇ ರಮೇಶ್ ಜಾರಕಿ ಹೊಳಿ ತಮ್ಮ ಬಳಿ ಪ್ರಬಲ ಅಸ್ತ್ರವಿದ್ದು, ಅದನ್ನು ಬಿಟ್ಟರೆ ಮುಗಿಯಿತು ಎಂದಿದ್ದರು. ಈ ಹಿನ್ನಲೆ ನಾಳೆ ರಮೇಶ್ ಜಾರಕಿ ಹೊಳಿ ಏನು ಮಾಡುತ್ತಾರೆ ಎಂಬ ಪ್ರಶ್ನೆ ಮೂಡಿದೆ. ಮತ್ತೊಂದು ಆಡಿಯೋ ಅಥವಾ ವಿಡಿಯೋ ಬಿಡುಗಡೆ ಮಾಡಲು ಸಿದ್ಧತೆ ನಡೆಸಿರುವ ಸಾಧ್ಯತೆ ಇದ್ದು, ಈ ಸಿಡಿ ಪ್ರಕರಣ ಮತ್ತಷ್ಟು ಹೊಸ ತಿರುವು ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಮಹಿಳೆ ಪ್ರತ್ಯಕ್ಷವಾದಾಗ ಸತ್ಯ ಬಯಲು: ಸಚಿವ ಸುರೇಶ್
ತಾನು ಸಂತ್ರಸ್ಥೆ ಎಂದು ಹೇಳೊಕೊಳ್ಳುತ್ತಿರುವ ಮಹಿಳೆ ಪ್ರತ್ಯಕ್ಷವಾದಾಗ ಮಾತ್ರ ಈ ಸೆಕ್ಸ್ ಸಿಡಿ ಸತ್ಯ ಏನೆಂಬುದು ಬಯಲಾಗಲಿದೆ. ಆ ಮಹಿಳೆಯ ಪೋಷಕರು ಒಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ, ಮಹಿಳೆಯ ವಿಡಿಯೋ ಹೇಳಿಕೆಯೇ ಒಂದು ರೀತಿ ಇದೆ. ಹೀಗಾಗಿ ಮೊದಲ ಸಂತ್ರಸ್ಥ ಮಹಿಳೆ ಎಸ್‍ಐಟಿ ಅಧಿಕಾರಿಗಳ ತನಿಖೆಗೆ ಒಳಗಾಗಲಿ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಂದು ತಿಳಿಸಿದ್ದಾರೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಯಲ್ಲಿ ಸೆಕ್ಸ್ ಸಿಡಿ ಕೇಸ್‍ಗೆ ಸಂಬಂಧಿಸಿದಂತೆ ಮಾತನಾಡಿರುವ ಅವರು, "ಸಂಬಂಧಪಟ್ಟ ಮಹಿಳೆ ಬೆಂಗಳೂರು ಪೊಲೀಸ್ ಕಮಿಷನರ್ ಅಥವಾ ಪೊಲೀಸ್ ಠಾಣೆಗೆ ನೇರವಾಗಿ ಬಂದು ದೂರು ಕೊಟ್ಟಾಗ ಮಾತ್ರ ಸತ್ಯ ಗೊತ್ತಾಗಲಿದೆ. ಇದ್ಯಾವುದನ್ನು ಮಾಡದೆ ಎಲ್ಲವನ್ನೂ ಸಿಡಿಯ ಮೂಲಕ ಮಾಡುತ್ತೇನೆ ಎಂಬುದು ಆಗದಿರುವ ವಿಚಾರ" ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಕರಣ ತನಿಖೆಯ ಬಗ್ಗೆಯೂ ಮಾತನಾಡಿರು ಸುರೇಶ್ ಕುಮಾರ್, "ಎಸ್‍ಐಟಿ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ವಿಚಾರಣೆ ನಡೆಸುತ್ತಿದೆ. ಖಂಡಿತವಾಗಿಯೂ ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲಿ ದ್ದಾರೆ" ಎಂದು ತಿಳಿಸಿದ್ದಾರೆ.
