Ticker

6/recent/ticker-posts

Ad Code

Responsive Advertisement

ವಿಶ್ವ ದಾಖಲೆ ಮಾಡಲು ವಿರಾಟ್‌ ಕೊಹ್ಲಿಗೆ ಬೇಕು ಒಂದೇ ಒಂದು ಸೆಂಚುರಿ!

ಇಂಗ್ಲೆಂಡ್‌ ವಿರುದ್ಧ ಬುಧವಾರದಿಂದ ಆರಂಭವಾಗುವ ಮೂರನೇ ಹಾಗೂ ಪಿಂಕ್‌ ಬಾಲ್ ಟೆಸ್ಟ್‌ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಒಂದೇ ಒಂದು ಶತಕ ಬಾರಿಸಿದರೆ, ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್‌ ದಾಖಲೆಯೊಂದನ್ನು ಮುರಿಯಲಿದ್ದಾರೆ.

ಅಹಮದಾಬಾದ್‌ನಲ್ಲಿ ನೂತನವಾಗಿ ನಿರ್ಮಾಣವಾಗಿರುವ ವಿಶ್ವದ ಅತಿ ದೊಡ್ಡ ಕ್ರೀಡಾಂಗಣ ಮೊಟೇರಾದಲ್ಲಿ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು ಮೂರನೇ ಟೆಸ್ಟ್ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಆಡಿರುವ ಎರಡು ಪಂದ್ಯಗಳಲ್ಲಿ ಒಂದೊಂದು ಹಣಾಹಣಿಯಲ್ಲಿ ಜಯ ಸಾಧಿಸಿರುವ ಉಭಯ ತಂಡಗಳು ಟೆಸ್ಟ್ ಸರಣಿಯಲ್ಲಿ 1-1 ಸಮಬಲ ಕಾಯ್ದುಕೊಂಡಿವೆ.

ಪ್ರಸ್ತುತ ಸರಣಿಯಲ್ಲಿ ಎರಡು ಅರ್ಧಶತಕ ಸಿಡಿಸಿರುವ ವಿರಾಟ್‌ ಕೊಹ್ಲಿ, ಶತಕವಾಗಿ ಮಾರ್ಪಡಿಸುವಲ್ಲಿ ವಿಫಲರಾಗಿದ್ದಾರೆ. 2019ರ ಬಾಂಗ್ಲಾದೇಶ ವಿರುದ್ಧ ಡೇ-ನೈಟ್‌ ಟೆಸ್ಟ್ ಪಂದ್ಯದಲ್ಲಿ ಕೊನೆಯ ಶತಕ ಸಿಡಿಸಿದ್ದ ಕೊಹ್ಲಿ, ಇದಿವರೆಗೂ ಆಡಿದ 10 ಇನಿಂಗ್ಸ್‌ಗಳಲ್ಲಿ ವೈಯಕ್ತಿಕ ಮೂರಂಕಿ ಗಳಿಸುವಲ್ಲಿ ವಿಫಲರಾಗಿದ್ದಾರೆ.

Post a Comment

0 Comments

Ad Code

Responsive Advertisement