Ticker

6/recent/ticker-posts

Ad Code

Responsive Advertisement

ಈ ಏಳು ರಾಶಿಚಕ್ರದವರು ಬೇಗನೇ ಪ್ರಸಿದ್ಧಿ ಪಡೆಯುವರು...!

ಈಗಿನ ಕಾಲದಲ್ಲಿ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ತಮ್ಮ ವೃತ್ತಿಗನುಸಾರವಾಗಿ ಪ್ರತಿಭೆಯನ್ನು ವ್ಯಕ್ತಪಡಿಸಿ ಯಶಸ್ಸು ಮತ್ತು ಕೀರ್ತಿ ಯನ್ನು ತಮ್ಮದಾಗಿಸಿಕೊಳ್ಳಲು ಯತ್ನಿಸು ತ್ತಾರೆ.ಅದಕ್ಕಾಗಿ ಏನೇನೋ ಪ್ರಯತ್ನಗಳನ್ನು ಮಾಡುತ್ತಾರೆ . ಸಾಮಾಜಿಕ ಜಾಲತಾಣ ಉಪಯೋಗಿಸುವವರಂತೂ ತಮ್ಮ ಬಗ್ಗೆ ಸ್ಟೇಟಸ್ ಹಾಕಿಕೊಂಡು ಕಾಮೆಂಟ್ಸ್ ಹಾಗು ಲೈಕ್ಸ್ ಗಾಗಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಮೊಬೈಲ್ ನೋಡಿಕೊಂಡು ಕಾದು ಕುಳಿತಿರುತ್ತಾರೆ. ಅಪ್ಪಿ ತಪ್ಪಿ ಅವರ ಅದೃಷ್ಟ ಚೆನ್ನಾಗಿದ್ದು ಅವರ ಯಾವುದಾದರೂ ಒಂದು ವಿಡಿಯೋ ಪೋಸ್ಟ್ ಮಾಡಿದ್ದರೆ ಅದಕ್ಕೆ ಸಾವಿರಾರು ಲೈಕ್ಸ್ ಬಂದು ರಾತ್ರೋರಾತ್ರಿ ಇಡೀ ವಿಶ್ವದ ತುಂಬೆಲ್ಲಾ ಪ್ರಸಿದ್ದಿ ಪಡೆಯುತ್ತಾರೆ.ಸಾಮಾಜಿಕ ಜಾಲತಾಣಕ್ಕಿರುವ ಶಕ್ತಿ ಅಂಥಹುದು. ಯಾರನ್ನು ಬೇಕಾದರೂ ಅಟ್ಟದ ಮೇಲಕ್ಕೇರಿಸುತ್ತದೆ . ಯಾರನ್ನು ಬೇಕಾದರೂ ಪಾತಾಳದ ಕೆಳಗೆ ಇಳಿಸುತ್ತದೆ.

ಯಾಕೆಂದರೆ ಒಬ್ಬ ವ್ಯಕ್ತಿ ಹಾಕಿರುವ ಪೋಸ್ಟ್ ಅನ್ನು ನೋಡಿದ ಬೇರೆಯವರು ಅದನ್ನು ಇತರರ ಜೊತೆ ಹಂಚಿ ಕೊಳ್ಳಲು ಬಯಸುತ್ತಾರೆ ಅಂತೆಯೇ ಮಾಡುತ್ತಾರೆ ಕೂಡ. ಅದನ್ನು ಪಡೆದ ಮತ್ತೊಬ್ಬರು ಅದೇ ಮಾಡುತ್ತಾರೆ.ಹಾಗಾಗಿ ವಿಶ್ವವೇ ನಮ್ಮ ಕೈಯಲ್ಲಿ ಎಂದರೆ ತಪ್ಪಾಗಲಿಕ್ಕಿಲ್ಲ .ನಿಮಗೆ ಒಮ್ಮೊಮ್ಮೆ ಅನ್ನಿಸಿರಬಹುದು. ಈ ವ್ಯಕ್ತಿ ಏನೇ ಮಾಡಿದರೂ ಅದಕ್ಕೆ ಜನಮನ್ನಣೆ ಸಿಗುತ್ತಲೇ ಇದೆಯಲ್ಲಾ .ಎಲ್ಲಾ ಕಡೆಯಿಂದಲೂ ಒಳ್ಳೆಯ ಪ್ರತಿಕ್ರಿಯೆಗಳೇ ಬರುತ್ತಿವೆಯಲ್ಲಾ. ಅಷ್ಟು ಚೆನ್ನಾಗಿದೆಯಾ ಇವನ ಅದೃಷ್ಟ ಎಂದು. ಖಂಡಿತಾ ಹೌದು. ಜ್ಯೋತಿಷ್ಯ ಶಾಸ್ತ್ರದಲ್ಲಿ ಇದಕ್ಕೆ ಉತ್ತರವಿದೆ. ಎಲ್ಲರಿಗೂ ಈ ಭಾಗ್ಯ ಸಿಗುವುದಿಲ್ಲ.

