Ticker

6/recent/ticker-posts

Ad Code

Responsive Advertisement

ಸಿಲಿಕಾನ್ ನಗರದ ಅತಿದೊಡ್ಡ ಚಿನ್ನದ ಮಳಿಗೆ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಕೆ.ಅರ್. ಪುರಂನಲ್ಲಿ ಶುಭಾರಂಭ

ಚಿನ್ನದ ಸಂಗ್ರಹವಿದ್ದರೆ ಮಹಿಳೆಯರ ಆರ್ಥಿಕ ಭದ್ರತೆ, ಕುಟುಂಬಕ್ಕೆ ಆಧಾರ – ಎಚ್.ಡಿ.ಕುಮಾರ ಸ್ವಾಮಿ
ಬೆಂಗಳೂರು, ಮಾ 21 ; ಬೆಂಗಳೂರಿನ ಅತಿ ದೊಡ್ಡ ಚಿನ್ನದ ಮಳಿಗೆ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ನ 5ನೇ ಚಿನ್ನದ ಮಳಿಗೆಯನ್ನು ಕೆ.ಆರ್. ಪುರಂನಲ್ಲಿ ಇಂದು ವಿಧ್ಯುಕ್ತವಾಗಿ ಶುಭಾರಂಭ ಮಾಡಲಾಗಿದೆ. ಅತ್ಯಂತ ಅಪರೂಪದ ಆಭರಣಗಳ ಬಂಢಾರ ಇದಾಗಿದ್ದು, ಸಾವಿರಾರು ವಿನ್ಯಾಸಗಳು ಇಲ್ಲಿವೆ. ಆಂಟಿಕ್ ಆಭರಣಗಳ ನಿಧಿಯೇ ಇಲ್ಲಿ ಮೈದಳೆದಿದೆ. ಜತೆಗೆ ಬಗೆ ಬಗೆಯ ಗಡಿಯಾರಗಳು ಮತ್ತಿತರ ವಸ್ತುಗಳ ಸಂಗ್ರಹವನ್ನು ಕಾಣಬಹುದಾಗಿದೆ. ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ. ಅವಧೂತರಾದ ವಿನಯ್ ಗುರೂಜಿ, ಸಾಯಿ ಗೋಲ್ಡ್ ಪ್ಯಾಲೇಸ್ ನ ಮಾಲೀಕ ಡಾ. ಟಿ.ಎ. ಶರವಣ , ಹಿರಿಯ ನಟ ದ್ರುವ ಸರ್ಜಾ, ಸಾಯಿ ಗೋಲ್ಡ್ ಪ್ಯಾಲೇಸ್ ನ ರಾಯಭಾರಿ ರೂಪಿಕ ಅವರ ಸಮ್ಮುಖದಲ್ಲಿ ಈ ಮಳಿಗೆ ಶುಭಾರಂಭ ಮಾಡಿತು. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಮಾತನಾಡಿ, ಚಿನ್ನ ಮಿನಿ ಬ್ಯಾಂಕ್ ಇದ್ದಂತೆ. ಸಣ್ಣ ಪ್ರಮಾಣದ ಚಿನ್ನವಿದ್ದರೂ ಸಹ ಅದು ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ. ಮಹಿಳೆಯರಿಗೆ ಇದು ಆರ್ಥಿಕ ಭದ್ರತೆ ಒದಗಿಸುತ್ತದೆ. ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದು, ಉಳಿತಾಯ ಮಾಡಿದ ಹಣದಲ್ಲಿ ಸಣ್ಣ ಪ್ರಮಾಣದಲ್ಲಿ ಚಿನ್ನ ಸಂಗ್ರಹ ಮಾಡಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಸಾಯಿ ಗೋಲ್ಡ್ ಪ್ಯಾಲೇಸ್ ಮಾಲೀಕ ಡಾ. ಟಿ.ಎ. ಶರವಣ ಮಾತನಾಡಿ, ಬಯಲು ಸೀಮೆ ಪ್ರದೇಶದ ಅದರಲ್ಲೂ ಪ್ರಮುಖವಾಗಿ ಕೋಲಾರ ಮತ್ತಿತರ ಭಾಗದ ಜನತೆ ಬೆಂಗಳೂರಿನ ಸಂಚಾರಿ ಒತ್ತಡದಲ್ಲಿ ನಗರಕ್ಕೆ ಬಂದು ಚಿನ್ನ ಖರೀದಿ ಮಾಡಲು ಕಷ್ಟವಾಗುತ್ತಿದೆ, ಇದನ್ನು ಮನಗಂಡು ಮದುವೆ ಮತ್ತಿತರ ಸಮಾರಂಭಗಳಿಗೆ ಇದೀಗ ಚಿನ್ನ ಖರೀದಿ ಮಾಡಲು ಕೆ.ಆರ್,ಪುರಂನ ಮಳಿಗೆ ಸಹಕಾರಿಯಾಗಿದೆ ಎಂದರು. ಮಳಿಗೆ ಶುಭಾರಂಭ ಮಾಡಿದ ಸುಸಂದರ್ಭದಲ್ಲಿ ಗ್ರಾಹಕರಿಗಾಗಿ ದುಬೈ ಬೆಲೆಯಲ್ಲಿ ಚಿನ್ನಾಭರಣವನ್ನು ಖರೀದಿಸುವ ಸುವರ್ಣ ಅವಕಾಶ ಕಲ್ಪಿಸಲಾಗಿದೆ. ಪ್ರತಿ ಒಂದು ಕೆಜಿ ಬೆಳ್ಳಿ ಆಭರಣ ಖರೀದಿಸಿದರೆ 2000 ರೂ ರಿಯಾಯಿತಿ ಮತ್ತು 50 ಸಾವಿರಕ್ಕಿಂತ ಹೆಚ್ಚಿನ ವಜ್ರಾಭರಣಗಳ ಖರೀದಿಗೆ ಉಚಿತ ಚಿನ್ನದ ನಾಣ್ಯ ನೀಡಲಾಗುತ್ತಿದೆ. ಯಾವುದೇ ಬೆಳ್ಳಿ ಆಭರಣಗಳ ಖರೀದಿ ಮೇಲೆ ಶೇ5 ರಷ್ಟು ರಿಯಾಯಿತಿ ನೀಡಲಾಗುತ್ತಿದೆ ಎಲ್ಲಾ ಕೊಡುಗೆಗಳನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಡಾ. ಟಿ.ಎ. ಶರವಣ ರವರು ಕರೆನೀಡಿದರು.

Post a Comment

0 Comments

Ad Code

Responsive Advertisement