ಸಿಡಿ ವಿಚಾರಕ್ಕೆ ಸದನದ ಕಲಾಪ ಬಲಿಯಾದ ಬಗ್ಗೆ ತೀವ್ರ ಅಸಮಧಾನ ವ್ಯಕ್ತಪಡಿಸಿದ ಸಚಿವ ಸುರೇಶ್ ಕುಮಾರ್, "ಖಾಸಗಿ ವಿಚಾರ ಮಾತನಾಡಲು ಬೇರೆ ಬೇರೆ ವೇದಿಕೆಗಳಿವೆ. ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸದೆ ಸದನದ ಸಮಯ ಸಂಪೂರ್ಣ ಹಾಳು ಮಾಡಲಾಗಿದೆ. ಎಲ್ಲಾ ಸದಸ್ಯರಿಗೂ ತಮ್ಮ ತಮ್ಮ ಕ್ಷೇತ್ರದ ವಿಚಾರಗಳ ಬಗ್ಗೆ ಚರ್ಚೆ ಮಾಡಬೇಕೆಂಬ ಆಸೆ ಇರುತ್ತದೆ. ಆದರೆ, ಸಿಡಿ ವಿಚಾರಕ್ಕೆ ಕಲಾಪ ಬಲಿಯಾಗಿರುವುದು ಅತ್ಯಂತ ಖೇದಕರ ಸಂಗತಿ ಈ ಬಗ್ಗೆ ಸಭಾಧ್ಯಕ್ಷರು ಸಹ ಬೇಸರಗೊಂಡಿದ್ದಾರೆ" ಎಂದಿದ್ದಾರೆ.
ಅಲ್ಲದೆ, "ಈ ಬಗ್ಗೆ ಎಲ್ಲಾ ಪಕ್ಷದ ಹಿರಿಯರು ಗಂಭೀರವಾಗಿ ಅವಲೋಕನ ಮಾಡಬೇಕಿದೆ. ಸದನ ಇರೋದು ಯಾಕೆ ಇಲ್ಲಿ ಯಾವ ವಿಚಾರವನ್ನು, ಯಾವ ಗಾಂಭೀರ್ಯತೆಯಿಂದ ಚರ್ಚಿಸಬೇಕು ಎಂದು ಚಿಂತಿಸಬೇಕಿದೆ. ಸದನದಲ್ಲಿ ಅನಾವಶ್ಯಕ ವಿಚಾರಗಳಿಗೆ ದಿನಗಟ್ಟಲೆ ಸಮಯ ವ್ಯರ್ಥ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂಬುದರ ಬಗ್ಗೆಯೂ ಆಲೋಚಿಸಬೇಕಿದೆ" ಎಂದು ಅವರು ಹೇಳಿದ್ದಾರೆ.
ಎಲ್ಲಾ ಶಾಸಕರು ಏಕ ಪತ್ನಿ ವ್ರತಸ್ಥರೇ ಎಂದಿದ್ದ ಆರೋಗ್ಯ ಸಚಿವ ಸುಧಾಕರ್ ತಮ್ಮ ಮಾತನ್ನು ವಾಪಸ್ ತೆಗೆದುಕೊಂಡಿದ್ದಾರೆ. ಬಹುಶಃ ಯಾವುದೋ ಉದ್ವೇಗದಲ್ಲಿ ಹಾಗೆ ಮಾತನಾಡಿದ್ದಾರೆ ಅಷ್ಟೇ ಎಂದ ಸುರೇಶ್ ಕುಮಾರ್ ಸಾರ್ವಜನಿಕ ಬದುಕಿನಲ್ಲಿ ವ್ಯಕ್ತಿಗತ ವಿಚಾರ, ವ್ಯಕ್ತಿಗತ ಹಲ್ಲೆ ಆಕ್ರಮಣಗಳು ಹೆಚ್ಚಾಗುತ್ತಿವೆ. ಇದಕ್ಕೆಲ್ಲ ಕಡಿವಾಣ ಹಾಕಬೇಕಿದೆ ಎಂದು ತಿಳಿಸಿದ್ದಾರೆ.
ADVT....


0 Comments