ಮೈಸೂರು:ಮೈಸೂರು
ಮಹಾನಗರ ಪಾಲಿಕೆಯ ಮೇಯರ್ ಸ್ಥಾನವನ್ನು ಸಾಮಾನ್ಯ ಮಹಿಳೆಗೆ ಮೀಸಲಾತಿ ನೀಡಿ ಹೊರಡಿಸಿರುವ
ಅಧಿಸೂಚನೆಯನ್ನು ಪ್ರಶ್ನಿಸಿ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಈ
ಕುರಿತು ಮಂಗಳವಾರವೂ ವಿಚಾರಣೆ ನಡೆಯಲಿದೆ.
ಸರಕಾರದ ಅಧಿಸೂಚನೆ ಪ್ರಶ್ನಿಸಿ
ಪಾಲಿಕೆಯ ಸದಸ್ಯ ಸಮೀವುಲ್ಲಾ ಅವರು ಅರ್ಜಿ ಸಲ್ಲಿಸಿದ್ದು, ಈ ತಕರಾರು ಅರ್ಜಿಯ
ವಿಚಾರಣೆಯನ್ನು ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ
ವಿಚಾರಣೆ ನಡೆಸಿತ್ತು. ಬಳಿಕ ಪಾಲಿಕೆ ಆಯುಕ್ತರಿಗೆ ನೋಟಿಸ್ ಜಾರಿಗೆ ಆದೇಶಿಸಿ
ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದ್ದು, ಎಲ್ಲರ ಗಮನ ಕೋರ್ಟ್ ತೀರ್ಮಾನದತ್ತ
ನೆಟ್ಟಿದೆ.
ಕಳೆದ ಮೂರು ವರ್ಷಗಳಿಂದ ಅಂದರೆ, 2018ರಿಂದ ಸತತವಾಗಿ ಮೇಯರ್
ಸ್ಥಾನವನ್ನು ಮಹಿಳೆಗೆ ಮೀಸಲಿರಿಸಲಾಗಿದೆ. 2018ರ ಎಸ್‌ಸಿ ಮಹಿಳೆ, ಸಾಮಾನ್ಯ ಮಹಿಳೆಗೆ
ಮೀಸಲು ನಿಗದಿಪಡಿಸಲಾಗಿತ್ತು. 2020ರಲ್ಲಿ ಬಿಸಿಎ ಮಹಿಳೆ ಇತ್ತು. ಈಗ ಸಾಮಾನ್ಯ ಮಹಿಳೆಗೆ
ಮೀಸಲಾತಿ ನೀಡಲಾಗಿದೆ.ಇದು ಕಾನೂನುಬಾಹಿರವಾಗಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.

0 Comments