ಇದಕ್ಕೆಲ್ಲಾ ಕಾರಣ ಅವರ ಜನ್ಮ ಫಲ ಹಾಗು ರಾಶಿ ಚಕ್ರ.ಇರುವ ಹನ್ನೆರಡು ರಾಶಿಗಳಲ್ಲಿ ಕೆಲ ರಾಶಿಗಳವರು ಜೀವನದಲ್ಲಿ ಬಹಳ ಪ್ರಸಿದ್ದಿ ಪಡೆಯುತ್ತಾರೆ.ಬಹಳ ಅಭಿವೃದ್ಧಿ ಹೊಂದುತ್ತಾರೆ . ಹಾಗಾದರೆ ಯಾವ ರಾಶಿಗಳವರು ತುಂಬಾ ಅದೃಷ್ಟವಂತರು ಎಂದು ತಿಳಿದುಕೊಳ್ಳುವ ತವಕವೇ  ಇನ್ನೇಕೆ ತಡ . ನಾವು ಕೆಳಗೆ ಉಲ್ಲೇಖಿಸಿರುವ ಲೇಖನವನ್ನೊಮ್ಮೆ ಕಣ್ಣಾಡಿಸಿ ಹಾಗು ನಿಮ್ಮ ರಾಶಿ ಇದರಲ್ಲಿ ಇದೆಯೇ ಎಂಬುದನ್ನ ಖಾತ್ರಿ ಪಡಿಸಿಕೊಳ್ಳಿ. 

ಮೇಷ ರಾಶಿ ಮೇಷ ರಾಶಿಯು ಅಗ್ನಿತತ್ವಕ್ಕೆ ಸೇರಿದ ರಾಶಿಯಾಗಿದೆ. ನಿಮಗೆಲ್ಲ ಗೊತ್ತಿರುವ ಹಾಗೆ ಅಗ್ನಿ ಅಂದರೆ ಬೆಂಕಿ ಇರುವುದೇ ಉರಿ ಯುವುದಕ್ಕಾಗಿ ಎಂದು.ಅದಕ್ಕೆ ಎಂದೂ ಸೋಲಿಲ್ಲ. ಎದುರಿಗೆ ಸಿಕ್ಕದ್ದನ್ನೆಲ್ಲಾ ದಹಿಸುವ ಶಕ್ತಿ ಇದೆ.ಅಗ್ನಿಯನ್ನು ಯೋಧನಿಗೆ ಹೋಲಿಸಲಾಗಿದೆ. ಹೇಗೆ ಯೋಧ ಒಬ್ಬ ಕಮ್ಯಾಂಡರ್ ಆಗಿ ಮುನ್ನುಗ್ಗಿ ತನ್ನ ಸೈನ್ಯವನ್ನು ಮುನ್ನಡೆಸುವ ಗುಣ ಹೊಂದಿರುತ್ತಾನೋ ಮತ್ತು ಸಹಜವಾಗಿಯೇ ಪ್ರಸಿದ್ದಿ ಪಡೆಯುತ್ತಾನೋ ಆ ರೀತಿಯ ಗುಣ ಸ್ವಭಾವಗಳನ್ನು ಮೇಷ ರಾಶಿಯವರು ಹೊಂದಿ ರುತ್ತಾರೆ.ಇವರು ಈ ರೀತಿಯಲ್ಲೇ ಇತರರ ಗಮನ ತಮ್ಮತ್ತ ಸೆಳೆದು ಪ್ರಶಂಸೆ ಪಡೆಯುತ್ತಾರೆ.ಹಾಗೆ ತಮ್ಮ ನೈಜ ಹೃದಯದಿಂದ ಜನಪ್ರಿಯತೆ ಗಳಿಸುತ್ತಾರೆ.ನಿಮಗೆ ತಿಳಿದಿರುವ ಹಾಗೆ ಯಾವ ಕಡೆ ಆಕರ್ಷಣೆ ಇರುತ್ತದೋ ಆ ಕಡೆಯೇ ಶಕ್ತಿಯ ಅಲೆಗಳು ಸಂಚರಿಸುತ್ತವೆ ಎಂದು. ಅಂತೆಯೇ ಅಗ್ನಿಯ ಗುಣ ತತ್ವ ಹೊಂದಿರುವ ಮೇಷ ರಾಶಿಯವರೂ ಕೂಡ ಜನಪ್ರಿಯತೆ ಎಂಬ ತಣ್ಣನೆಯ ಅಲೆಗಳನ್ನು ತಮ್ಮತ್ತ ಸೆಳೆಯುವಲ್ಲಿ ಯಾವಾಗಲೂ ಸಫಲರಾಗುತ್ತಾರೆ. 

