Ticker

6/recent/ticker-posts

Ad Code

Responsive Advertisement

ಬೆಂಗಳೂರು ಕೆಂಗೇರಿ ಉಪನಗರದ ಏಕದಳ ಬಂಡೆಮಠದಲ್ಲಿ ಪ್ರದರ್ಶನ

 ಆಯೋಜನೆ : ಬಂಡೇಮಠ ಸಂಸ್ಥಾನ ಹಾಗೂ ಸ್ನೇಹಜೀವಿ ಚಾರಿಟೆಬಲ್ ಟ್ರಸ್ಟ್  

ಶಿವಮೊಗ್ಗ ಜಿಲ್ಲೆ ತಾಳಗುಂದದ ಕರ್ನಾಟಕದ ಅತ್ಯಂತಪ್ರಾಚಿನ ಶಿವಲಿಂಗ ಪ್ರಣವೇಶ್ವರ,ತಲೆಯಮೇಲೆ ಗಂಗೆಯನ್ನೆ ಹೊತ್ತ ತುರುವೇಕೆರೆಯ ಗಂಗಾಧರ, ಒಂದೇ ಪಾಣಿ ಪೀಠದ ಮೇಲೆ ತ್ರಿಮೂರ್ತಿಗಳನ್ನು ಬಿಂಬಿಸುವ ಗದಗದ ತ್ರಿಕೂಟೇಶ್ವರ ಹಾಗೆಯೆ ಐದು ಶಿವಲಿಂಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆ ಮುನವಳ್ಳಿಯ ಪಂಚಲಿಂಗೇಶ್ವರ, ಪರಶಿವನ ಮುಖವನ್ನು ಹೊಂದಿರುವ ಸೊರಬ ಸಮೀಪದ ಭಾರಂಗಿಯ ಮುಖಲಿಂಗ,ಮಂಡ್ಯ ಜಿಲ್ಲೆ ನೆಲಮನೆ,ಚಿತ್ರದುರ್ಗ ಜಿಲ್ಲೆ ,ಹೊಸದುರ್ಗ ತಾಲ್ಲೂಕಿನ ಹೆಗ್ಗೆರೆ,ಬೆಂಗಳೂರು ಜಿಲ್ಲೆ ಬೂದಿಗೆರೆ ಸಮೀಪದ ಚೌಡಪ್ಪನಹಳ್ಳಿಯ ಹದಿನಾರು ಮೂಲೆಗಳುಳ್ಳ ಧಾರಾಲಿಂಗU Àಳು,ಒಂದು ಶಿವಲಿಂಗದಲ್ಲಿ ಒಂದು ಸಾವಿರ ಶಿವಲಿಂಗಗಳನ್ನು ಹೊಂದಿರುವ ಶಿವಮೊಗ್ಗ ಜಿಲ್ಲೆ ಬಂದಣಿಕೆ, ಧಾರವಾಡ ಜಿಲ್ಲೆ ನರೇಂದ್ರ ,ಕೊಪ್ಪಳ ಜಿಲ್ಲೆ ಪುರದ ಸಹಸ್ರ ಲಿಂಗಗಳು, ಹಂಪಿಯ ಚಕ್ರತೀರ್ಥದಲ್ಲಿರುವ ಶಿವ ಲಿಂಗಗಳ  ವ್ಯೂಹ, ಕದಂಬ, ಚಾಲುಕ್ಯ, ಗಂಗ, ನೊಳಂಬ, ಕಲ್ಯಾಣ ಚಾಲುಕ್ಯ, ಹೊಯ್ಸಳ, ವಿಜಯನಗರಸರು ,ಮೈಸೂರು ಒಡೆಯರು ನಿರ್ಮಿಸಿರುವ ವೈವಿಧ್ಯಮಯ, ವೈಶಿಷ್ಟ್ಯ ಪೂರ್ಣ ಸಾವಿರಾರು ಶಿವಲಿಂಗ ಗಳ ಛಾಯಾಚಿತ್ರ ಚಿತ್ರಗಳನ್ನು ಒಂದೇ ಸೂರಿನಡಿಯಲ್ಲಿ ನೋಡುವ ಅವಕಾಶ ಒದಗಿ ಬಂದಿದೆ.


ಬೆಂಗಳೂರು ಸಮೀಪದ ಕೆಂಗೇರಿ ಉಪನಗರದ ಏಕದಳ ಬಂಡೆಮಠದಲ್ಲಿ ,ಬಂಡೇಮಠ ಸಂಸ್ಥಾನ ಹಾಗೂ ಸ್ನೇಹಜೀವಿ ಚಾರಿಟೆಬಲ್ ಟ್ರಸ್ ಇವರ ಸಂಯುಕ್ತಾಶ್ರಯದಲ್ಲಿ ಬೆಂಗಳೂರಿನ ಸುಪ್ರಸಿದ್ಧ ಹವ್ಯಾಸಿ ಛಾಯಾಗ್ರಾಹಕರೂ ಹಾಗೂ ದೇವಾಲಯ ಅಧ್ಯಯನಕಾರರೂ ಆದ ಶ್ರೀ ಕೆಂಗೇರಿ ಚಕ್ರಪಾಣಿಯವರು ತೆಗೆದ ಛಾಯಾಚಿತ್ರಗಳನ್ನು ಮಹಾಶಿವರಾತ್ರಿಯ ಪವಿತ್ರದಿನ (ದಿ.11--03-2021) ಆಯೋಜಿಸಲಾಗಿದೆ. ಆದಿನ ಬೆಳಿಗ್ಗೆ ಒಂಬತ್ತುವರೆಗೆ ಆರಂಭವಾಗುವ ಪ್ರದರ್ಶನ ರಾತ್ರಿ ಹನ್ನೊಂದು ಗಂಟೆಯವ ರೆಗೂ ಇರುತ್ತದೆ.


