Ticker

6/recent/ticker-posts

Ad Code

Responsive Advertisement

80ನೇ ವಯಸ್ಸಿನಲ್ಲಿ ಪಿ.ಎಚ್.ಡಿ.ಪಡೆದ ಮಧ್ಯ ಪ್ರದೇಶದ ಶಶಿಕಲಾ ರಾವಲ್!

 'ಕಲಿಯೋಕೆ ವಯಸ್ಸಿನ ಹಂಗಿಲ್ಲ' ಮತ್ತು 'ಕಲಿಕೆ ಎನ್ನುವುದು ಸಮುದ್ರದಂತೆ ಅದಕ್ಕೆ ಕೊನೆಯೇ ಇಲ್ಲ' ಎನ್ನುವ ಮಾತುಗಳನ್ನು ನಾವೆಲ್ಲ ಆಗಾಗ ಕೇಳುತ್ತಿರುತ್ತೇವೆ. ಈ ಮಾತನ್ನು ಇಲ್ಲೊಬ್ಬರು ನಿಜ ಮಾಡಿ ತೋರಿಸಿದ್ದಾರೆ. ಹೌದು, ತಮ್ಮ 80ನೇ ವಯಸ್ಸಿನಲ್ಲಿಯೂ ಸಂಸ್ಕೃತ ಭಾಷೆಯಲ್ಲಿ Phಆ ಪದವಿ ಪಡೆದು ಇತರರಿಗೆ ಸ್ಪೂರ್ತಿ ಆಗಿದ್ದಾರೆ.

ಅವರ ಹೆಸರು ಶಶಿಕಲಾ ರಾವಲ್, ವಿಕ್ರಮ್ ವಿಶ್ವವಿದ್ಯಾಲಯದ 24ನೇ ಸಮ್ಮೇಳನ ಸಮಾರಂಭದಲ್ಲಿ ಶಶಿಕಲಾ ರಾವಲ್ ಅವರಿಗೆ ಸಂಸ್ಕೃತದಲ್ಲಿ Phಆ ನೀಡಿ ಅವರನ್ನು ಗೌರವಿಸಲಾಯಿತು. ತಮ್ಮ 80ನೇ ಇಳಿ ವಯಸ್ಸಿನಲ್ಲಿ Phಆ ಪಡೆದ ಅವರನ್ನು ಕಂಡು ಸಮ್ಮೇಳನದಲ್ಲಿನ ಅನೇಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಉಜ್ಜಯಿನಿಯ ನಿವಾಸಿಯಾದ ಶಶಿಕಲಾ ರಾವಲ್ ಅವರು ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯ ನಿವೃತ್ತ ಉಪನ್ಯಾಸಕಿ ಆಗಿದ್ದವರು. ಅವರು ನಿವೃತ್ತಿಯಾದ ನಂತರವೂ ಕಲಿಕೆಯನ್ನು ಮುಂದುವರೆಸಿದರು. ಈ ಹಿಂದೆ 2009ರಿಂದ 2011ರವರೆಗೆ ಜ್ಯೋತಿಷ್ಯಶಾಸ್ತ್ರದಲ್ಲಿ ಎಂಎ ಪದವಿ ಪಡೆದು ಕೆಲವರನ್ನು ಬೆರಗುಗೊಳಿಸಿದ್ದರು.

ಅಷ್ಟಕ್ಕೆ ಅವರ ಕಲಿಕೆಯ ತೃಷೆ ನಿಲ್ಲಲಿಲ್ಲ. ತಮ್ಮ ಅಧ್ಯಯನವನ್ನು ಮತ್ತಷ್ಟು ಮುಂದುವರೆಸಿದ ಅವರು, ವರಹಮಿಹಿರ ಅವರ ಜ್ಯೋತಿಷ್ಯಶಾಸ್ತ್ರದ ಗ್ರಂಥವಾದ 'ಬೃಹತ್ ಸಂಹಿತಾ' ಕುರಿತು ಸಂಸ್ಕೃತದಲ್ಲಿ Phಆ ಮಾಡಬೇಕು ಎನ್ನುವ ಹಂಬಲ ಅವರಲ್ಲಿ ಚಿಗುರೊಡೆಯಿತು. ಹೀಗಾಗಿ ಅವರು 2019ರಲ್ಲಿ ಯಶಸ್ವಿಯಾಗಿ ತಮ್ಮ ಕನಸಿನ Phಆ ಪೂರೈಸಿದರು.

'ಬೃಹತ್ ಸಂಹಿತಾ ಹಿನ್ನೆಲೆಯಲ್ಲಿ ಸಾಮಾಜಿಕ ಜೀವನ' ಎನ್ನುವ ವಿಷಯ ಮೇಲೆ ಅವರು ಪಿಎಚ್ಡಿ ಪಡೆದು ಇದೀಗ ಸುದ್ದಿಯಾಗಿದ್ದಾರೆ. ಮಹರ್ಷಿ ಪಾಣಿನಿ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಮಿಥಿಲಾ ಪ್ರಸಾದ್ ತ್ರಿಪಾಠಿ ಶಶಿಕಲಾ ಅವರಿಗೆ ಪಿಎಚ್ಡಿ ಮಾರ್ಗದರ್ಶನ ಮಾಡಿದ್ದಾರೆ.