ಕರ್ಕಾಟಕ ರಾಶಿ ನೋಡಲು ಸುಂದರವಾಗಿರುವ ಹಾಡುವ ಕುಣಿಯುವ ಚಿತ್ರ ಬಿಡಿಸುವ ಇತ್ಯಾದಿ ಗುಣಗಳನ್ನು ಹೊಂದಿರುವ ರಾಶಿ ಯಾವುದಾದರೂ ಇದ್ದರೆ ಅದು ಕರ್ಕಾಟಕ ರಾಶಿ.ಇವರು ಕಲೆಯನ್ನು ಗೌರವಿಸುತ್ತಾರೆ.ಇವರು ಯಾವುದೇ ಕ್ರಿಯೆ ಮಾಡದಿರುವ ಸಮಯದಲ್ಲೂ ಜನರಿಂದ ಒಳ್ಳೆಯ ಪ್ರತಿಕ್ರಿಯೆಯಂತೂ ಇದ್ದೆ ಇರುತ್ತದೆ. ಅಂತಹ ಅದೃಷ್ಟ ಇವರದು.ಇವರು ಒಮ್ಮೆ ಸಾಧನೆ ಮಾಡಿ ಸುಮ್ಮನಾದರೆ ಸಾಕು ಜನರು ಇವರನ್ನು ಎಲ್ಲ ಸಮಯದಲ್ಲೂ ನೆನೆಯುತ್ತಾರೆ. ಅಂತಹ ಮರೆಯಲಾಗದ ನೆನಪಿನಲ್ಲಿ ಉಳಿಯುವಂತಹ ಒಳ್ಳೆಯ ಸಾಧನೆ ಮಾಡುವುದರಲ್ಲಿ ಕರ್ಕಾಟಕ ರಾಶಿಯವರು ಯಾವಾಗಲೂ ಮುಂದಿರುತ್ತಾರೆ. 

ಮಿಥುನ ರಾಶಿ ಮಿಥುನ ರಾಶಿಯನ್ನು ನಿಗೂಢ ರಾಶಿ ಎಂದೇ ಹೇಳಬೇಕು. ಏಕೆಂದರೆ ಮಿಥುನ ರಾಶಿಯವರು ಹೆಚ್ಚು ಮಾತನಾಡ ಬಯಸುವುದಿಲ್ಲ . ಒಂದು ವೇಳೆ ಮಾತನಾಡಿದರೆ ಅದರಲ್ಲೇ ಒಂದು ರೀತಿಯ ಛಾಪು ಮೂಡಿಸುತ್ತಾರೆ. ಅವರ ಮಾತಿನಲ್ಲಿ ಅಂತಹ ತೂಕ ಇರುತ್ತದೆ. ಅವರ ಬುದ್ಧಿವಂತಿಕೆಯ ಸಮಯೋಚಿತ ಮಾತುಗಳು ಜನರ ಮನಸ್ಸಿಗೆ ನೇರವಾಗಿ ನಾಟುತ್ತವೆ ಮತ್ತು ಇವರು ಈ ಗುಣದಿಂದಲೇ ಜೀವನದಲ್ಲಿ ಬಹಳ ಪ್ರಸಿದ್ದಿ ಪಡೆಯುತ್ತಾರೆ ಮತ್ತು ಜನರ ಹೃದಯ ಗೆಲ್ಲುತ್ತಾರೆ . ಪ್ರೀತಿ ಸಂಪಾದಿಸುತ್ತಾರೆ. ಆಗಲೇ ಹೇಳಿದಂತೆ ಇವರು ಪರಿಚಯ ಇಲ್ಲದಿರುವ ವ್ಯಕ್ತಿಗಳೊಡನೆ ಹೆಚ್ಚು ಮಾತನಾಡುವುದಿಲ್ಲ. ಅದೇ ಗೆಳೆಯರ ಮಧ್ಯದಲ್ಲಿ ಇದ್ದರೆ ಇವರದೇ ಮಾತು. ಇವರಾಡುವ ಮಾತುಗಳಿಗೆ ಮನ್ನಣೆ ಕೂಡ ಸಿಗುತ್ತದೆ ಮತ್ತು ಇದೇ ಇವರನ್ನು ಪ್ರಚಲಿತರಾಗುವಂತೆ ಮಾಡಿ ಉತ್ತುಂಗಕ್ಕೇರಿಸುತ್ತದೆ. 

