Ticker

6/recent/ticker-posts

Ad Code

Responsive Advertisement

ದೆಹಲಿಯ ಸರ್ಕಾರಿ ವಾಹನಗಳು ವಿದ್ಯುತ್ ಚಾಲಿತ: ಮುಖ್ಯಮಂತ್ರಿ ಕೇಜ್ರಿವಾಲ್

ನವದೆಹಲಿ : ಮುಂದಿನ ಆರು ತಿಂಗಳಲ್ಲಿ ದೆಹಲಿಯ ಎಲ್ಲಾ ಸರಕಾರೀ ವಾಹನಗಳು ವಿದ್ಯುತ್ ಚಾಲಿತವಾಗಲಿವೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

ದೆಹಲಿ ಸರ್ಕಾರದ ಯಾವುದೇ ಇಲಾಖೆ ಮತ್ತು ಸ್ವಾಯತ್ತ ಸಂಸ್ಥೆ ಹಣಕಾಸು ಇಲಾಖೆಯ ಅನುಮತಿಯೊಂದಿಗೆ ಮೊದಲ ಬಾರಿಗೆ ಎಲೆಕ್ಟ್ರಿಕ್ ವಾಹನವನ್ನು ಬಾಡಿಗೆಗೆ ಪಡೆಯಬಹುದು. ಬಳಿಕ ಅಸ್ತಿತ್ವದಲ್ಲಿರುವ ಒಪ್ಪಂದವನ್ನು ವಿಸ್ತರಿಸಲು ಅನುಮತಿ ಅಗತ್ಯವಿಲ್ಲ ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.

ಸಾರಿಗೆ ಇಲಾಖೆಯು ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಯಿಸುವುದನ್ನು ನೋಡಿಕೊಳ್ಳುತ್ತದೆ. ಎಲೆಕ್ಟ್ರಿಕ್ ವಾಹನಗಳಿಗೆ ಪರಿವರ್ತನೆ ಹೇಗೆ ನಡೆಯುತ್ತಿದೆ ಎಂಬುದರ ಕುರಿತು ಎಲ್ಲಾ ಇಲಾಖೆಗಳು ಪ್ರತಿ ತಿಂಗಳು ಸಾರಿಗೆ ಇಲಾಖೆಗೆ ವರದಿ ನೀಡುತ್ತವೆ. ಅಂತರವನ್ನು ಗುರುತಿಸುತ್ತವೆ ಹಾಗೆಯೇ ಆರು ತಿಂಗಳುಗಳಲ್ಲಿ ಗುರಿಯನ್ನು ಪೂರೈಸಲು ಸಲಹೆ ನೀಡುತ್ತದೆ.

ಕಳೆದ ಆಗಸ್ಟ್‍ನಲ್ಲಿ ದೆಹಲಿ ಸರ್ಕಾರವು ಎಲೆಕ್ಟ್ರಿಕ್ ವಾಹನ ನೀತಿಯನ್ನು ಘೋಷಿಸಿದ್ದು,ನಗರವನ್ನು ಭಾರತದ ಎಲೆಕ್ಟ್ರಿಕ್ ರಾಜಧಾನಿಯನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ.

ದೆಹಲಿಯ ವಾಯು ಮಾಲಿನ್ಯ, ಗುಣಮಟ್ಟ ಗಮನಾರ್ಹವಾಗಿ ಸುಧಾರಿಸಲು ಮತ್ತು 2024ರ ವೇಳೆಗೆ ಎಲ್ಲಾ ಹೊಸ ವಾಹನಗಳಲ್ಲಿ ಕನಿಷ್ಠ ಶೇ.25ರಷ್ಟು ಬ್ಯಾಟರಿ ಚಾಲಿತವಾಗಿರಲಿದೆ ಎಂಬ ಹೇಳಿಕೆ ನೀಡಿದ್ದಾರೆ.

ರಾಷ್ಟ್ರರಾಜಧಾನಿಯಲ್ಲಿನ ಗಾಳಿಯ ಗುಣಮಟ್ಟವು ವಿಶೇವಾಗಿ ಚಳಿಗಾಲದ ಸಮಯದಲ್ಲಿ ಮತ್ತಷ್ಟು ಕಳಪೆಯಾಗುತ್ತದೆ. ಸಮ-ಬೆಸ ಯೋಜನೆಯನ್ನು ಕೂಡ ಜಾರಿಗೆ ತಂದಿದೆ.


ನಗರದಲ್ಲಿ ವಾಹನಗಳಿಂದಾಗುವ ವಾಯುಮಾಲಿನ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ.



Post a Comment

0 Comments

Ad Code

Responsive Advertisement