Ticker

6/recent/ticker-posts

Ad Code

Responsive Advertisement

ಸಾಕಾಗಿದೆ.... `ಮನ್‍ಕಿ ಬಾತ್’; ಬೇಕಾಗಿದೆ `ಕೇಳಿ ಜನ್ ಕಿ ಬಾತ್...’: ಆಮ್ ಆದ್ಮಿ ಪಾರ್ಟಿ

ಆಮ್ ಆದ್ಮಿ ಪಕ್ಷದ ಗಾಂಧಿನಗರ ಕ್ಷೇತ್ರದ ದತ್ತಾತ್ರೇಯ ಟೆಂಪಲ್ ವಾರ್ಡಿನ ಅಧ್ಯಕ್ಷ ಶ್ರೀ ಮೋಹನ್ ಗಜರಾಜ ರವರ ನೇತೃತ್ವದಲ್ಲಿ ಇಂದು ಮಲ್ಲೇಶ್ವರ ಸಂಪಿಗೆ ರಸ್ತೆಯ ಮಂತ್ರಿ ಮಾಲ್ ಎದುರು ತೈಲ ಬೆಲೆ ಏರಿಕೆ ಖಂಡಿಸಿ ಜನತೆಯ ಆಕೆಶವನ್ನು ಸರ್ಕಾರಕ್ಕೆ ಮುಟ್ಟಿಸಲು ಫೇಸ್ ಬುಕ್ ಲೈವ್ ಎಂಬ ವಿಭಿನ್ನ ರೀತಿಯ ಅಭಿಯಾನ ನಡೆಯಿತು. ಆಮ್ ಆದ್ಮಿ ಪಾರ್ಟಿಯ ಹಲವು ಕಾರ್ಯಕರ್ತರುಗಳ ಸಮ್ಮುಖದಲ್ಲಿ ನಡೆದ ಈ ಪ್ರತಿಭಟನೆಯ ಅಭಿಯಾನದಲ್ಲಿ ಪೆಟ್ರೋಲ್ ಬಂಕ್‍ನಿಂದ ಹೊರ ವಾಹನ ಸವಾರರು ತಮ್ಮ ನೋವನ್ನು ವ್ಯಕ್ತಪಡಿಸಿದರು.

`ಈಗಾಗಲೇ ಜನ ಸಾಮಾನ್ಯರು ಸಂಬಳಗಳಿಲ್ಲದೇ, ಅಗÀತ್ಯ ವಸ್ತುಗಳ ಬೆಲೆ ಏರಿಕೆ, ಸ್ಕೂಲ್ ಫೀಸ್ ಕಟ್ಟಲಾಗದೆ ತತ್ತರಿಸಿ ಹೋಗಿದ್ದಾರೆ. ಹೆಚ್ಚುತ್ತಿರುವ ತೈಲ ಬೆಲೆ ಜನರ ಜೇಬಿಗೆ ಕತ್ತರಿಯಾಗಿದೆ. ಕೋವಿಡ್ ಸಮಯದಲ್ಲಿ ಬೇಡಿಕೆ ಇಲ್ಲದಿರುವಾಗೂ ಅದರ ಬೆಲೆ ಕಡಿಮೆ ಆಗಲಿಲ್ಲ. ಈ ಕಚ್ಚಾ ತೈಲೆ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಡಿಮೆ ಇದ್ದರೂ ನಮ್ಮ ಭಾರತದಲ್ಲಿ ಬೆಲೆ ಇಳಿಕೆ ಕಂಡಿಲ್ಲ. ಈ ಒ0ದು ಬೆಲೆ ಏರಿಕೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರವು ಜನರ ಮೇಲೆ ಹಾಕುತ್ತಿರುವ ತೆರಿಗೆಯೇ ಮುಖ್ಯ ಕಾರಣ. ಇದು ಜನ ಸಾಮಾನ್ಯರ ಗಾಯದ ಮೇಲೆ ಬರೆಯೇ ಹೊರತು ನೆರೆ ಅಲ್ಲ ಎಂದು ದತ್ತಾತ್ರೇಯ ವಾರ್ಡಿನ ಅಧ್ಯಕ್ಷರಾದ ಮೋಹನ್ ಗಜರಾಜು ಅವರು  ಮಾಧ್ಯಮಗಳೊಂದಿಗೆ ಮಾತನಾಡುತ್ತಾ ತಿಳಿಸಿದರು.

ನಿಮ್ಮ ‘ಮನ್ ಕಿ ಬಾತ್ ಕೇಳಿ ಸಾಕಾಗಿದೆ... ದಯಮಾಡಿ ಜನ್ ಕಿ ಬಾತ್ ಕೇಳಿ ಸ್ವಾಮಿ’ ಎದು ಸರ್ಕಾರಕ್ಕೆ ಮನವಿ ಮಾಡಿದರು. ಪ್ರತಿಭಟನೆಯಲ್ಲಿ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ರಾಜಶೇಖರ್, ದೊಡ್ಡಣ್ಣ, ಉಷಾ ಮೋಹನ್, ರಾಜೇಂದ್ರ ರೆಡ್ಡಿ, ವಿಠಲ್, ಜಾನ್, ವಿಜಯ ಪ್ರಸಾದ್, ಸತೀಶ್  ಮತ್ತಿತರ ಸದಸ್ಯರು ಹಾಜರಿದ್ದರು.





Post a Comment

0 Comments

Ad Code

Responsive Advertisement