ಸಿಂಹ ರಾಶಿ ಕಾಡಿನ ರಾಜ ಸಿಂಹ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ಅದು ಸುಮ್ಮನಿದ್ದರೂ ಸರಿ ಘರ್ಜಿಸಿದರೂ ಸರಿ , ಸಿಂಹಕ್ಕೆ ಸಿಂಹವೇ ಸಾಟಿ.ಅದು ತನ್ನ ಗಾಂಭೀರ್ಯ ದಿಂದಲೇ ಪ್ರಸಿದ್ದಿ ಪಡೆದಿದೆ.ಅದು ಎಲ್ಲೇ ನಿಂತಿದ್ದರೂ ಸುಮ್ಮನೆ ಕುಳಿತಿದ್ದರೂ ಕಂಡುಹಿಡಿಯಲು ಕಷ್ಟವೇ ? ಅಂತೆಯೇ ಸಿಂಹ ರಾಶಿಯವರೂ ಕೂಡ ಎಲ್ಲೇ ಇದ್ದರೂ ತಮ್ಮದೇ ಆದ ಖ್ಯಾತಿ ಹೊಂದಿರುತ್ತಾರೆ ಮತ್ತು ಅದನ್ನು ಉಳಿಸಿಕೊಳ್ಳುವುದರಲ್ಲಿ ಸಫಲರಾಗುತ್ತಾರೆ. 

ಕನ್ಯಾ ರಾಶಿ ಕನ್ಯಾ ರಾಶಿಯವರು ಬೇರೆಯವರು ತಮ್ಮ ಮೇಲೆ ಗಮನ ಹರಿಸಲಿ ಎಂದು ಕಾದು ಕೂರುವವರಲ್ಲ. ಬದಲಿಗೆ ಬೇರೆಯವರ ಗಮನ ತಮ್ಮತ್ತ ಸುಳಿಯುವಂತೆ ಮಾಡುತ್ತಾರೆ.ಇವರಿಗೆ ಯಾವ ಸಮಯದಲ್ಲಿ ಯಾವ ಶಸ್ತ್ರ ಉಪಯೋಗಿಸಿದರೆ ಯಾವ ಕೆಲಸ ಆಗುತ್ತದೆ ಎಂಬ ಅರಿವು ಚೆನ್ನಾಗಿಯೇ ಇರುತ್ತದೆ.ಇವರ ಸರಿಯಾದ ಸಮಯಪ್ರಜ್ಞೆ ಇವರನ್ನು ಎಲ್ಲಾ ಸಮಯದಲ್ಲೂ ಜನಪ್ರಿಯರನ್ನಾಗಿ ಮಾಡುತ್ತದೆ ಮತ್ತು ಅದಕ್ಕಾಗಿ ಪ್ರಯತ್ನ ಪಡುತ್ತಾರೆ . 

ವೃಶ್ಚಿಕ ರಾಶಿ ಇವರು ಬಹು ಕಾರ್ಯ ಚತುರರು. ಇವರ ಕಾರ್ಯ ವ್ಯಖರಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ.ಇದಕ್ಕೆ ಉದಾಹರಣೆಗೆ ಹೊಂದಿಕೊಳ್ಳುವ ವ್ಯಕ್ತಿಯೆಂದರೆ ಬಿಲ್ ಗೇಟ್ಸ್. ಇವರಿಗೆ ಗೌರವ ಸಂಪಾದಿಸುವುದು ಸಂಪಾದಿಸಿದ ಗೌರವವನ್ನು ಉಳಿಸಿಕೊಳ್ಳುವುದು ಇವೆಲ್ಲ ಇವರಿಗೆ ಕಷ್ಟದ ವಿಷಯವೇನಲ್ಲ. ತಮ್ಮ ಬಹುಕಾರ್ಯ ವ್ಯಕ್ತಿತ್ವದಿಂದ ಇದನ್ನು ಗಳಿಸುತ್ತಾರೆ . 

