Ticker

6/recent/ticker-posts

Ad Code

Responsive Advertisement

ಸುಸಂಸ್ಕøತ ರಾಷ್ಟ್ರ ನಿರ್ಮಾಣಕ್ಕೆ ``ರಂಗ ಸಂಭ್ರಮ’’ ನಾಟಕೋತ್ಸವ ಪೂರಕ

ಸುಸಂಸ್ಕøತ ರಾಷ್ಟ್ರ ನಿರ್ಮಾಣಕ್ಕೆ ಸುಭದ್ರ ಸಮಾಜ ಅಗತ್ಯ. ಇದಕ್ಕೆ ಪೂರಕವಾಗಿರುವುದು `ರಂಗ ಸಂಭ್ರಮ’ ನಾಟಕೋತ್ಸವ. ವೈವಿಧ್ಯಮಯವಾದ ನಾಟಕಗಳು ಸಮಾಜದ ಹಲವು  ಮಜಲುಗಳನ್ನು  ಎತ್ತಿಹಿಡಿಯುವ ಕೈಗನ್ನಡಿ. ರಂಗಭೂಮಿ ವ್ಯಕ್ತಿತ್ವ ವಿಕಸನಕ್ಕೆ ಪರಿಣಾಮಕಾರಿ ಮಾಧ್ಯಮ.  ಇದರ ಸದ್ಬಳಕೆಗೆ  ಬಡಾವಣೆಗಳಲ್ಲಿ ರಂಗಮಂದಿರದ ಅವಶ್ಯಕತೆ ಬಹಳ ಮುಖ್ಯ. ಸಾಂಸ್ಕøತಿಕ ಹಿನ್ನೆಲೆಯಿದ್ದಾಗ ಮಾತ್ರ ಮನುಷ್ಯ ನಾಗರಿಕನಂತೆ ವರ್ತಿಸಲು ಸಾಧ್ಯವೆಂದು ಸಂಗೀತ ಮತ್ತು ನೃತ್ಯ ಆಕಾಡೆಮಿಯ ಅಧ್ಯಕ್ಷರಾದ ಆನೂರು ಅನಂತಕೃಷ್ಣಶರ್ಮಾ ರವರು ಅಭಿಪ್ರಾಯಪಟ್ಟರು.         


ಶ್ರೀವಿವೇಕಾನಂದ ಕಲಾಕೇಂದ್ರದ ``ರಂಗಸಂಭ್ರಮ’’ – ನಾಟಕೋತ್ಸವ ಅತ್ಯುತ್ತಮವಾಗಿ 9 ದಿನಗಳ ಅವಧಿಯಲ್ಲಿ ಆಯೋಜನೆಗೊಂಡಿತ್ತು. ಪ್ರತಿದಿನವೂ ಪ್ರದರ್ಶನಗೊಂಡ 9 ನಾಟಕಗಳು ಕಲಾಪ್ರೇಮಿಗಳನ್ನು ರಂಜಿಸಿತು. ಸಂಸ್ಥೆಯು ಇದರ ಆಯೋಜನೆಯಲ್ಲಿ ತೋರಿದ ಅಚ್ಚುಕಟ್ಟುತನ, ನಾವಿನ್ಯತೆ ಹಾಗೂ ಆದರತೆ ಸ್ತುತ್ಯಾರ್ಹ. ಈ ಸಂಸ್ಥೆಯ ಪ್ರಾಂಶುಪಾಲರಾದ  ಕರ್ನಾಟಕ ಕಲಾಶ್ರೀ ಪುರಸ್ಕøತೆ ಶ್ರೀಮತಿ ಎಂ. ಕೆ. ಜಯಶ್ರೀ ಸಂಗೀತ ಕ್ಷೇತ್ರದಲ್ಲಿ.  ನೃತ್ಯವಿದೂಷಿ ಡಾ. ಶ್ವೇತ ಹರ್ಷರವರು ನೃತ್ಯಕ್ಷೇತ್ರದಲ್ಲಿ ಹಾಗೂ ಅಭಿನಯದಲ್ಲಿ ಮಾಸ್ಟರ್ ದೈವಿಕ್‍ರವರು ತೋರುತ್ತಿರುವ ಅಸ್ಥೆಯನ್ನು ಪ್ರಶಂಸಿಸಿ ಬಡಾವಣೆಗಳಲ್ಲಿ ಇಂತಹ ಸಾಂಸ್ಕøತಿಕ ಜಾಗೃತಿಯನ್ನು ಕಳೆದ 49 ವರ್ಷಗಳಿಂದ ಆಚರಿಸಿ, ಸುವರ್ಣಮಹೋತ್ಸವದತ್ತ ಸಾಗುತ್ತಿರುವ ಈ ಸಂಸ್ಥೆಗೆ ತಮ್ಮ ಕೈಲಾದ ಎಲ್ಲ ನೆರವನ್ನು  ನೀಡುವ ಭರವಸೆ ಆನೂರು ಅನಂತಕೃಷ್ಣಶರ್ಮಾ ರವರು ನೀಡಿದರು.


