Ticker

6/recent/ticker-posts

Ad Code

Responsive Advertisement

ಹೈದರಾಬಾದ್‌ - ಐಟಿ ಶೋಧ : ರಿಯಲ್ ಎಸ್ಟೇಟ್‌ ಉದ್ಯಮಿಗಳ ಮನೆಯಲ್ಲಿ 11.88 ಕೋಟಿ ರೂ ಪತ್ತೆ

 ನವದೆಹಲಿ, ಮಾರ್ಚ್ 31: ಹೈದರಾಬಾದ್‌ನ ಇಬ್ಬರು ರಿಯಲ್ ಎಸ್ಟೇಟ್ ಉದ್ಯಮಿಗಳ ಮನೆಯಲ್ಲಿ ಬುಧವಾರ ಆದಾಯ ತೆರಿಗೆ ಇಲಾಖೆ ಶೋಧ ಕಾರ್ಯ ನಡೆಸಿದ್ದು, ದಾಖಲೆಯಿಲ್ಲದ 11.88 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿದುಬಂದಿದೆ. ಹೈದರಾಬಾದ್‌ನ ಯಾದಗಿರಿಗುಟ್ಟವಿನಲ್ಲಿ ಇಲಾಖೆ ಶೋಧ ಕಾರ್ಯ ಕೈಗೊಂಡಿದ್ದು, ಈ ವೇಳೆ 11.88 ಕೋಟಿ ರೂಗಳೊಂದಿಗೆ 1.93 ಕೋಟಿ ಮೌಲ್ಯದ ಚಿನ್ನಾಭರಣಗಳು ದೊರೆತಿರುವುದಾಗಿ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.



ಈ ರಿಯಲ್ ಎಸ್ಟೇಟ್ ಉದ್ಯಮಿಗಳು ಅಪಾರ್ಟ್‌ಮೆಂಟ್ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದರು ಎನ್ನಲಾಗಿದೆ. ಶೋಧ ಕಾರ್ಯಾಚರಣೆ ವೇಳೆ ಹಲವು ದಾಖಲೆಗಳು, ಕೈಬರಹದ ಪುಸ್ತಕಗಳು, ಒಪ್ಪಂದ ದಾಖಲೆಗಳು ಪತ್ತೆಯಾಗಿದ್ದು, ಅನಧಿಕೃತ ಹಣ ವ್ಯವಹಾರ ನಡೆದಿರುವುದನ್ನು ಇವೆಲ್ಲ ಸೂಚಿಸಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ವಿಶೇಷ ಸಾಫ್ಟ್‌ವೇರ್ ಅಪ್ಲಿಕೇಷನ್ ಹಾಗೂ ಇನ್ನಿತರೆ ವಿದ್ಯುನ್ಮಾನ ಗ್ಯಾಜೆಟ್‌ಗಳನ್ನು ಬಳಸಿ ಮಾಹಿತಿ ಸಂಗ್ರಹಿಸಿದ್ದು, ಭೂಮಿ ಖರೀದಿ ಹಾಗೂ ರಿಯಲ್ ಎಸ್ಟೇಟ್ ಸಂಬಂಧಿ ವ್ಯವಹಾರಕ್ಕೆ ನೋಂದಾಯಿತ ಮೌಲ್ಯಕ್ಕಿಂತ ಇವರು ಹೆಚ್ಚಿನ ಹಣ ಪಡೆಯುತ್ತಿದ್ದರು ಎಂದು ತಿಳಿಸಿದೆ.


Post a Comment

0 Comments

Ad Code

Responsive Advertisement