ಧನು ರಾಶಿ ಪ್ರಪಂಚದಲ್ಲಿ ಯಾವಾಗಲೂ ಖುಷಿಯಿಂದ ಪಾರ್ಟಿ ಮಾಡುತ್ತಾ , ಪ್ರಪಂಚ ಸುತ್ತುತ್ತಾ , ಯಾವಾಗಲೂ ಹೊರಗಡೆ ಕಾಲ ಕಳೆಯುತ್ತಾ ಜೀವನವನ್ನು ಮಜವಾಗಿ ನಡೆಸುವವರು ಧನು ರಾಶಿಯವರು.ಇವರು ಜನ ಬವಣಿಕೆಯ ವ್ಯಕ್ತಿಗಳು .ಯಾವಾಗಲೂ ಜನರ ಮಧ್ಯದಲ್ಲೇ ಇರಬೇಕೆಂದು ಇಚ್ಛೆ ಪಡುತ್ತಾರೆ .ಇವರು ಸಾಹಸಿ ಮನೋಭಾವದವರು ಮತ್ತು ತಮ್ಮ ಸಾಹಸಗಳಿಂದಲೇ ಜನರಿಗೆ ಚಿರಪರಿಚಿತರಾಗುತ್ತಾರೆ.ನಾನೊಬ್ಬನೇ ಬದುಕಬೇಕು ಎನ್ನುವ ಮನೋಭಾವದ ಬದಲು ನಾವೆಲ್ಲರೂ ಬದುಕಬೇಕು ಎನ್ನುವ ಮನೋಭಾವವನ್ನು ಹೊಂದಿರುವವರಾಗಿರುತ್ತಾರೆ. 

ಆಸ್ತಿಕರಿಗಿಂತ ನಾಸ್ತಿಕರೇ ಹೆಚ್ಚು ಸುಖಿಗಳಂತೆ - ಹೀಗೆನ್ನುತ್ತದೆ ಒಂದು ಅಧ್ಯಯನ!

ಸಂತೋಷವಾಗಿರಲು ಏನು ಮಾಡಬೇಕು ಎಂಬ ಪ್ರಶ್ನೆಗೆ ಪ್ರತಿ ವ್ಯಕ್ತಿಯಿಂದ ಭಿನ್ನವಾದ ಉತ್ತರ ದೊರಕುತ್ತದೆ. ಹಾಗಾಗಿ ಸಂತೋಷಕ್ಕೆ ಸ್ಪಷ್ಟವಾದ ಮೂಲವನ್ನು ಕಂಡುಕೊಳ್ಳಲು ಸಾಧ್ಯವಿಲ್ಲ, ಆದರೆ ಹೆಚ್ಚಿನ ಜನರ ನಂಬುಗೆಯನ್ನು ಕ್ರೋಢೀಕರಿಸಿದರೆ ಇವರು ಹೆಚ್ಚಾಗಿ ನಂಬುವ ಧಾರ್ಮಿಕ ಭಾವನೆಗಳು ಎಂದು ಸ್ಪಷ್ಟವಾಗಿ ಹೇಳಬಹುದು. ಇತ್ತೀಚೆಗೆ ನಡೆದ ಅಧ್ಯಯನವೊಂದರಲ್ಲಿ ಧಾರ್ಮಿಕ ನಂಬಿಕೆಗಳಿಗೆ ಬದ್ದರಾಗಿ ಅದರಂತೆಯೇ ನಡೆದು ಧರ್ಮದ ಕಟ್ಟುಪಾಡುಗಳ ಮಿತಿಯಲ್ಲಿಯೇ ಜೀವಿಸುವ ವ್ಯಕ್ತಿಗಳು ಆಸ್ತಿಕರಿಗಿಂತಲೂ ಹೆಚ್ಚು ಸುಖಿಗಳು ಮತ್ತು ಸಂತೋಷದಿಂದ ಜೀವನ ನಡೆಸುತ್ತಾರೆ ಎಂದು ಕಂಡುಕೊಳ್ಳಲಾಗಿದೆ. ಆ ಪ್ರಕಾರ ಧಾರ್ಮಿಕ ಭಾವನೆಯೊಡನೆ ಜೀವಿಸುವ ವ್ಯಕ್ತಿಗಳು ಜೀವನವಿಡೀ ಸುಖಿಗಳಾಗಿರುತ್ತಾರೆ ಎಂದು ಈ ವರದಿ ತಿಳಿಸುತ್ತದೆ.