27-02-2021 ರಿಂದ  ಪ್ರಾರಂಭವಾದ ಈ ನಾಟಕೋತ್ಸವದಲ್ಲಿ `ಚಿತ್ರಪಟ’, `ಬೀ.ಚಿ. ರಸಾಯನ’ `ಶೋಕಚಕ್ರ’, `ಸಾಲುಮರಗಳ ತಾಯಿ ತಿಮ್ಮಕ್ಕ’, `ಟೊಳ್ಳುಗಟ್ಟಿ’, `ಅವಾಂತರದ ಅಳಿಯ’, `ಶತಮರ್ಕಟ’, `ಇಂದೂರಿನ ಮಹಾರಾಣಿ ಅಹಿಲ್ಯಾಬಾಯಿ ಹೋಳ್ಕರ್’, ಹಾಗೂ `ಮೇಘದೂತ’ ಮುಂತಾದ 9 ನಾಟಕಗಳು ಪ್ರದರ್ಶಿತವಾದವು.

ಪ್ರಖ್ಯಾತ ಯುವ ನಿರ್ದೇಶಕರುಗಳಾದ ಮಾಲತೇಶ ಬಡಿಗೇರ, ಎನ್.ಸಿ.ಮಹೇಶ್, ಗುರುಪ್ರಸಾದ್.ಕೆ, ರಾಮಕೃಷ್ಣ ಬೆಳತೂರು, ಎಂ. ಪ್ರಹ್ಲಾದ್, ಅನುರಾಗ್, ಮೈಸೂರು, ಡಾ. ಎಸ್. ವಿ. ಕಶ್ಯಪ್, ಹಾಗೂ ಸಿದ್ಧರಾಮ ಕೊಪ್ಪರ್ ರವರ ನಿರ್ದೇಶನದಲ್ಲಿ ಸುಮಾರು 400  ಕ್ಕಿಂತ ಹೆಚ್ಚಿನ ಯುವಕಲಾವಿದರು ವಿವಿಧ ಕಲಾತಂಡಗಳ ಮೂಲಕ ಉತ್ಸಾಹದಿಂದ ಭಾಗವಹಿಸಿದ್ದು ಪ್ರಶಂಸನೀಯವಾಗಿತ್ತು. 

9 ದಿನಗಳ ``ನವಯುವ ರಂಗೋತ್ಸವ’’ವನ್ನು ಸಂಸ್ಕøತಿ ಸಚಿವಾಲಯ, ಭಾರತ ಸರ್ಕಾರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕರ್ನಾಟಕ ಸರ್ಕಾರ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ವತಿಯ ಸಹಕಾರದಿಂದ ಆಯೋಜಿಸಲಾಗಿತ್ತು.  ಇದರಲ್ಲಿ  ಸಾಮಾಜಿಕ, ರಾಜಕೀಯ, ಪೌರಾಣಿಕ ಹಾಗೂ ಐತಿಹಾಸಿಕ ನಾಟಕಗಳನ್ನು ಪ್ರದರ್ಶಿಸಿ ರಂಗಾಸಕ್ತರಿಗೆ ಮನರಂಜನೆಯನ್ನು ನೀಡಿದರು. 


ಡ ಈ ರಂಗೋತ್ಸವದಲ್ಲಿ ರಂಗಭೂಮಿಯ, ವಿವಿಧ ಕ್ಷೇತ್ರಗಳ, ಧಾರವಾಹಿ ಹಾಗೂ ಚಲನಚಿತ್ರಗಳ  ಹಿರಿಯ ಹಾಗೂ ಉದಯೋನ್ಮುಖ ಕಲಾವಿದರು ಪಾಲ್ಗೊಂಡಿದ್ದು  ವಿಶೇಷವಾಗಿತ್ತು. 

ಈ ಉತ್ಸವಕ್ಕೆ ಆಗಮಿಸಿದ್ದ ಗಣ್ಯರು ಕಲಾಕೇಂದ್ರದ ಸ್ಥಾಪಕರಾದ ಡಾ. ವಿ. ನಾಗರಾಜ್, ನೃತ್ಯ ವಿದೂಷಿ ಡಾ. ಶ್ವೇತ, ಹಾಗೂ  ಕರ್ನಾಟಕ ಕಲಾಶ್ರೀ ಶ್ರೀಮತಿ ಎಂ. ಕೆ. ಜಯಶ್ರೀ, ಡಾ. ಗುರುರಾಜ ಪೋಶೆಟ್ಟಿಹಳ್ಳಿ ,  ಮಾಲತೇಶ ಬಡಿಗೇರ್, ಮಾಸ್ಟರ್ ದೈವಿಕ್, ಪ್ರೊ.ರಾಜೀವ್ ಹಾಗೂ ಎಲ್ಲಾ ಸಂಚಾಲಕರನ್ನು ಉತ್ಸವವನ್ನು ಅಚ್ಚುಕಟ್ಟಾಗಿ ಅಯೋಜಿಸಿದ್ದಕ್ಕೆ ಮನಸಾರೆ ಅಭಿನಂದಿಸಿದರು.



Post a Comment

0 Comments

Ad Code

Responsive Advertisement