ವಿಕ್ರಮ್ ವಿಶ್ವವಿದ್ಯಾಲಯದ 24ನೇ ಸಮ್ಮೇಳನ ಸಮಾರಂಭದಲ್ಲಿ ಶಶಿಕಲಾ ಅವರಿಗೆ ಪದವಿ ಪ್ರದಾನ ಮಾಡುವಾಗ, ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು ಶಶಿಕಲಾ ಸಾಧನೆ ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. "80ರ ಇಳಿವಯಸ್ಸಿನಲ್ಲಿಯೂ ನೀವು Phಆ ಮಾಡಿದ್ದು ಪ್ರತಿಯೊಬ್ಬ ವಿದ್ಯಾರ್ಥಿಗೂ ಮಾದರಿ" ಎಂದು ಶ್ಲಾಘಿಸಿದರು.ಈ ಸಮ್ಮೇಳನದಲ್ಲಿ ಒಟ್ಟು 342 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಅಲ್ಲದೇ 239 ವಿದ್ಯಾರ್ಥಿಗಳಿಗೆ Phಆ ನೀಡಲಾಯಿತು. ಅದರಲ್ಲಿ ವಿಶೇಷ ಎಂದರೆ ಶಶಿಕಲಾ. ಇನ್ನುಳಿದ 69 ಮಂದಿಗೆ ಸ್ನಾತಕೋತ್ತರ ಪ್ರಮಾಣ ಪತ್ರ ಹಾಗೂ 34 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ಹೆಚ್ಚಿನ ಜನರು ವಿಶ್ರಾಂತಿ ಪಡೆಯಲು ಬಯಸುವ ವಯಸ್ಸಿನಲ್ಲಿ ನೀವ್ಯಾಕೆ Phಆ ಮಾಡೋಕೆ ಬಯಸಿದಿರಿ ಎನ್ನುವ ಪ್ರಶ್ನೆಗೆ, "ನನಗೆ ಯಾವಾಗಲೂ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ. ಜೋತಿಷ್ಯ ನನ್ನ ಇಷ್ಟದ ವಿಷಯ. ಹೀಗಾಗಿಯೇ ನಾನು ಜೋತಿಷ್ಯದಲ್ಲಿ ಎಂಎ ಮಾಡಿದ್ದೇನೆ. ಇದಾದ ಮೇಲೆ ಮತ್ತಷ್ಟು ಓದಬೇಕು ಎನಿಸಿತು. ಹೀಗಾಗಿ Phಆ ಮಾಡಿದೆ" ಎನ್ನುತ್ತಾರೆ ಶಶಿಕಲಾ.



ಜೋತಿಷ್ಯಶಾಸ್ತ್ರ ಓದಿದ್ದರಿಂದ ಅವರ ಆಲೋಚನಾ ಲಹರಿ ಬೇರೆಯದೇ ರೀತಿಯಲ್ಲಿ ತೆರೆದುಕೊಂಡಿದೆ ಎನ್ನುತ್ತಾರೆ ಅವರು. ಅಲ್ಲದೇ ನಕ್ಷೆಯ ಮುಖಾಂತರ ನಾವು ಹೇಗೆ ನಮ್ಮ ಪ್ರಯಾಣದ ಗುರಿಯನ್ನು ಬೇಗ ಮುಟ್ಟಬಹುದೋ, ಹಾಗೆಯೇ ಜೋತಿಷ್ಯಶಾಸ್ತ್ರ ಪ್ರತಿಯೊಬ್ಬರ ಜೀವನದಲ್ಲಿ ತುಂಬಾ ಪ್ರಾಮುಖ್ಯತೆ ಪಡೆದಿದೆ ಎನ್ನುತ್ತಾರೆ ಶಶಿಕಲಾ. ಅಲ್ಲದೇ ತಮ್ಮ ಜ್ಞಾನವನ್ನು ಸಾರ್ವಜನಿಕ ಹಿತಾಸಕ್ತಿಗೆ ಬಳಸುತ್ತೇನೆ ಎಂದಿದ್ದಾರೆ.

ವಯಸ್ಸಾಯ್ತು ಏನೂ ಮಾಡೋಕೆ ಆಗೋದಿಲ್ಲ ಎಂದು ಕೈಕಟ್ಟಿ ಕುಳಿತುಕೊಳ್ಳುವವರಿಗೆ, ಮನಸ್ಸಿದ್ದರೆ ಮಾರ್ಗವಿದೆ ಎಂದು ಶಶಿಕಲಾ ತೋರಿಸಿಕೊಟ್ಟಿದ್ದಾರೆ.

Post a Comment

0 Comments

Ad Code

Responsive Advertisement