ಪ್ಯೂ ರೀಸರ್ಚ್ ಎಂಬ ಸಂಸ್ಥೆ ಸುಮಾರು ಇಪ್ಪತ್ತನಾಲ್ಕು ದೇಶಗಳ ಸಾವಿರಾರು ವ್ಯಕ್ತಿಗಳ ಜೀವನಕ್ರಮ ಮತ್ತು ಇವರೆಷ್ಟು ಸಂತೋಷದಿಂದಿದ್ದಾರೆ ಎಂಬ ವಿಷಯದ ವಿವರಗಳನ್ನು ಕಲೆಹಾಕಿ ವಿಶ್ಲೇಷಿಸಿತು. ಇದಕ್ಕಾಗಿ ಇವರು ಒಂದು ಧರ್ಮದ ಎಲ್ಲಾ ಕಟ್ಟುಪಾಡುಗಳನ್ನು ಪಾಲಿಸುವ ನಾಸ್ತಿಕರು, ನಾಸ್ತಿಕರಾಗಿದ್ದರೂ ಧರ್ಮದ ಕೆಲವು ಕಟ್ಟುಪಾಡುಗಳನ್ನು ಮಾತ್ರವೇ ಅನುಸರಿಸುವ ಮತ್ತು ದೇವರನ್ನು ನಂಬದ ಆಸ್ತಿಕರು ಎಂಬ ಮೂರು ವಿಭಾಗಗಳನ್ನಾಗಿ ವಿಂಗಡಿಸಿ ವಿವರಗಳನ್ನು ಹೋಲಿಸಲಾಗಿತ್ತು. ಜೊತೆಗೇ ಇವರ ಆರೋಗ್ಯದ ವಿವರಗಳನ್ನೂ ಕಲೆಹಾಕಲಾಗಿತ್ತು. ಅಚ್ಚರಿಯ ವಿಷಯವೆಂದರೆ ಈ ಮೂರೂ ವಿಭಾಗಗಳ ವ್ಯಕ್ತಿಗಳಲ್ಲಿ ಆರೋಗ್ಯ ಸಂಬಂಧಿ ವಿವರಗಳಲ್ಲಿ ಯಾವುದೇ ತಾಳಮೇಳವಾಗಲೀ ಹೋಲಿಕೆಯಾಗಲೀ ಕಂಡುಬಂದಿರಲಿಲ್ಲ. (ಉದಹಾರಣೆಗೆ ಸ್ಥೂಲಕಾಯ, ಬಿ ಎಂ ಐ, ಆನಾರೋಗ್ಯ ಬಾಧಿಸುವ ಸಾಧ್ಯತೆ ಇತ್ಯಾದಿ). 

ಆದರೆ ಭಾವನಾತ್ಮಕವಾಗಿ ಆಸ್ತಿಕ ವ್ಯಕ್ತಿಗಳು ಹೆಚ್ಚು ಸಂತೋಷದಿಂದ ಇರುವುದು ಮತ್ತು ಜೀವನದಲ್ಲಿ ಧನಾತ್ಮಕ ಧೋರಣೆ ತಳೆದಿರುವುದು ಮಾತ್ರ ಸ್ಪಷ್ಟವಾಗಿ ಕಂಡುಬಂದಿತ್ತು. ತನ್ಮೂಲಕ ಇವರಲ್ಲಿ ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಂಡುಬಂದಿತ್ತು. ಒಟ್ಟಾರೆಯಾಗಿ ಹೇಳಬೇಕೆಂದರೆ ಆಸ್ತಿಕರಲ್ಲಿ ಸುಮಾರು ಮುಕ್ಕಾಲು ಪಾಲು ಜನರು ತಾವು ಸಂತೋಷದಿದ್ದೇವೆ ಮತ್ತು ಜೀವನವನ್ನು ಸುಖವಾಗಿ ಅನುಭವಿಸುತ್ತೇವೆ ಎಂದು ತಿಳಿಸಿದ್ದಾರೆ. ವಿಜ್ಞಾನಕ್ಕೆ ಈ ವ್ಯಕ್ತಿಗಳ ಧಾರ್ಮಿಕ ಭಾವನೆಗೂ ಸಂತೋಷದಿಂದಿರುವುದಕ್ಕೂ ನೇರವಾದ ಯಾವುದೇ ಸಂಬಂಧವನ್ನು ವಿವರಿಸಲು ಸಾಧ್ಯವಾಗಿಲ್ಲ. ಆದರೆ ಈ ಸಮೀಕ್ಷೆಯ ವಿವರಗಳು ಮಾತ್ರ ಈ ವಿಷಯವನ್ನೇ ಸಾಕ್ಷಿ ಸಮೇತ ಸ್ಪಷ್ಟಪಡಿಸುತ್ತಿವೆ. ಈ ವಿವರಗಳು ಎಲ್ಲಾ ಇಪ್ಪತ್ತನಾಲ್ಕು ದೇಶಗಳ ವ್ಯಕ್ತಿಗಳಲ್ಲಿಯೂ ಹೆಚೂ ಕಡಿಮೆ ಏಕಪ್ರಕಾರವಾಗಿದ್ದುದೂ ಇನ್ನೊಂದು ಅಚ್ಚರಿಯಾಗಿದೆ. 


