Ticker

6/recent/ticker-posts

Ad Code

Responsive Advertisement

`ಪೆಗಾಸಸ್'" ಕೃತಿ ಸಂವಾದ ಕಾರ್ಯಕ್ರಮ: ಸಾಹಿತ್ಯ ಸೇವೆ ಎಲ್ಲರ ಹೊಣೆ: ಪ್ರೊ.ಹನ್ನೆರಡು ಮಠ ಹೇಳಿಕೆ

ಬೆಂಗಳೂರು : ಮಲ್ಲೇಶ್ವರ ಫೆ. 23:  ಕನ್ನಡ ಸಾಹಿತ್ಯ ಬಹಳ ಪುರಾತನ ಹಾಗೂ ಅಮೂಲ್ಯವಾದದ್ದು.ಇದನ್ನು ಉಳಿಸಿ ಬೆಳೆಸ ಬೇಕಾದದ್ದು  ಜನರ ಕರ್ತವ್ಯ ಎಂದು ಕನ್ನಡದ ಖ್ಯಾತ ಕವಿ ಹಾಗೂ ಲೇಖಕರಾದ ಪ್ರೊ.ಜಿ.ಹೆಚ್. ಹನ್ನೆರಡು ಮಠ ತಿಳಿಸಿದರು.ಅವರು M.S.V.ಶಾಲಾ ಸಭಾಂಗಣದಲ್ಲಿ ಮಲ್ಲೇಶ್ವರಂ ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಆಯೋಜಿಸಿದ  ಸಿ.ವಿ ತಿರುಮಲ ರಾವ್ ವಿರಚಿತ 'ಪೆಗಾಸಸ್'" ಕೃತಿ ಸಂವಾದದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.

ಪೆಗಾಸಸ್ ಎಂದರೆ ಗ್ರೀಕ್ ಪುರಾಣದ ರೆಕ್ಕೆಯುಳ್ಳ ಬಿಳಿ ಕುದುರೆ.ಅದು‌ ಕಾವ್ಯ ಸ್ಫೂರ್ತಿ ನೀಡುವ ಸಂಕೇತ.  ಪಂಪ,ರನ್ನ,ಕಾಳಿದಾಸ,ಶೇಕ್ಸ್‌ಪಿಯರ್, ಮಿಲ್ಟನ್ ಇವರೆಲ್ಲಾ ಒಂದು ದೃಷ್ಟಿಯಿಂದ ವಿಶ್ವ ಕಾವ್ಯದ ಪೆಗಾಸಸ್ ಗಳು ಎಂದು ಬಣ್ಣಿಸಿದರು.ವೃತ್ತಿ ಎಷ್ಡು ಮುಖ್ಯವೋ ಪ್ರವೃತ್ತಿ ಅಷ್ಟೇ ಮುಖ್ಯ,



ಸಾಹಿತ್ಯದ ಅಭ್ಯಾಸ  ಪ್ರವೃತ್ತಿಯಾಗಬೇಕು  ಪ್ರತಿಯೊಬ್ಬರೂ ಕಾವ್ಯದ ರಸಾನುಭವ ಸವಿಯಬೇಕು.ಆಗ ಸಮಾಜ ಹೆಚ್ಚು ಚೈತನ್ಯ ವಾಗಿರುತ್ತದೆ ಎಂದವರು ಹೇಳಿದರು.

ಪೆಗಾಸಸ್ ಕೃತಿ ಹೆಚ್ಚು ಹೆಚ್ಚು ನಾಡಿನಲ್ಲಿ ಜನಪ್ರಿಯತೆಯನ್ನು ಪಡೆಯಲೆಂದು ಹಾರೈಸಿದರು.

 ಸಮಾರಂಭದಲ್ಲಿ ಭಾಗವಹಿಸಿದ ಶಿಕ್ಷಣ ತಜ್ಞ ಚಿದ್ರೆ ಶಂಕರಯ್ಯ ಸ್ವಾಮಿ ಅವರು  ಈ ಕೃತಿಯ ಗರ್ಭದಲ್ಲಿ ನಿಜ ಜೀವನದ ಪುಟ್ಟ ಪುಟ್ಟ ಘಟನೆಗಳು ಸರಳ ಹಾಗೂ ಸುಂದರವಾಗಿ ಪುಟಿದೆದ್ದಿದೆ.ಇವುಗಳ‌ಲ್ಲಿ ಸಾಹಿತ್ಯದ ಕಂಪನ ಹಾಗೂ ಭಾವನಾತ್ಮಕ ಲೇಪವಿದೆ.ಹಾಸ್ಯದ ಲೇಪವಿದೆ " ಎಂದು ಹೇಳಿದರು.