ಸಾವಿರಾರು ಶಿವಲಿಂಗಗಳ ಛಾಯಾಚಿತ್ರಗಳ ಜೊತೆ ಶಿವನ ಲೀಲಾಮೂರ್ತಿಗಳಾದ ಚಂದ್ರ ಶೇಖರ, ದಕ್ಷಿಣಾಮೂರ್ತಿ, ಕಾಲಭೈರವ, ವೀರಭದ್ರ, ನಂದಿವಾಹನ ಶಿವ, ನಾಟ್ಯಶಿವರ ವೈವಿಧ್ಯಮಯ ಛಾಯಾಚಿತ್ರಗಳ ಜೊತೆ ಶಿವನ ಪರಿವಾರ ದೇವತೆಗಳಾದ ಪಾರ್ವತಿ, ಗಣಪತಿ, ಸುಬ್ರಹ್ಮಣ್ಯ, ನಂದೀಶ್ವರ ಹಾಗೂ ನೂರಾರು ಶಿವದೇವಾ ಲಯಗಳ ಛಾಯಾಚಿತ್ರ ಗಳನ್ನು ನೋಡಿ ಕಣ್ಣು ತುಂಬಿಸಿಕೊಳ್ಳುವ ಅವಕಾಶ ಶಿವಭಕ್ತರಿಗೆ ಲಭ್ಯವಿದೆ.














ದೇವಾಲಯ ಅಧ್ಯಯನ ಕಾರ ಕೆಂಗೇರಿ ಚಕ್ರಪಾಣಿ ಕಿರು ಪರಿಚಯ 

ಬೆಂಗಳೂರು ಸಮೀಪದ ಕೆಂಗೇರಿಯವರಾದ ಚಕ್ರಪಾಣಿ ಭಾರತ್ ಸಂಚಾರ್ ನಿಗಮ (ಬಿ.ಎಸ್.ಎನ್.ಎಲ್) ನ ನಿವೃತ್ತ ಅಧಿಕಾರಿ.ವೃತ್ತಿಯಲ್ಲಿ ಸರ್ಕಾರಿ ನೌಕರರಾಗಿದ್ದರೂ ಪ್ರವೃತ್ತಿಯಲ್ಲಿ ದೇವಾಲಯಗಳ  ಛಾಯಾಗ್ರಾಹಕರು ಹಾಗೂ ಸಂಶೋಧಕರು.

ತಮ್ಮ ಸಹಪಾಠಿ ಕೆಂಗೇ ರಿಯ ಶ್ರೀ ಮುನಿ ಆಂಜಿನಪ್ಪ ನವರಿಂದ ಛಾಯಾಚಿತ್ರಕಲೆ ಯನ್ನು ಕಲಿತ ಚಕ್ರಪಾಣಿ ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ಶಾಸನ ತರಗತಿಗೆ ಸೇರಿ ದೇವಾಲಯದ ಶಾಸ್ತೀಯ ಅಧ್ಯಯನವನ್ನೂ ಕಲಿತರು.

ಚಕ್ರಪಾಣಿಯವರು ಕನ್ನಡನಾಡಿನ ಮೂಲೆಮೂಲೆ ಗಳಲ್ಲೂ ಸಂಚರಿಸಿ ನಾಡಿನ ದೇವಾಲಯಗಳ , ದೇವತಾ ಮೂರ್ತಿಗಳ ಛಾಯಾಚಿತ್ರ ಗಳನ್ನು ತೆಗೆದು ಸಂಗ್ರಹಿಸಿದ್ದಾರೆ ಹಾಗೂ ದೇವಾಲಯಗಳನ್ನು ಕುರಿತು ಪುಸ್ತಕಗಳನ್ನೂ ಬರೆದಿರುವರು. ಇವರು ಸುಮಾರು ಇಪ್ಪತೈದು ವರ್ಷಗಳಿಂದ ಯಾವ ಪ್ರತಿ ಫಲಾಪೇಕ್ಷೆಯು ಇಲ್ಲದೆ ,ತಮ್ಮ ಸ್ವಂತ ಖರ್ಚಿನಲ್ಲಿ ಛಾಯಾ ಚಿತ್ರಗಳನ್ನು ತೆಗೆಯುವ  ಹಾಗೂ ಸಾರ್ವಜನಿಕರಿಗೆ ಪ್ರದರ್ಶಿಸುವ ಕೈಂಕರ್ಯವನ್ನು ಕೆಂಗೇರಿಚಕ್ರಪಾಣಿಯವರು ಕೈಗೊಂಡಿರುವರು.

ಚೆನೈ ಮೈಸೂರು,ಕೆ.ಆರ್. ನಗರ,ಮಧುಗಿರಿ,ದೇವನಹಳ್ಳಿ ತಾಲ್ಲೂಕು ವಿಜಯಪುರ, ಕೆಂಗೇರಿ,ಧರ್ಮಸ್ಥಳ, ಬೆಂಗ ಳೂರಿನಲ್ಲಿ ಅನೇಕ ಕಡೆ ಇವರ ದೇವಾಲಯಗಳ ಚಿತ್ರ ಪ್ರದರ್ಶನವೂ ಪ್ರದರ್ಶಿತವಾಗಿ ವಿದ್ವಾಂಸರ ಹಾಗೂ ಸಾರ್ವಜ ನಿಕರ ಮೆಚ್ಚುಗೆಗೆ ಪಾತ್ರವಾಗಿದೆ. 

ಕೆಂಗೇರಿ ಚಕ್ರಪಾಣಿಯವರ ಮೊ.ಸಂ.9448386886

Post a Comment

0 Comments

Ad Code

Responsive Advertisement