ಮಾನವರ ಮನಸ್ಸಿನ ಮೇಲೆ ನೇರವಾದ ಪ್ರಭಾವವನ್ನು ಬೀರಬಲ್ಲ ಅಂಶಗಳಲ್ಲಿ ಧರ್ಮ ಪ್ರಮುಖವಾಗಿದೆ. ಕೆಲವು ಕಾರ್ಯಗಳನ್ನು ನಿರ್ವಹಿಸಲು ಮತ್ತು ನಿರ್ವಹಿಸದೇ ಇರಲು ಧರ್ಮ ವಿಧಿಸಿದ ಕಟ್ಟುಪಾಡುಗಳು ಈ ವ್ಯಕ್ತಿಗಳು ತಮಗೊಂದು ಮಿತಿಯನ್ನು ಹೇರಿಕೊಂಡು ಗುರಿಯೊಂದನ್ನು ಸಾಧಿಸಲು ನೆರವಾಗುತ್ತದೆ ಹಾಗೂ ಕಟ್ಟುಪಾಡುಗಳನ್ನು ಮೀರದೇ ಜೀವನ ನಡೆಸುವ ಬಗ್ಗೆ ಸಂತೋಷದಿಂದಿರಲು ಸಾಧ್ಯವಾಗುತ್ತದೆ. ಅಲ್ಲದೇ ತಾನು ಪಾಲಿಸುತ್ತಿರುವ ಧರ್ಮವನ್ನು ಇತರ ವ್ಯಕ್ತಿಗಳೂ ಅನುಸರಿಸುವ ಕಾರಣ ಇವರ ಸಹಚರನಾಗಿರುವ ಭಾವನೆ ಒಬ್ಬಂಟಿತನ ಮತ್ತು ಖಿನ್ನತೆಯಿಂದ ಕಾಪಾಡುತ್ತದೆ. ಅಧ್ಯಯನದ ಪ್ರಕಾರ ಧಾರ್ಮಿಕ ಭಾವನೆಯನ್ನು ಒಂದು ಶಕ್ತಿಯ ಅಥವಾ ನಂಬಿಕೆಗೆ ಕೇಂದ್ರೀಕರಿಸುವ ಮೂಲಕ ವ್ಯಕ್ತಿಗಳಿಗೆ ಜೀವನದಲ್ಲಿ ಮಾನವ ಸಂಗಾತಿಯ ಕೊರತೆಯುಂಟಾಗುವುದು ತಪ್ಪುತ್ತದೆ. ಅಲ್ಲದೇ ಧರ್ಮ ವಿಧಿಸುವ ನೈತಿಕ ಮೌಲ್ಯಗಳನ್ನು ಪಾಲಿಸುವುದರಿಂತಲೂ ಸಂತೋಷ ಹೆಚ್ಚುತ್ತದೆ. 