ಪತ್ರಕರ್ತ ಶ್ರೀ ಬಿ.ಕೆ.ಪ್ರಸನ್ನ ಅವರು ªÀiÁ£ÀvÁr, ಸಾಹಿತ್ಯ ಕೃತಿಗಳು ನಮ್ಮ ಅರಿವಿನ ವಿಸ್ತಾರಕ್ಕೆ ಸಹಾಯಕ.  ಪುಸ್ತಕಗಳನ್ನು ಜನ ಓದಬೇಕು ಎಂದು ಕರೆ ನೀಡಿದರು.



ಪುಸ್ತಕ ವಿಮರ್ಶಿಸಿದ  ಸಂಪನ್ಮೂಲ ವ್ಯಕ್ತಿ ಶ್ರೀಮತಿ ಎನ್.ಪಿ.ವಿಜಯಲಕ್ಷ್ಮಿ ತಮ್ಮ ಎರಡು ದಶಕದ ಶಾಲಾ ಬೋಧನೆ ಅನುಭವವನ್ನು  ಅವಲೋಕನವು ಮಕ್ಕಳಲ್ಲಿ ಪ್ರೀತಿ ಹಾಗೂ ಕಾಳಜಿಯನ್ನು ಶಿಕ್ಷಕರು ತೋರಿದಲ್ಲಿ ಮಾತ್ರ ಕಲಿಕೆ ಪರಿಣಾಮಕರ ಎಂದು  ಅಭಿಪ್ರಾಯಪಟ್ಟರು. ಪೆಗಾಸಸ್ ನಲ್ಲಿನ ನೈಜ ಘಟನೆಗಳು ಎಲ್ಲರ ಕಣ್ತೆರೆಯಿಸುತ್ತದೆ ಎಂದರು

ಸಮಾರಂಭದಲ್ಲಿ ಕ.ಸಾ.ಪ ದ ಸ್ಥಳೀಯ ಶಾಖೆ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಅಂಬುಜಾಕ್ಷಿರವರು ಅಧ್ಯಕ್ಷತೆಯನ್ನು ವಹಿಸಿದ್ದರು.

ಶ್ರೀಮತಿ ಪಲ್ಲವಿ  ಭರದ್ವಾಜ್ ಅವರು ಅತಿಥಿಗಳನ್ನು ಪರಿಚಯಿಸಿದರು.‌ ಸಂಗೀತ ನಿರ್ದೇಶಕಿ ಶ್ರೀಮತಿ  ಶಿಲ್ಪಾ ಶ್ರೀ ಹಾಗೂ ವಿದ್ಯಾರ್ಥಿಗಳು ಕವಿ ಹನ್ನೆರಡು ಮಠ ಅವರ ಕವನಗಳನ್ನು ಸುಶ್ರಾವ್ಯವಾಗಿ ಹಾಡಿದರು. ಪ್ರೊ ಹನ್ನೆರಡು ಮಠ ದಂಪತಿಗಳನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಭಾರತ್ ಸ್ಕೌಟ್ಸ್-ಗೈಡ್ಸ್ ನ ಆಯುಕ್ತ ರಾಮಲತಾ, ಯುವಶ್ರೀ ತಂಡದವರು, ಬಿ.ಎಂ ಶ್ರೀ ಪ್ರತಿಷ್ಠಾನದ ರವೀಂದ್ರನಾಥ್, ಶಿಕ್ಷಣ ಸಮಾಲೋಕರಾದ ಶ್ರೀ ನಿಂಗಪ್ಪ ಮಲ್ಲೇನಹಳ್ಳಿ, ಕಾಂತರಾಜ್, ಸೂರ್ಯ ಪ್ರಕಾಶ್, ಶ್ರೀಮತಿ  ಸುಧಾ ಸಂಧ್ಯಾವಂದನಂ, ಭಾರತಿ ಜಗದೀಶ್ ಲೇಖಕರನ್ನು ಅಭಿನಂದಿಸಿದರು. ಸುಮಂತ್ ಚನ್ನಗಿರಿ ಸುಮಂತ ವಂದನೆ ಸಲ್ಲಿಸಿದರು.







Post a Comment

0 Comments

Ad Code

Responsive Advertisement