ಧರ್ಮಕ್ಕೆ ಹೆಚ್ಚಿನ ಮಹತ್ವ ನೀಡಲು ಇನ್ನೊಂದು ಕಾರಣವೆಂದರೆ ಧರ್ಮದ ಪಾಲನೆಯಿಂದ ಪಡೆಯುವ 'ತೃಪ್ತಿಯ ಭಾವನೆ'. ದೇವರಲ್ಲಿ ಪ್ರಾರ್ಥಿಸುವ ವೇಳೆಯಲ್ಲಿ ಅನುಭವಿಸುವ ತನ್ಮಯತೆ, ತಪಸ್ಸು ಮನಸ್ಸಿಗೆ ಉಪಶಮನಕಾರಕ ಅಥವಾ ಣಡಿಚಿಟಿquiಟizeಡಿ ನಂತಹ ಪರಿಣಾಮವನ್ನು ಬೀರುತ್ತದೆ ಎಂದು ತಜ್ಞರು ಗಮನಿಸಿದ್ದಾರೆ. ಧಾರ್ಮಿಕ ಕಾರಣಗಳಿಂದಲೇ ಆಗಲಿ, ಸಮಾಜದ ಇತರ ವ್ಯಕ್ತಿಗಳಿಗೆ ನೆರವಾಗುವ ಅಥವಾ ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಮೂಲಕ ಪಡೆಯುವ ಧನ್ಯತಾ ಭಾವನೆ ಮೆದುಳಿನ ಒಂದು ಭಾಗದಲ್ಲಿ ಪ್ರಚೋದನೆ ಒದಗಿಸುತ್ತದೆ ಹಾಗೂ ಈ ಪ್ರಚೋ ದನೆ ಡೋಪಮೈನ್ ಎಂಬ ಮುದಗೊಳಿಸುವ ರಸದೂತವನ್ನು ಹೆಚ್ಚು ಉತ್ಪಾದಿಸಲು ಕಾರಣ ವಾಗುತ್ತದೆ. ಪರಿಣಾಮವಾಗಿ ನೆಮ್ಮದಿ ಹಾಗೂ ಸಂತೋಷ ಮನದಲ್ಲಿ ನೆಲೆಸುತ್ತದೆ. ಅಲ್ಲದೇ ಧಾರ್ಮಿಕ ವ್ಯಕ್ತಿಗಳು ಇತರರಿಗಿಂತ ಉತ್ತಮ ಆರೋಗ್ಯ ಹೊಂದಿರುತ್ತಾರೆ ಮತ್ತು ಹೆಚ್ಚಿನ ಆಯ್ಕೆಗಳನ್ನು ಪಡೆದಿರುತ್ತಾರೆ ಎಂದೂ ಈ ವರದಿ ತಿಳಿಸುತ್ತದೆ. 

ಉದ್ವೇಗ, ಮಾನಸಿಕ ಉನ್ಮಾದ, ಜೀವನದ ತೊಂದರೆ, ಹೊಸ ಸವಾಲುಗಳು, ಮಾನಸಿಕ ಒತ್ತಡ ಮೊದಲಾದ ಹಲವಾರು ತೊಂದರೆಗಳಿಗೆ ಧಾರ್ಮಿಕ ಶರಣಾಗತಿ, ಅಥವಾ ದೇವರಲ್ಲಿ ಮೊರೆ ಹೊಕ್ಕು ಸಹಾಯವನ್ನು ಯಾಚಿಸುವ ಮೂಲಕ ಹೆಚ್ಚು ಹೆಚ್ಚಾಗಿ ಮಾನಸಿಕರಾಗಿ ದೃಢರಾಗಲು ನೆರವಾಗುತ್ತದೆ. ಈ ಸತ್ಯವನ್ನು ಕಂಡುಕೊಂಡ ಎಷ್ಟೋ ಮನಃಶಾಸ್ತ್ರಜ್ಞರು ಮತ್ತು ಚಿಕಿತ್ಸಕರು ದೇವರನ್ನು ನಂಬಿ ಎಂಬ ಸಲಹೆಯನ್ನೂ ತಮ್ಮ ಚಿಕಿತ್ಸೆಯ ಜೊತೆಗೇ ನೀಡುತ್ತಾರೆ. ಈ ಮೂಲಕ ಹೃದಯದ ಮೇಲಿನ ಭಾರವನ್ನು ಇಳಿಸಿ ಮಾನಸಿಕ ಉದ್ವೇಗವನ್ನೂ ತಗ್ಗಿಸಿ ಶೀಘ್ರವೇ ಗುಣಮುಖರಾಗಲೂ ಕಾರಣವಾಗುತ್ತದೆ. 

https://youtu.be/6MRcleKXBYw

Post a Comment

0 Comments

Ad Code

Responsive Advertisement